ಇದು ಮಗನ ರಾಜಕೀಯ ಭವಿಷ್ಯ- ಟಿಕೆಟ್‍ಗಾಗಿ ಸಿಎಂಗೆ ದುಂಬಾಲು ಬಿದ್ದ ಮಹದೇವಪ್ಪ

Public TV
1 Min Read

ಬೆಂಗಳೂರು: ಮಗ ಸುನೀಲ್ ಬೋಸ್‍ಗೆ ಲೋಕಸಭಾ ಟಿಕೆಟ್‍ಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಹೆಚ್.ಸಿ ಮಹದೇವಪ್ಪ (HC Mahadevappa) ದುಂಬಾಲು ಬಿದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸಿಎಂ ಸಿದ್ದರಾಮಯ್ಯ ಮುಂದೆ ಸಚಿವ ಹಾಗೂ ಒಂದು ಕಾಲದ ಸಿದ್ದರಾಮಯ್ಯ ಪರಮ ಆಪ್ತ ಮಹಾದೇವಪ್ಪ ನೋವಿನ ಮಾತನಾಡಿದ್ದಾರೆ. ಏನಾದರು ಮಾಡಿ ಇದೊಂದು ಬಾರಿ ಮಗನಿಗೆ ಟಿಕೆಟ್ ಕೊಡಿಸಿಬಿಡಿ ಎಂದು ಭಾವನಾತ್ಮಕವಾಗಿ ಮನವಿ ಮಾಡಿದ್ದಾರೆ.

ಮಗನಿಗೆ ಟಿಕೆಟ್ ಸಿಗದಿದ್ದರೆ ವೈಯಕ್ತಿಕವಾಗಿ ನನಗೆ ಕಷ್ಟವಾಗಲಿದೆ. ಕೈಹಿಡಿಯಿರಿ ಮಗನಿಗೆ ಟಿಕೆಟ್ ಕೊಡಿಸಿ ಎಂದು ಸಿದ್ದರಾಮಯ್ಯ ಬಳಿ ಮನವಿ ಮಾಡಿಕೊಂಡಿದ್ದಾರೆ. ಆ ಒಂದು ಭಯ ಆ ಒಂದು ಆತಂಕ. ಸಿಎಂ ಮುಂದೆ ವ್ಯಕ್ತಪಡಿಸಿದ್ದಾರೆ. ಮಗನಿಗೆ ಹಿಂದೆಯು ಎಂಎಲ್ ಎ ಟಿಕೆಟ್ ತಪ್ಪಿದೆ ಈಗಲೂ ಲೋಕಸಭಾ ಟಿಕೆಟ್ ಕೈ ತಪ್ಪಿದರೆ ಅವನ ರಾಜಕೀಯ ಜೀವನಕ್ಕೆ ಅಡ್ಡಿಯಾಗಲಿದೆ. ನನ್ನ ಸಮಸ್ಯೆ ಅರ್ಥ ಮಾಡಿಕೊಳ್ಳಿ ಎಂದು ಮಗನ ಬಗ್ಗೆ ಭಾವನಾತ್ಮಕವಾಗಿ ಸಚಿವ ಮಹಾದೇವಪ್ಪ ಮಾತನಾಡಿದ್ದಾರೆ.

ಒಟ್ಟಾರೆ ಈ ಬಾರಿ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಲೇಬೇಕು ಎಂದು ಸಿಎಂ ಸಿದ್ದರಾಮಯ್ಯ ಬಳಿ ಸಾಕಷ್ಟು ಭಾವನಾತ್ಮಕವಾಗಿ ಮನವಿ ಮಾಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿ ಲಭ್ಯವಾಗಿದೆ. ಇದನ್ನೂ ಓದಿ: ಒಬ್ಬೊಬ್ಬ ಶಾಸಕನಿಗೂ ಬಿಜೆಪಿಯವ್ರಿಂದ 50 ಕೋಟಿ ಆಫರ್: ಸಿಎಂ ಗಂಭೀರ ಆರೋಪ

Share This Article