ಕುಟುಂಬದ ಯಜಮಾನಿ ಖಾತೆಗೆ ತಿಂಗಳಿಗೆ 3,000 ರೂ. – ಪ್ರಣಾಳಿಕೆಯಲ್ಲಿ ಎಐಎಡಿಎಂಕೆ ಗ್ಯಾರಂಟಿ

Public TV
1 Min Read

ಮುಂಬೈ: ಚುನಾವಣೆಯಲ್ಲಿ ಗೆಲ್ಲಲು ಕರ್ನಾಟಕ ಕಾಂಗ್ರೆಸ್‌ ಘೋಷಿಸಿದ್ದ ಗ್ಯಾರಂಟಿ ಯೋಜನೆ ತಂತ್ರಗಾರಿಕೆಯನ್ನು ಅನೇಕ ರಾಜ್ಯಗಳು ಅನುಸರಿಸುತ್ತಿವೆ. ಕರ್ನಾಟಕ ಮಾದರಿಯ ಗೃಹಲಕ್ಷ್ಮಿ ಯೋಜನೆ ಜಾರಿಗೆ ತಮಿಳುನಾಡಿನ (Tamil Nadu) ಎಐಎಡಿಎಂಕೆ (AIADMK) ಪಕ್ಷ ಮುಂದಾಗಿದೆ.

ಲೋಕಸಭಾ ಚುನಾವಣೆಗೆ (Lok Sabha Election 2024) ಪಕ್ಷ ಸಿದ್ಧವಾಗುತ್ತಿದ್ದು, ಪ್ರಾಣಳಿಕೆ ಬಿಡುಗಡೆ ಮಾಡಿದೆ. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಪಕ್ಷದ ಪ್ರಧಾನ ಕಚೇರಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿರಲಿ, ಹೊರಗಿರಲಿ ನನ್ನ ಜೀವನ ದೇಶಕ್ಕೆ ಸಮರ್ಪಿತ: ಕೇಜ್ರಿವಾಲ್‌

ಬಡ ಕುಟುಂಬಗಳ ಯಜಮಾನಿಗೆ ಮಾಸಿಕ 3,000 ರೂ. ಹಣ ನೀಡಲಾಗುವುದು. ಪ್ರಣಾಳಿಕೆಯು ಆರ್ಥಿಕ ಅಸಮಾನತೆಗಳನ್ನು ಪರಿಹರಿಸುವ ಬದ್ಧತೆ ಹೊಂದಿದೆ ಎಂದು ಪಕ್ಷವು ತಿಳಿಸಿದೆ.

ಎಐಎಡಿಎಂಕೆಯು ಚೆನ್ನೈನಲ್ಲಿ ಸುಪ್ರೀಂ ಕೋರ್ಟ್‌ನ ಪ್ರಾದೇಶಿಕ ಪೀಠವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಅದೇ ನಗರದಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಆಯೋಜಿಸುತ್ತದೆ ಎಂದು ಹೇಳಿದೆ. ಇದನ್ನೂ ಓದಿ: ಮದ್ಯದ ವಿರುದ್ಧ ಧ್ವನಿ ಎತ್ತಿದ್ದ ಕೇಜ್ರಿವಾಲ್ ಹಣಕ್ಕಾಗಿ ನೂತನ ಲಿಕ್ಕರ್ ಪಾಲಿಸಿ ಮಾಡಿದ್ದಾರೆ: ಅಣ್ಣಾ ಹಜಾರೆ ಕಿಡಿ

Share This Article