IPL 2024: ಟಾಪ್‌ ಟು ಬಾಟಮ್‌ ದಾಖಲೆ ಇರೋದು ಆರ್‌ಸಿಬಿ ಹೆಸರಲ್ಲೇ – ಇದು ಅಭಿಮಾನಿಗಳಿಗೆ ಹೆಗ್ಗಳಿಕೆ

Public TV
2 Min Read

ಚೆನ್ನೈ: 17ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿ (IPL 2024) ಇಂದಿನಿಂದ (ಮಾ.22) ಆರಂಭಗೊಳ್ಳುತ್ತಿದೆ. ಆರ್‌ಸಿಬಿ – ಸಿಎಸ್‌ಕೆ (RCB vs CSK) ನಡುವಿನ ಹೈವೋಲ್ಟೇಜ್‌ ಕದನಕ್ಕೆ ಚೆನ್ನೈನ ಚಿದಂಬರಂ (ಚೆಪಾಕ್) ಕ್ರೀಡಾಂಗಣದಲ್ಲಿ ಸಜ್ಜಾಗಿದೆ. ಇನ್ನೆರಡು ತಿಂಗಳ ಕಾಲ ಕ್ರಿಕೆಟ್‌ ಅಭಿಮಾನಿಗಳಿಗೆ ರಸದೌತಣ ನೀಡಲಿದೆ.

ಐಪಿಎಲ್‌ ಕ್ರಿಕೆಟ್‌ ಇತಿಹಾಸದಲ್ಲಿ ಚೆನ್ನೈ ಮತ್ತು ಆರ್‌ಸಿಬಿ ತಂಡಗಳು ತಮ್ಮದೇ ಆದ ಫ್ಯಾನ್ಸ್‌ ಬೇಸ್‌ ಹೊಂದಿವೆ. ಭಾರತ-ಪಾಕಿಸ್ತಾನ ಪಂದ್ಯದಷ್ಟೇ ಇತ್ತಂಡಗಳ ಕಾದಾಟ ರೋಚಕವಾಗಿರುತ್ತದೆ. ಆದ್ರೆ ಐಪಿಎಲ್‌ನಲ್ಲಿ ರನ್‌ ಹೊಳೆ ಹರಿಸಿ ಇತಿಹಾಸ ನಿರ್ಮಿಸಿದ್ದು, ಕಳಪೆ ಮೊತ್ತಕ್ಕೆ ಆಲೌಟ್‌ ಆಗಿ ದಾಖಲೆ ಬರೆದಿರುವ ಹೆಸರು ಇರುವುದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bengaluru) ತಂಡದ ಹೆಸರಿನಲ್ಲಿಯೇ ಅನ್ನೋದು ವಿಶೇಷ. ಅದನ್ನು ನಾವಿಲ್ಲಿ ಮೆಲುಕು ಹಾಕಬಹುದು.

ಅತಿಹೆಚ್ಚು ರನ್‌ ಗಳಿಸಿ ಇತಿಹಾಸ ನಿರ್ಮಿಸಿದ ಟಾಪ್‌-5 ತಂಡಗಳು
* ಆರ್‌ಸಿಬಿ – 263 ರನ್‌ – ಪುಣೆ ವಾರಿಯರ್ಸ್‌ ವಿರುದ್ಧ – 2013
* ಲಕ್ನೋ ಸೂಪರ್‌ ಜೈಂಟ್ಸ್‌- 257 ರನ್‌ – ಪಂಜಾಬ್‌ ಕಿಂಗ್ಸ್‌ ವಿರುದ್ಧ – 2023
* ಆರ್‌ಸಿಬಿ – 248 ರನ್‌ – ಗುಜರಾತ್‌ ಲಯನ್ಸ್‌ – 2016
* ಸಿಎಸ್‌ಕೆ – 246 ರನ್‌ – ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ – 2010
* ಕೆಕೆಆರ್‌ – 245 ರನ್‌ – ಪಂಜಾಬ್‌ ಕಿಂಗ್ಸ್‌ ವಿರುದ್ಧ – 2018

ಅತೀ ಕಡಿಮೆ ರನ್‌ಗಳಿಗೆ ಆಲೌಟ್‌ ಆಗಿ ಕೆಟ್ಟ ದಾಖಲೆ ಬರೆದ ಅಗ್ರ-5 ತಂಡಗಳು
* ಆರ್‌ಸಿಬಿ – 49 ರನ್‌ – ಕೋಲ್ಕತ್ತಾ ನೈಟ್‌ರೈಡರ್ಸ್‌ ವಿರುದ್ಧ – 2017
* ರಾಜಸ್ಥಾನ್‌ ರಾಯಲ್ಸ್ – 58 ರನ್‌ – ಆರ್‌ಸಿಬಿ ವಿರುದ್ಧ – 2009
* ರಾಜಸ್ಥಾನ ರಾಯಲ್ಸ್‌ – 59 ರನ್‌ – ಆರ್‌ಸಿಬಿ ವಿರುದ್ಧ – 2023
* ಡೆಲ್ಲಿ ಡೇರ್‌ ಡೆವಿಲ್ಸ್‌ – 66 ರನ್‌ – ಮುಂಬೈ ಇಂಡಿಯನ್ಸ್‌ ವಿರುದ್ಧ – 2017
* ಡೆಲ್ಲಿ ಡೇರ್‌ ಡೆವಿಲ್ಸ್‌ – 67 ರನ್‌ – ಪಂಜಾಬ್‌ ಕಿಂಗ್ಸ್‌ ವಿರುದ್ಧ – 2017

Share This Article