ನಮ್ಮದು 5 ವರ್ಷದ ಸರ್ಕಾರ ಅಲ್ಲ, ಇನ್ನೂ 9 ವರ್ಷ ಇರುತ್ತೆ: ಡಿಕೆಶಿ

Public TV
1 Min Read

ರಾಯಚೂರು: ನಮ್ಮ ಸರ್ಕಾರ 5 ವರ್ಷದ ಸರ್ಕಾರ ಅಲ್ಲ. ಇನ್ನೂ 9 ವರ್ಷ ಸರ್ಕಾರ ಇರುತ್ತದೆ. ಹತ್ತು ವರ್ಷಗಳ ಕಾಲ ಈ ಸರ್ಕಾರ ಇದ್ದೇ ಇರುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

ರಾಯಚೂರಿನಲ್ಲಿ (Raichur) ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾರೂ ಬಿಜೆಪಿ, ದಳ ಅಂತ ಯೋಚನೆ ಮಾಡುತ್ತಿದ್ದೀರೋ ಅದನ್ನು ಮರೆತುಬಿಡಿ. ವಯಸ್ಸು ಮುಗಿದು ಹೋಗುತ್ತದೆ, ಅವಕಾಶ ಸಿಕ್ಕಿದೆ. ನೀವೆಲ್ಲಾ ಸಹಾಯ ಮಾಡಬೇಕು ಎಂದರು. ಇದನ್ನೂ ಓದಿ: ಈಶ್ವರಪ್ಪ ಮಗನನ್ನು ಎಂಎಲ್‍ಸಿ ಮಾಡುವ ಚರ್ಚೆಯಾಗ್ತಿದೆ: ಬಿಎಸ್‍ವೈ

ಮರ ಹೊಸ ಚಿಗುರಿಗೆ ಕಾಯುತ್ತಿರುತ್ತದೆ. ನೀವು ಕೂಡ ಮುಂದಿನ ದಿನಗಳಲ್ಲಿ ಕಾದು ನೋಡಿ. ಸರ್ಕಾರ ಗಟ್ಟಿಯಾಗಿದೆ. ಸರ್ಕಾರ ನಿಮ್ಮ ಸೇವೆ ಮಾಡುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಯಾರಿಗೇ ಕೊಟ್ಟರೂ ನೀವು ಅವರನ್ನು ಗೆಲ್ಲಿಸಬೇಕು. ಕೈ ಬಲಪಡಿಸಬೇಕು ಎಂದು ಸಮಾವೇಶದಲ್ಲಿ ಮತಯಾಚನೆ ಮಾಡಿದರು. ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

ಎಣ್ಣೆ ಬೆಲೆ ಜಾಸ್ತಿ ಆಗಿದೆ ಎಂದು ಜನರ ಸಹಾಯಕ್ಕೆ ಮುಂದಾದೆವು. ನಾನು, ಸಿದ್ದರಾಮಯ್ಯ ಸಹಿ ಹಾಕಿ ನಿಮ್ಮ ಮನೆಗೆ ಗ್ಯಾರಂಟಿ ಚೆಕ್ ತಲುಪಿಸಿದ್ದೆವು. ಆ ಪೈಕಿ ಐದು ಗ್ಯಾರಂಟಿ ಜಾರಿ ಮಾಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ನನ್ನ ವಿರುದ್ಧವೂ ಯಶಸ್ವಿಯಾಗಿಲ್ಲ, ಅವರಿಂದಲೂ ಟಿಕೆಟ್ ತಗೊಂಡು ಬರೋದಕ್ಕೆ ಆಗಿಲ್ಲ: ಕರಂದ್ಲಾಜೆ

ಅಂಬೇಡ್ಕರ್ ಯಾವ ರೀತಿ ಸಂವಿಧಾನ ಕೊಟ್ಟಿದ್ದಾರೋ ಅದೇ ರೀತಿ ಮಲ್ಲಿಕಾರ್ಜುನ ಖರ್ಗೆ ಕಲ್ಯಾಣ ಕರ್ನಾಟಕಕ್ಕೆ 371 ಜೆ ಕೊಟ್ರು. ನಿಮ್ಮ ಬದುಕಿನಲ್ಲಿ ಬದಲಾವಣೆ ಮಾಡಿದ್ದಾರೆ. ಇದಕ್ಕೆ ಉಪಕಾರ ಸ್ಮರಣೆ ಇರಬೇಕು. ನೀವೆಲ್ಲಾ ಫಲಾನುಭವಿಗಳಾಗಿ ಸಂತೋಷದಿಂದ ಇದ್ದೀರಿ ಎಂದು ಭಾವಿಸಿದ್ದೇನೆ ಎಂದರು. ಇದನ್ನೂ ಓದಿ: ಹಾವೇರಿ ಟಿಕೆಟ್ ವಿಚಾರಕ್ಕೆ ಬಿಎಸ್‍ವೈಯನ್ನೂ ದೂರಬಾರದು: ಬೊಮ್ಮಾಯಿ

Share This Article