ಶಸ್ತ್ರಚಿಕಿತ್ಸೆಯ ಬಳಿಕ ಪತ್ನಿ, ಮಗನ ಜೊತೆ ಕಾಣಿಸಿಕೊಂಡ ಅಜಿತ್ ಕುಮಾರ್

Public TV
2 Min Read

ಮಿಳಿನ ಸ್ಟಾರ್ ನಟ ಅಜಿತ್ ಕುಮಾರ್ (Ajith Kumar) ಇತ್ತೀಚೆಗೆ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬೆನ್ನಲ್ಲೇ ಮಗನ ಶಾಲೆಯ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ:26ನೇ ವಯಸ್ಸಿಗೆ ನೀಲಿ ತಾರೆ ಸೋಫಿಯಾ ಲಿಯೋನ್ ನಿಧನ

ಶಸ್ತ್ರಚಿಕಿತ್ಸೆ ಬಳಿಕ ಮೊದಲ ಬಾರಿಗೆ ಪತ್ನಿ ಮತ್ತು ಮಗನ ಜೊತೆ ಅಜಿತ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಗುಣಮುಖರಾಗಿರುವ ಅಜಿತ್, ಮಗನ ಶಾಲೆಯ ಕಾರ್ಯಕ್ರಮದಲ್ಲಿ ಖುಷಿಯಿಂದ ಓಡಾಡಿದ್ದಾರೆ. ಸದ್ಯ ಅಜಿತ್ ಅಭಿಮಾನಿಗಳು ಈ ಸುದ್ದಿ ಕೇಳಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ:ಡಿವೋರ್ಸ್ ಬಗ್ಗೆ ಜನ ಕೀಳಾಗಿ ನೋಡುತ್ತಾರೆ- ಮಲೈಕಾ ಅರೋರಾ

ಅಜಿತ್ ಕುಮಾರ್ ನಾಲ್ಕೈದು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಇದ್ದಕ್ಕಿದ್ದಂತೆಯೇ ಅಜಿತ್ ಪ್ರತಿಷ್ಠಿತ ಆಸ್ಪತ್ರೆಗೆ ಸೇರಿರುವುದು ನಾನಾ ಊಹಾಪೋಹಗಳನ್ನು ಸೃಷ್ಟಿ ಮಾಡಿತ್ತು. ನಟ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಹೇಳಲಾಗಿತ್ತು. ಈ ಎಲ್ಲದಕ್ಕೂ ಅಜಿತ್ ಮ್ಯಾನೇಜರ್ ಸುರೇಶ್ ಚಂದ್ರ ಸ್ಪಷ್ಟನೆ ನೀಡಿದ್ದರು. ಅವರು ಸಣ್ಣದೊಂದು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ ಎಂದು ತಿಳಿಸಿದ್ದರು.

ಸಾಮಾನ್ಯ ಆರೋಗ್ಯ ತಪಾಸಣೆಗಾಗಿ ಅಜಿತ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ, ಅವರ ಕಿವಿಯ ಕೆಳಗೆ ಸಣ್ಣದಾಗಿ ಊತ ಕಾಣಿಸಿಕೊಂಡಿರುವುದು ಗಮನಕ್ಕೆ ಬಂತು. ವೈದ್ಯರ ಸಲಹೆ ಮೇರೆಗೆ ಅದಕ್ಕೆ ಚಿಕಿತ್ಸೆ ನೀಡಲಾಯಿತು. ಅರ್ಧ ಗಂಟೆಯಲ್ಲಿ ಅದಕ್ಕೆ ಚಿಕಿತ್ಸೆ ನೀಡಲಾಗಿತ್ತು. ಅಜಿತ್‌ಗೆ ಯಾವುದೇ ಅಪಾಯವಿಲ್ಲ ಎಂದಿದ್ದರು ಮ್ಯಾನೇಜರ್.

ಮೆದುಳಿನ ಗಡ್ಡೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎನ್ನಲಾದ ಸುದ್ದಿ ಶುದ್ಧ ಸುಳ್ಳು. ಅಂಥದ್ದೇನೂ ಅವರಿಗೆ ಆಗಿಲ್ಲ ಎಂದು ವದಂತಿಗೆ ಪ್ರತಿಕ್ರಿಯೆ ನೀಡಿದ್ದರು. ಮೂರು ತಿಂಗಳ ವಿಶ್ರಾಂತಿ ಬೇಕು ಎನ್ನುವ ವದಂತಿಯನ್ನೂ ಮ್ಯಾನೇಜರ್ ತಳ್ಳಿ ಹಾಕಿದ್ದರು. ಆದಷ್ಟು ಬೇಗ ಅಜಿತ್ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದ್ದರು.

ಅಜಿತ್ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಸಾಕಷ್ಟು ವದಂತಿಗಳು ಹರಡಿದ್ದವು. ಹಾಗಾಗಿ ಅಭಿಮಾನಿಗಳು ಸಹಜವಾಗಿ ಆತಂಕಕ್ಕೆ ಒಳಗಾಗಿದ್ದರು. ಯಾವುದೇ ಕಾರಣಕ್ಕೂ ಆತಂಕ ಪಡುವಂಥದ್ದು ಏನು ಆಗಿಲ್ಲ ಅಂದಿದ್ದಾರೆ ಸುರೇಶ್ ಚಂದ್ರ.

Share This Article