ಶುರುವಾಯ್ತು ‘ವಿದ್ಯಾಪತಿಗೆ’ ಶೂಟಿಂಗ್-ಹೊಸ ಅವತಾರದಲ್ಲಿ ನಾಗಭೂಷಣ್,ರಂಗಾಯಣ ರಘು

Public TV
1 Min Read

ಪ್ರತಿಭಾನ್ವಿತ ನಿರ್ದೇಶಕರಿಗೆ ವೇದಿಕೆಯಾಗಿರುವ ಡಾಲಿ ಪಿಕ್ಚರ್ಸ್ ಮತ್ತೊಂದು ಹೊಸ ಕಥೆ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗುತ್ತಿದೆ. ಡಾಲಿ ಪಿಕ್ಚರ್ಸ್ 4ನೇ ಕೊಡುಗೆ ನಾಗಭೂಷಣ್‌ ನಟನೆಯ ‘ವಿದ್ಯಾಪತಿ’ (Vidyapati Film) ಶೂಟಿಂಗ್‌ಗೆ ಕಿಕ್ ಸ್ಟಾರ್ಟ್ ಸಿಕ್ಕಿದೆ. ಅದ್ಧೂರಿ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗ್ತಿದೆ.

ವಿದ್ಯಾಪತಿಯಾಗಿ ನಾಗಭೂಷಣ್ (Nagabhushan) ಬಣ್ಣ ಹಚ್ಚಿದ್ದು, ಅವರು ಕರಾಟೆ ಕಿಂಗ್ ಅವತಾರ ತಾಳಿದ್ದಾರೆ. ರಂಗಾಯಣ ರಘು ಕೂಡ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ವಿದ್ಯಾಪತಿ ಶೂಟಿಂಗ್ ಮೇಕಿಂಗ್ ವಿಡಿಯೋ ತುಣುಕನ್ನು ಚಿತ್ರತಂಡ ರಿವೀಲ್ ಮಾಡಿದೆ. 1 ನಿಮಿಷ ಮೇಕಿಂಗ್ ಝಲಕ್ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಇದನ್ನೂ ಓದಿ:ಬೇಸಿಗೆಯಲ್ಲಿ ಪುಟ್ಟಗೌರಿ ಮತ್ತಷ್ಟು ಹಾಟ್: ಕೂರ್ಗಿನಲ್ಲಿ ಸಾನ್ಯಾ ಅಯ್ಯರ್

 

View this post on Instagram

 

A post shared by Daali Pictures (@daalipictures)

ಇಕ್ಕಟ್ ಕಥೆ ಹೇಳಿದ್ದ ಇಶಾಂ ಮತ್ತು ಹಸೀಂ ಖಾನ್ ‘ವಿದ್ಯಾಪತಿ’ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಜೊತೆಗೆ ಸಿನಿಮಾವನ್ನು ಇವರೇ ಬರೆದು, ಸಂಕಲನದ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡಿದ್ದಾರೆ. ಆ್ಯಕ್ಷನ್ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಾಗಭೂಷಣ್‌ಗೆ ನಾಯಕಿಯಾಗಿ ‘ಉಪಾಧ್ಯಕ್ಷ’ ಬ್ಯೂಟಿ ಮಲೈಕಾ ವಸೂಪಾಲ್ (Malaika Vasupal) ಕಾಣಿಸಿಕೊಳ್ಳಲಿದ್ದಾರೆ.

ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಅರ್ಜುನ್ ಮಾಸ್ಟರ್ ಆ್ಯಕ್ಷನ್ ‘ವಿದ್ಯಾಪತಿ’ ಸಿನಿಮಾಕ್ಕಿದೆ. ‘ಟಗರು ಪಲ್ಯ’ ಮೂಲಕ ಮಸ್ತ್ ಮನರಂಜನೆ ನೀಡಿದ್ದ ನಾಗಭೂಷಣ್ ಮತ್ತೊಮ್ಮೆ ಡಾಲಿ ಜೊತೆ ಕೈ ಜೋಡಿಸಿದ್ದಾರೆ.

Share This Article