ದುಡ್ಡು ಕೊಟ್ರೆ ಮಾತ್ರ ಬರುತ್ತಾರೆ- ಬಿಟೌನ್ ಬಗ್ಗೆ ಪ್ರಿಯಾಮಣಿ ಶಾಕಿಂಗ್ ಹೇಳಿಕೆ

Public TV
1 Min Read

ಬೆಂಗಳೂರಿನ ಬೆಡಗಿ ಪ್ರಿಯಾಮಣಿ (Priyamani) ಇದೀಗ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ‘ಜವಾನ್’ (Jawan) ಸಕ್ಸಸ್ ನಂತರ ಕನ್ನಡದ ಹುಡುಗಿಗೆ ಬಿಟೌನ್‌ನಲ್ಲಿ ಬೇಡಿಕೆ ಜಾಸ್ತಿ ಆಗಿದೆ. ಇದೀಗ ಬಾಲಿವುಡ್‌ನ ಕರಾಳ ಸತ್ಯವನ್ನು ನಟಿ ರಿವೀಲ್ ಮಾಡಿದ್ದಾರೆ. ಪಬ್ಲಿಸಿಟಿಗಾಗಿ ಸೆಲೆಬ್ರಿಟಿಗಳು ಏನೆಲ್ಲ ಮಾಡುತ್ತಾರೆ.

ಬಾಲಿವುಡ್ ಸೆಲೆಬ್ರೆಟಿಗಳು ಜಿಮ್‌ಗೆ ಹೋಗಲಿ, ಸಲೂನ್‌ಗೆ ಹೋಗಲಿ, ಮನೆ, ಪಾರ್ಟಿ, ವಿಮಾನ ನಿಲ್ದಾಣಕ್ಕೆ ಹೋದ್ರು ಪಾಪರಾಜಿಗಳು ಮುತ್ತಿಕೊಳ್ತಾರೆ. ಹೇಗೆ ಬರ್ತಾರೆ ಇವರೆಲ್ಲಾ ಅಂತ ಅನೇಕರು ಯೋಚಿಸುತ್ತಾರೆ. ಇದಕ್ಕೆಲ್ಲಾ ಈಗ ಪ್ರಿಯಾಮಣಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಆಮೀರ್ ಖಾನ್ ಮಗನ ಜೊತೆ ಕುಣಿದು ಕುಪ್ಪಳಿಸಿದ ಸಾಯಿ ಪಲ್ಲವಿ

ಟಿವಿ ಸಂದರ್ಶನವೊಂದರಲ್ಲಿ ಮಾತಾಡಿದ ಪ್ರಿಯಾಮಣಿ, ಸೆಲೆಬ್ರಿಟಿಗಳು ಒಂದು ರೀತಿ ಪಬ್ಲಿಸಿಟಿ ಗಿಟ್ಟಿಸಿಕೊಳ್ಳುವ ತಂತ್ರ ಎಂದಿದ್ದಾರೆ. ಸೆಲೆಬ್ರೆಟಿಗಳು ಸೂಟ್‌ನಲ್ಲಿ ಇರೋದು, ಸಲೂನ್‌ಗೆ ಹೋದಾಗಲೂ ಪಾಪರಾಜಿಗಳ ಕ್ಯಾಮೆರಾಗೆ ಸಿಗ್ತಾರೆ. ಪಾಪರಾಜಿಗಳೇ ಅವರ ಹಿಂದೆ ಓಡಾಡ್ತಿರುತ್ತಾರೆ ಎಂದು ಜನಸಾಮಾನ್ಯರು ಊಹಿಸಿರುತ್ತಾರೆ. ಆದರೆ ಅಸಲಿ ಸಂಗತಿಯೇ ಬೇರೇ ಇದೆ ಎಂದಿದ್ದಾರೆ.

ಪ್ರಚಾರಕ್ಕಾಗಿ ಪಿಆರ್‌ಗಳ ಮೂಲಕ ಸೆಲೆಬ್ರೆಟಿಗಳೇ ಪಾಪರಾಜಿಗಳಿಗೆ ದುಡ್ಡು ಕೊಟ್ಟು ಕರೆಸಿಕೊಳ್ತಾರೆ. ದುಡ್ಡು ಕೊಟ್ಟರಷ್ಟೇ ಅವರು ಬಂದು ಫೋಟೋ-ವಿಡಿಯೋ ತೆಗೆದು ಪ್ರಚಾರ ಮಾಡೋದು ಅಂತ ನಟಿ ಪ್ರಿಯಾಮಣಿ ಹೇಳಿದ್ದಾರೆ. ಪ್ರಿಯಾಮಣಿ ಹೇಳಿಕೆ ಈಗ ಸಖತ್ ಸದ್ದು ಮಾಡುತ್ತಿದೆ. ಗಾಸಿಪ್ ಪ್ರಿಯರ ಚರ್ಚೆಗೆ ಗ್ರಾಸವಾಗಿದೆ.

‘ಜವಾನ್’ ಬಳಿಕ ‘ಆರ್ಟಿಕಲ್ 370’ (Article 370) ಚಿತ್ರದಲ್ಲಿ ಪ್ರಿಯಾಮಣಿ ಯಾಮಿ ಗೌತಮಿ (Yami Gouthami) ಜೊತೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಿಯಾಮಣಿ ನಟನೆಗೆ ಮೆಚ್ಚುಗೆ ಸಿಕ್ಕಿದೆ.

Share This Article