ಅದ್ಧೂರಿಯಾಗಿ ನಡೆಯಿತು ವೆಂಕಟೇಶ್ ದಗ್ಗುಬಾಟಿ ಪುತ್ರಿಯ ಮದುವೆ

Public TV
1 Min Read

ತೆಲುಗಿನ (Tollywood) ಸ್ಟಾರ್ ನಟ ವಿಕ್ಟರಿ ವೆಂಕಟೇಶ್ (Venkatesh Daggubati) ಅವರ 2ನೇ ಪುತ್ರಿ ಮದುವೆ ಇದೀಗ ಅದ್ಧೂರಿಯಾಗಿ ನಡೆದಿದೆ. ದಗ್ಗುಬಾಟಿ ಕುಟುಂಬದ ನವಜೋಡಿಗೆ ಶುಭಕೋರಲು ಸ್ಟಾರ್ ಕಲಾವಿದರ ದಂಡೇ ಹರಿದು ಬಂದಿದೆ.‌ ಇದನ್ನೂ ಓದಿ:‘ಗೀತಾ’ ಸೀರಿಯಲ್‌ಗೆ ಬ್ರೇಕ್ ಬೀಳುತ್ತಿದ್ದಂತೆ ಭವ್ಯಾ ಗೌಡ ಟೆಂಪಲ್ ರನ್

ದಗ್ಗುಬಾಟಿ ವೆಂಕಟೇಶ್ ಅವರ 2ನೇ ಪುತ್ರಿ ಹಯವಾಹಿನಿ ಗ್ರ್ಯಾಂಡ್ ಆಗಿ ಹೈದರಾಬಾದ್‌ನಲ್ಲಿ ನಡೆದಿದೆ. ನಿಶಾಂತ್ ಎಂಬುವವರ ಜೊತೆ ವೆಂಕಟೇಶ್ ಪುತ್ರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಹಯವಾಹಿನಿ ಎಂಗೇಜ್‌ಮೆಂಟ್ ಕಳೆದ ವರ್ಷ ನೆರವೇರಿತ್ತು. ಇದೀಗ ಮದುವೆಗೆ 2 ಕುಟುಂಬದ ಸದಸ್ಯರು ಮತ್ತು ಆಪ್ತರು ಅಷ್ಟೇ ಭಾಗಿಯಾಗಿ ಹೊಸ ಜೋಡಿಗೆ ಶುಭ ಹಾರೈಸಿದ್ದಾರೆ.

ಈ ಮದುವೆಯಲ್ಲಿ ರಾಣಾ ದಗ್ಗುಬಾಟಿ, ನಾಗಾಚೈತನ್ಯ, ಅಕಿಲ್ ಅಕ್ಕಿನೇನಿ, ಮಹೇಶ್ ಬಾಬು, ಮೆಗಾಸ್ಟಾರ್ ಚಿರಂಜೀವಿ, ತಮಿಳು ನಟ ಕಾರ್ತಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

Share This Article