ನಟಿ ಅಡ್ಡಾಲ ಐಶ್ವರ್ಯ ವಿರುದ್ಧವೇ ವಂಚನೆ ದೂರು ನೀಡಿದ ಪತಿ

Public TV
1 Min Read

ಸಾಮಾನ್ಯವಾಗಿ ಪತಿಯ ವಿರುದ್ಧ ಪತ್ನಿಯರು ದೂರು ನೀಡುವುದು ಬಣ್ಣದ ಲೋಕದಲ್ಲಿ ಹೆಚ್ಚಾಗಿತ್ತು. ಆದರೆ, ಪತ್ನಿಯ ವಿರುದ್ಧವೇ ವಂಚನೆ ದೂರು ನೀಡಿರುವ ಪ್ರಕರಣ ಕಿರುತೆರೆ ಲೋಕದಲ್ಲಿ ನಡೆದಿದೆ. ಕಿರುತೆರೆ ನಟಿ ಅಡ್ಡಾಲ ಐಶ್ವರ್ಯ ವಿರುದ್ಧ ಪತಿ ಡ್ರಗ್ ಸೇವನೆ, ವಂಚನೆ, ಅಕ್ರಮ ಸಂಬಂಧದ ಆರೋಪ ಮಾಡಿದ್ದಾರೆ.

ನಟಿ ಅಡ್ಡಾಲ ಐಶ್ವರ್ಯ ಅವರು ತಮಗೆ ಮ್ಯಾಟ್ರಿಮೊನಿ ಮೂಲಕ ಪರಿಚಯವಾಗಿತ್ತು. ನಂತರ ಒಬ್ಬರನ್ನೊಬ್ಬರು ಇಷ್ಟ ಪಟ್ಟು ಮದುವೆ ಕೂಡ ಆದೆವು. ಕಳೆದ ವರ್ಷ ಸೆಪ್ಟಂಬರ್ 6ಕ್ಕೆ ನಮ್ಮಿಬ್ಬರ ಮದುವೆ ಆಯಿತು. ಕೆಲ ದಿನಗಳ ಹಿಂದೆಯಷ್ಟೇ ಆಕೆ ಏನು ಅನ್ನುವುದು ಗೊತ್ತಾಯಿತು ಎಂದು ಪತಿ ಶ್ಯಾಮ್ ದೂರಿನಲ್ಲಿ ಆರೋಪಿಸಿದ್ದಾರೆ.

ಪತಿಯು ಆರೋಪಿಸಿದಂತೆ ನಟಿಯು ಡ್ರಗ್ಸ್ ಸೇವನೆ ಮಾಡುತ್ತಾರಂತೆ. ಸಿಗರೇಟು ಹಾಗೂ ಅಕ್ರಮ ಸಂಬಂಧವನ್ನು ಕೂಡ ಹೊಂದಿದ್ದಾರಂತೆ. ಮದುವೆ ಹೆಸರಿನಲ್ಲಿ ತಮಗೆ ಮೋಸ ಆಗಿದೆ ಎಂದು ಶ್ಯಾಮ್ ದೂರು ನೀಡಿದ್ದಾರೆ. ತಾವು ಡಿವೋರ್ಸ್ ನೀಡಲು ಸಿದ್ಧವಿದ್ದರೂ, ಅದಕ್ಕೂ ಪತ್ನಿ ಒಪ್ಪುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

 

ಬರೀ ಕಿರುಕುಳ ಮಾತ್ರವಲ್ಲ ಹಣವನ್ನೂ ಪೀಕಿದ ಬಗ್ಗೆಯೂ ಶ್ಯಾಮ್ ಮಾತನಾಡಿದ್ದಾರೆ. ಕೇವಲ ಆರೇ ಆರು ತಿಂಗಳಲ್ಲಿ ಬರೋಬ್ಬರಿ 25 ಲಕ್ಷ ರೂಪಾಯಿಯನ್ನು ತಮ್ಮಿಂದ ಪಡೆದಿರೋದಾಗಿ ಶ್ಯಾಮ್ ಹೇಳಿಕೊಂಡಿದ್ದಾರೆ.

Share This Article