ಪಾಕಿಸ್ತಾನ ಸೂಪರ್‌ ಲೀಗ್‌ಗಿಂತಲೂ ನಮ್ಮ ಹೆಣ್ಮಕ್ಕಳ ಟೂರ್ನಿಯೇ ಹೆಚ್ಚು ಶ್ರೀಮಂತ

Public TV
3 Min Read

ನವದೆಹಲಿ/ಇಸ್ಲಾಮಾಬಾದ್‌: ಮಹಿಳಾ ಪ್ರೀಮಿಯರ್‌ ಲೀಗ್‌ನ 2ನೇ ಆವೃತ್ತಿಯಲ್ಲಿ ಟ್ರೋಫಿ ಎತ್ತಿಹಿಡಿಯುವ ಮೂಲಕ ಆರ್‌ಸಿಬಿ ಮಹಿಳಾ ತಂಡ ʻಈ ಸಲ ಕಪ್‌ ನಮ್ದೆʼ ಎನ್ನುತ್ತಿದ್ದ ಅಭಿಮಾನಿಗಳ 16 ವರ್ಷಗಳ ಕನಸನ್ನು ನನಸು ಮಾಡಿದೆ. ಮಹಿಳಾ ಕ್ರಿಕೆಟಿಗರ ಗೆಲುವನ್ನು ದೇಶದ ಅಭಿಮಾನಿಗಳು ಇನ್ನೂ ಸಂಭ್ರಮಿಸುತ್ತಿದ್ದಾರೆ. ಈ ನಡುವೆ ಪಾಕಿಸ್ತಾನ ಸೂಪರ್‌ ಲೀಗ್‌ (Pakistan Super League) ಟೂರ್ನಿಗಿಂತಲೂ ನಮ್ಮ ದೇಶದ ಡಬ್ಲ್ಯೂಪಿಎಲ್‌ ಹಾಗೂ ಐಪಿಎಲ್‌ (WPL And IPL) ಹೆಚ್ಚು ಶ್ರೀಮಂತ ಅನ್ನೋದು ಮತ್ತೊಂದು ಹೆಗ್ಗಳಿಕೆಯಾಗಿದೆ. ಇದನ್ನೂ ಓದಿ: RCB Unbox: ‘ಬೆಂಗಳೂರ್‌’ ಅಲ್ಲ ಇನ್ಮುಂದೆ ಹೇಳಿ ‘ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು’

ಕಳೆದ ಎರಡು ದಿನಗಳ ಹಿಂದೆಯಷ್ಟೇ 2024ನೇ ಆವೃತ್ತಿಯ ಪಾಕಿಸ್ತಾನ ಸೂಪರ್‌ ಲೀಗ್‌ ಟೂರ್ನಿಯು ಮುಕ್ತಾಯಗೊಂಡಿತು. ಇಸ್ಲಾಮಾಬಾದ್ ಯುನೈಟೆಡ್ ಲೀಗ್‌ನ ಇತಿಹಾಸದಲ್ಲಿ 3ನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದಕ್ಕೆ ಒಂದು ದಿನ ಮುಂಚಿತವಾಗಿ ಭಾರತದಲ್ಲಿ ಮಹಿಳಾ ಪ್ರೀಮಿಯರ್‌ ಲೀಗ್‌ (WPL 2024) ಮುಕ್ತಾಯಗೊಂಡು ಆರ್‌ಸಿಬಿ ಮಹಿಳಾ ತಂಡ ಚೊಚ್ಚಲ ಚಾಂಪಿಯನ್‌ ಪಟ್ಟ ಅಲಂಕರಿಸಿತು. ಆದ್ರೆ ಪಾಕಿಸ್ತಾನ ಸೂಪರ್‌ ಲೀಗ್‌ ವಿಜೇತ ತಂಡಕ್ಕಿಂತಲೂ ಡಬ್ಲ್ಯೂಪಿಎಲ್‌ ಮಹಿಳಾ ತಂಡ ಪಡೆದ ಬಹುಮಾನ ದೊಡ್ಡಮಟ್ಟದ್ದು, ಅನ್ನೋದು ವಿಶೇಷ. ಅಲ್ಲದೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿರುವುದೂ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಇದನ್ನೂ ಓದಿ: ಟ್ರೋಫಿ ಗೆದ್ದು ಕೋಟಿ ಕೋಟಿ ದೋಚಿದ ಹೆಣ್ಮಕ್ಕಳು – ಆರ್‌ಸಿಬಿಗೆ ಸಿಕ್ಕ ನಗದು ಬಹುಮಾನ ಎಷ್ಟು ಗೊತ್ತಾ?

ಸೂಪರ್‌ ಲೀಗ್‌ನಲ್ಲಿ ಪ್ರಶಸ್ತಿ ಗೆದ್ದ ಇಸ್ಲಾಮಾಬಾದ್‌ ತಂಡ 14 ಕೋಟಿ ಪಾಕಿಸ್ತಾನ ರೂಪಾಯಿ (4.13 ಕೋಟಿ ರೂ. ಭಾರತದ ರೂಪಾಯಿಗಳಲ್ಲಿ) ಬಹುಮಾನ ಗಳಿಸಿತು. ರನ್ನರ್‌ ಅಪ್‌ ತಂಡವು 5.60 ಕೋಟಿ ರೂ. ಪಾಕಿಸ್ತಾನ ರೂಪಾಯಿ (1.65 ಕೋಟಿ ರೂ. ಭಾರತದ ರೂಪಾಯಿಗಳಲ್ಲಿ) ಸ್ವೀಕರಿಸಿತು. ಆದ್ರೆ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಆರ್‌ಸಿಬಿ ಮಹಿಳಾ ತಂಡ (ವಿಜೇತ ತಂಡ) ಸ್ವೀಕರಿಸಿದ ಬಹುಮಾನದ ಮೊತ್ತ ಬರೋಬ್ಬರಿ 6 ಕೋಟಿ ರೂ., ರನ್ನರ್‌ ಅಪ್‌ ತಂಡ 3 ಕೋಟಿ ರೂ. ದೋಚಿಕೊಂಡಿತು. ಇನ್ನೂ ವಿಶ್ವದ ಶ್ರೀಮಂತ ಲೀಗ್‌ ಟೂರ್ನಿ ಎಂದೇ ಗುರುತಿಸಿಕೊಂಡಿರುವ ಐಪಿಎಲ್‌ನಲ್ಲಿ ವಿಜೇತ ತಂಡಕ್ಕೆ ಸಿಗುವ ಬಹುಮಾನ ಬರೋಬ್ಬರಿ 20 ಕೋಟಿ ರೂ. ಆಗಿದೆ, ರನ್ನರ್‌ ಅಪ್‌ ತಂಡಕ್ಕೆ 13 ಕೋಟಿ ರೂ. ಬಹುಮಾನ ನಿಗದಿಯಾಗಿದೆ. ಇದನ್ನೂ ಓದಿ: 16 ವರ್ಷಗಳ ಸಾರ್ಥಕ ಸಂಭ್ರಮ – ಆರ್‌ಸಿಬಿ ಕಪ್‌ ಗೆದ್ದ ನಂತ್ರ ಏನಾಯ್ತು? ಇಲ್ಲಿದೆ ಸ್ಪೆಷಲ್‌ ವೀಡಿಯೋ…

2023ರ ಐಪಿಎಲ್‌ ಪ್ರಶಸ್ತಿ ವಿಜೇತ ತಂಡಗಳು:
ವಿಜೇತ ತಂಡ: ಚೆನ್ನೈ ಸೂಪರ್ ಕಿಂಗ್ಸ್ – 20 ಕೋಟಿ ರೂ.
ರನ್ನರ್ ಅಪ್ ತಂಡ: ಗುಜರಾತ್ ಟೈಟಾನ್ಸ್ – 13 ಕೋಟಿ ರೂ.

2024ರ ಡಬ್ಲ್ಯೂಪಿಎಲ್‌ ಪ್ರಶಸ್ತಿ ವಿಜೇತ ತಂಡಗಳು ಮತ್ತು ಆಟಗಾರರು:
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಚಾಂಪಿಯನ್‌): 6 ಕೋಟಿ ರೂ.
ಡೆಲ್ಲಿ ಕ್ಯಾಪಿಟಲ್ಸ್‌ (ರನ್ನರ್‌ ಅಪ್‌): 3 ಕೋಟಿ ರೂ.
ಶಫಾಲಿ ವರ್ಮಾ (ಎಲೆಕ್ಟ್ರಿಕ್‌ ಸ್ಟ್ರೈಕರ್‌ ಆಫ್ ದಿ ಮ್ಯಾಚ್‌): 1 ಲಕ್ಷ ರೂ.
ಶಫಾಲಿ ವರ್ಮಾ (ಸಿಕ್ಸರ್‌ ಆಫ್‌ ದಿ ಮ್ಯಾಚ್‌): 1 ಲಕ್ಷ ರೂ.
ಶಫಾಲಿ ವರ್ಮಾ ( ಸಿಕ್ಸರ್‌ ಆಫ್‌ ದಿ ಸೀಸನ್‌): 5 ಲಕ್ಷ ರೂ.
ಶ್ರೇಯಾಂಕಾ ಪಾಟೀಲ್‌ (ಉದಯೋನ್ಮುಖ ಆಟಗಾರ್ತಿ): 5 ಲಕ್ಷ ರೂ.
ಎಲಿಸ್‌ ಪೆರ್ರಿ (ಆರಂಜ್‌ ಕ್ಯಾಪ್): 5 ಲಕ್ಷ ರೂ.
ಶ್ರೇಯಾಂಕಾ ಪಾಟೀಲ್ (ಪರ್ಪಲ್‌ ಕ್ಯಾಪ್‌): 5 ಲಕ್ಷ ರೂ.
ದೀಪ್ತಿ ಶರ್ಮಾ (ಅತ್ಯಂತ ಮೌಲ್ಯಯುತ ಆಟಗಾರ್ತಿ): 5 ಲಕ್ಷ ರೂ.

2024ರ ಪಿಎಸ್ಎಲ್ ಪ್ರಶಸ್ತಿ ವಿಜೇತ ತಂಡಗಳು:
ವಿಜೇತ ತಂಡ: ಇಸ್ಲಾಮಾಬಾದ್ ಯುನೈಟೆಡ್ – 4.13 ಕೋಟಿ ರೂ.
ರನ್ನರ್ ಅಪ್ ತಂಡ: ಮುಲ್ತಾನ್‌ ಸುಲ್ತಾನ್ಸ್‌ – 1.65 ಕೋಟಿ ರೂ.

Share This Article