ಕನ್ನಡತಿ, ತೆಲುಗಿನ ಟಾಪ್ ನಟಿ ಶ್ರೀಲೀಲಾ (Sreeleela) ಹವಾ ಜೋರಾಗಿದೆ. ಸ್ಟಾರ್ ನಟರಿಗೆ ನಾಯಕಿಯಾಗುವ ಮೂಲಕ ಪೀಕ್ನಲ್ಲಿರುವ ಶ್ರೀಲೀಲಾಗೆ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಭೇಷ್ ಎಂದಿದ್ದಾರೆ. ‘ಗುಂಟೂರು ಖಾರಂ’ ಚಿತ್ರದಲ್ಲಿ ಶ್ರೀಲೀಲಾ ಡ್ಯಾನ್ಸ್ ನೋಡಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ (Ravichandran Ashwin) ಬೆರಗಾಗಿದ್ದಾರೆ.

ನನಗೆ ಸಿನಿಮಾ ನೋಡಲು ಸಮಯವಿಲ್ಲ. ಆದರೆ ರಜನಿಕಾಂತ್ (Rajanikanth) ಸಿನಿಮಾ ಬಿಟ್ಟು ಬೇರೆ ಸಿನಿಮಾಗಳನ್ನು ನೋಡಲ್ಲ. ಆದರೆ ಮಹೇಶ್ ಬಾಬು, ಶ್ರೀಲೀಲಾ ನಟನೆಯ ಈ ಸಿನಿಮಾ ಇಷ್ಟ ಆಯ್ತು. ಅದರಲ್ಲೂ ಶ್ರೀಲೀಲಾ ಡ್ಯಾನ್ಸ್ ಚೆನ್ನಾಗಿದೆ ಎಂದು ಕ್ರಿಕೆಟಿಗ ಸಂದರ್ಶನದಲ್ಲಿ ಕೊಂಡಾಡಿದ್ದಾರೆ. ಇದನ್ನೂ ಓದಿ:ದುಪ್ಪಟ್ಟು ಸಂಭಾವನೆಗೆ ಬೇಡಿಕೆಯಿಟ್ಟ ಸಮಂತಾ
ಸದ್ಯ ಶ್ರೀಲೀಲಾ ಅವರು ಪವನ್ ಕಲ್ಯಾಣ್ (Pawan Kalyan) ನಟನೆಯ ಉಸ್ತಾದ್ ಭಗತ್ ಸಿಂಗ್ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಆಗಲಿದೆ.

