ದೇವಸ್ಥಾನಕ್ಕೆ ಮೆಕ್ಯಾನಿಕಲ್ ಆನೆ ಉಡುಗೊರೆ ನೀಡಿದ ಪ್ರಿಯಾಮಣಿ

Public TV
1 Min Read

ನ್ನಡತಿ, ಬಹುಭಾಷಾ ನಟಿ ಪ್ರಿಯಾಮಣಿ (Priyamani) ಅವರು ದೇವಸ್ಥಾನವೊಂದಕ್ಕೆ ಮೆಕ್ಯಾನಿಕಲ್ ಆನೆಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ನಟಿಯ ನಡೆಗೆ ಅಭಿಮಾನಿಗಳು ಶ್ಲಾಘಿಸಿದ್ದಾರೆ. ಇದನ್ನೂ ಓದಿ:ಇಬ್ಬರು ನಟರ ಜೊತೆ ‘ಅನಿಮಲ್‌’ ನಟಿ ತೃಪ್ತಿ ದಿಮ್ರಿ ರೊಮ್ಯಾನ್ಸ್

ಎರ್ನಾಕುಲಂ ಕಾಲಡಿ ತ್ರಿಕ್ಕದಲ್ಲಿರುವ ಮಹಾದೇವ ದೇವಸ್ಥಾನಕ್ಕೆ ಮೆಕ್ಯಾನಿಕಲ್ ಆನೆಯನ್ನು ಗಿಫ್ಟ್ ಆಗಿ ಪ್ರಿಯಾಮಣಿ ನೀಡಿದ್ದಾರೆ. ಇದರ ಗಾತ್ರ ಮತ್ತು ಎತ್ತರ ನಿಜವಾದ ಆನೆಯನ್ನು ಮೀರಿಸುವಂತಿದೆ. ಇದನ್ನು ನೋಡಿ ಗ್ರಾಮಸ್ಥರು ಬೆರಗಾಗಿದ್ದಾರೆ.

ಪ್ರಿಯಾಮಣಿ ದೇವಸ್ಥಾನಕ್ಕೆ ಉಡುಗೊರೆಯಾಗಿ ನೀಡಿದ ಮೆಕ್ಯಾನಿಕಲ್ ಆನೆಯು 3 ಮೀಟರ್ ಎತ್ತರ ಮತ್ತು 800 ಕೆಜಿ ತೂಕವಿದೆ. ರೋಬೋ ಆನೆಯನ್ನು ದೇಶದಾದ್ಯಂತ ತೆಗೆದುಕೊಂಡು ಹೋಗಲು ಅನುಮತಿ ಕೂಡ ನೀಡುತ್ತಾರೆ ಎಂದು ದೇವಾಲಯದ ಅಧಿಕಾರಿಗಳು ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

‘ಆರ್ಟಿಕಲ್ 370’ (Article 370) ಚಿತ್ರದ ಸಕ್ಸಸ್ ನಂತರ ಕನ್ನಡ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಪ್ರಿಯಾಮಣಿ ಬ್ಯುಸಿಯಾಗಿದ್ದಾರೆ.

Share This Article