ಖ್ಯಾತ ನಟಿ ಮಧುಬಾಲಾ ಬಯೋಪಿಕ್: ಡೈರೆಕ್ಟರ್ ಫಿಕ್ಸ್

Public TV
1 Min Read

ಬಾಲಿವುಡ್ (Bollywood) ಚಿತ್ರರಂಗದಲ್ಲಿ ಇಪ್ಪತ್ತು ವರ್ಷಗಳ ಕಾಲ ರಾರಾಜಿಸಿದ ನಟಿ ಮಧುಬಾಲಾ (Madhubala) ನಿಜ ಜೀವನದ ಕಥೆಯನ್ನ ತೆರೆಯ ಮೇಲೆ ತರಲು ಮಧುಬಾಲಾ ಅವರ ಸಹೋದರಿ ಮಧುರ್  (Madhur)ಸಜ್ಜಾಗಿದ್ದಾರೆ. ಮಧುರ್‌ಗೆ `ಶಕ್ತಿಮಾನ್’ ಧಾರಾವಾಹಿ ನಿರ್ಮಾಪಕರು ಸಾಥ್ ನೀಡಿದ್ದಾರೆ. ನಿರ್ಮಾಪಕರು ಮುಂದೆ ಬಂದಿದ್ದಾರೆ. ಆದರೆ, ನಿರ್ದೇಶಕ ಹಾಗೂ ಮಧುಬಾಲಾ ಪಾತ್ರಧಾರಿ ಯಾರು ಎನ್ನುವುದು ಹೇಳಿರಲಿಲ್ಲ. ಇದೀಗ ಡೈರೆಕ್ಟರ್ ಫಿಕ್ಸ್ ಆಗಿದ್ದಾರೆ.

ಮಧುಬಾಲಾ ಅವರನ್ನು ತೆರೆಯ ಮೇಲೆ ತೋರಿಸುವಂತಹ ಶಕ್ತಿ ಜಸ್ಮೀತ್ ಕೆ ರೀನ್ (Jasmeet K Reen) ಅವರಿಗೆ ಇದೆಯಂತೆ. ಹಾಗಾಗಿ ಇವರನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಮಧುಬಾಲಾ ಪಾತ್ರವನ್ನು ಯಾರು ಮಾಡುತ್ತಾರೆ ಎನ್ನುವುದನ್ನು ಸದ್ಯಕ್ಕೆ ಸಸ್ಪೆನ್ಸ್ ಇಡಲಾಗಿದೆ.

ಹಿಂದಿ ಚಿತ್ರರಂಗದಲ್ಲಿ 20 ವರ್ಷಗಳ ಕಾಲ ಆಳಿದ ನಟಿ ಮಧುಬಾಲಾ ನೈಜ ಜೀವನದ ಕಥೆಯನ್ನ ಬೆಳ್ಳಿಪರದೆಯಲ್ಲಿ ಪ್ರಸ್ತುತ ಪಡಿಸಲು ತೆರೆಮರೆಯಲ್ಲಿ ಭರ್ಜರಿ ಕೆಲಸ ನಡೆಯುತ್ತಿದೆ. ಸ್ವತಃ ಮಧುಭಾಲಾ ಅವರ ಸಹೋದರಿ ಮಧುರ್ ಈ ಚಿತ್ರವನ್ನು ನಿರ್ಮಾಣ ಮಾಡೋಕೆ ರೆಡಿಯಾಗಿದ್ದಾರೆ.

 

ಮುಸ್ಲಿಂ ಧರ್ಮದ ಸಾಮಾನ್ಯ ಹುಡುಗಿಯೊಬ್ಬಳು ಮಧುಬಾಲಾ ಆಗಿ ಮಿಂಚಿದ ಕಥೆ, ಚಿತ್ರರಂಗದಲ್ಲಿ 70ಕ್ಕೂ ಹೆಚ್ಚು ಚಿತ್ರದಲ್ಲಿ ನಾನಾ ಬಗೆಯ ಪಾತ್ರದ ಮೂಲಕ ಮಧುಬಾಲಾ ರಂಜಿಸಿದ್ದಾರೆ. ತೆರೆಯ ಮೇಲಿನ ಕಥೆಯ ಜತೆ ತೆರೆಯ ಹಿಂದಿನ ಅಸಲಿತ್ತು ಎನಿತ್ತು ಎಂಬುದನ್ನ ಈ ಬಯೋಪಿಕ್ ಮೂಲಕ ತೋರಿಸಲಿದ್ದಾರೆ. ಮಧುಬಾಲಾ ಪಾತ್ರಕ್ಕಾಗಿ ಬಾಲಿವುಡ್ ಸೂಕ್ತ ನಾಯಕಿಯನ್ನೇ ಚಿತ್ರತಂಡ ಆಯ್ಕೆ ಮಾಡಲಿದೆ. ಇನ್ನು ಮಧುಬಾಲಾ ಪಾತ್ರದಲ್ಲಿ ಯಾವ ನಟಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

Share This Article