ಬೊಜ್ಜು ಕರಗಿಸೋ ಶಸ್ತ್ರಚಿಕಿತ್ಸೆ ನಂತರ ಮೆಕ್ಸಿಕನ್ ಮಾಡೆಲ್ ನಿಧನ

Public TV
1 Min Read

ಮೆಕ್ಸಿಕನ್ ಮಾಡೆಲ್, ಸೋಷಿಯಲ್ ಮೀಡಿಯಾ ಸ್ಟಾರ್ ಎಲಿನಾ ಲರಿಯಾ (Elena Larrea) ಇದೀಗ ಬೊಜ್ಜು ಕರಗಿಸೋ ಶಸ್ತ್ರಚಿಕಿತ್ಸೆಯ ಪರಿಣಾಮ ನಿಧನರಾಗಿದ್ದಾರೆ. 31 ವಯಸ್ಸಿಗೆ ನಿಧನರಾಗಿರುವ (Died) ಎಲಿನಾಗೆ, ಆಪ್ತರು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಆಗಿ ಗುರುತಿಸಿಕೊಂಡಿದ್ದ ಎಲಿನಾ ಲರಿಯಾ ಇತ್ತೀಚೆಗೆ ಬೊಜ್ಜು ಕರಗಿಸೋ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದರಿಂದ ರಕ್ತ ಹೆಪ್ಪುಗಟ್ಟುವಿಕೆಯಿಂದ ಎಲಿನಾ ಸಾವನಪ್ಪಿದ್ದಾರೆ. ಮಾರ್ಚ್ 19ರಂದು ಮಧ್ಯಾಹ್ನ 3:30ಕ್ಕೆ ಈ ಘಟನೆ ಸಂಭವಿಸಿದ್ದು, ಈ ಬಗ್ಗೆ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

 

View this post on Instagram

 

A post shared by Elena Larrea (@elenaypunto)

ಇನ್ನೂ 7 ವರ್ಷಗಳ ಹಿಂದೆ ಎಲಿನಾ ಕ್ವಾಕೊಲಾಂಡಿಯಾದಲ್ಲಿ ಕುದುರೆ ಅಭಯಾರಣ್ಯವನ್ನು ಸ್ಥಾಪಿಸಿದ್ದರು. ಕೆಲವರು ಸಾಕಲಾರದೇ ಕೈಬಿಟ್ಟ ಕುದುರೆ, ಕತ್ತೆಗಳನ್ನು ರಕ್ಷಿಸಿ ಎಲಿನಾ ಅವರೇ ನೋಡಿಕೊಳ್ಳುತ್ತಿದ್ದರು. ಇದನ್ನೂ ಓದಿ:ಅಕ್ರಮ ಮಗು ದತ್ತು: ಸೋನು ಶ್ರೀನಿವಾಸ್ ಗೌಡ ಬಂಧನ

ಸದಾ ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲಾ ಫೋಟೋ ಶೇರ್ ಮಾಡುವ ಮೂಲಕ ಎಲಿನಾ ಲರಿಯಾ ಗುರುತಿಸಿಕೊಂಡಿದ್ದರು. ಮಾಡೆಲಿಂಗ್ ಕ್ಷೇತ್ರದಲ್ಲೂ ಎಲಿನಾ ಲಾರಿಯಾ ಜನಪ್ರಿಯತೆ ಗಳಿಸಿದ್ದರು. ಇದೀಗ ಅವರ ಹಠಾತ್ ನಿಧನ ಕುಟುಂಬಕ್ಕೆ ಶಾಕ್ ಕೊಟ್ಟಿದೆ.

Share This Article