ನಟ ಅಜಿತ್ ಕುಮಾರ್ ಗೆ ಶಸ್ತ್ರಚಿಕಿತ್ಸೆ: ಮ್ಯಾನೇಜರ್ ಪ್ರತಿಕ್ರಿಯೆ

Public TV
1 Min Read

ನಿನ್ನೆಯಷ್ಟೇ ತಮಿಳಿನ ಖ್ಯಾತ ನಟ ಅಜಿತ್ ಕುಮಾರ್ (Ajith Kumar) ಆಸ್ಪತ್ರೆಗೆ ದಾಖಲಾಗಿದ್ದರು. ಇದ್ದಕ್ಕಿದ್ದಂತೆಯೇ ಅಜಿತ್ ಪ್ರತಿಷ್ಠಿತ ಆಸ್ಪತ್ರೆಗೆ ಸೇರಿರುವುದು ನಾನಾ ಊಹಾಪೋಹಗಳನ್ನು ಸೃಷ್ಟಿ ಮಾಡಿತ್ತು. ನಟ ಮೆದುಳಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಹೇಳಲಾಗಿತ್ತು. ಈ ಎಲ್ಲದಕ್ಕೂ ಅಜಿತ್ ಮ್ಯಾನೇಜರ್ ಸುರೇಶ್ ಚಂದ್ರ ಸ್ಪಷ್ಟನೆ ನೀಡಿದ್ದಾರೆ. ಅವರು ಸಣ್ಣದೊಂದು ಶಸ್ತ್ರ ಚಿಕಿತ್ಸೆ (Surgery) ಮಾಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಸಾಮಾನ್ಯ ಆರೋಗ್ಯ ತಪಾಸಣೆಗಾಗಿ ಅಜಿತ್ ಆಸ್ಪತ್ರೆಗೆ (Hospital) ಭೇಟಿ ನೀಡಿದ್ದರು. ಈ ವೇಳೆ ಅವರ ಕಿವಿಯ ಕೆಳಗೆ ಸಣ್ಣದಾಗಿ ಊತ ಕಾಣಿಸಿಕೊಂಡಿರುವುದು ಗಮನಕ್ಕೆ ಬಂತು. ವೈದ್ಯರ ಸಲಹೆ ಮೇರೆಗೆ ಅದಕ್ಕೆ ಚಿಕಿತ್ಸೆ ನೀಡಲಾಯಿತು. ಅರ್ಧ ಗಂಟೆಯಲ್ಲಿ ಅದಕ್ಕೆ ಚಿಕಿತ್ಸೆ ನೀಡಲಾಗಿದೆ. ಸಾಮಾನ್ಯ ವಾರ್ಡ್ ನಲ್ಲಿ ಸದ್ಯ ಅವರು ಇದ್ದಾರೆ. ಯಾವುದೇ ಅಪಾಯವಿಲ್ಲ ಎಂದಿದ್ದಾರೆ ಮ್ಯಾನೇಜರ್.

ಮೆದುಳಿನ ಗಡ್ಡೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ ಎನ್ನುವುದು ಶುದ್ಧ ಸುಳ್ಳು. ಅಂಥದ್ದೇನೂ ಅವರಿಗೆ ಆಗಿಲ್ಲ. ಮೂರು ತಿಂಗಳ ವಿಶ್ರಾಂತಿ ಬೇಕು ಎನ್ನುವ ವದಂತಿಯನ್ನೂ ಮ್ಯಾನೇಜರ್ ತಳ್ಳಿ ಹಾಕಿದ್ದಾರೆ. ಆದಷ್ಟು ಬೇಗ ಅಜಿತ್ ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಸ್ಪಷ್ಟ ಪಡಿಸಿದ್ದಾರೆ. ಅತೀ ಶೀಘ್ರದಲ್ಲೇ ಡಿಸ್ಚಾರ್ಜ್ ಕೂಡ ಆಗಲಿದ್ದಾರೆ ಎಂದಿದ್ದಾರೆ.

 

ನಿನ್ನ ಅಜಿತ್ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಸಾಕಷ್ಟು ವದಂತಿಗಳು ಹರಡಿದ್ದವು. ಹಾಗಾಗಿ ಅಭಿಮಾನಿಗಳು ಸಹಜವಾಗಿ ಆತಂಕಕ್ಕೆ ಒಳಗಾಗಿದ್ದರು. ಯಾವುದೇ ಕಾರಣಕ್ಕೂ ಆತಂಕ ಪಡುವಂಥದ್ದು ಏನು ಆಗಿಲ್ಲ ಅಂದಿದ್ದಾರೆ ಸುರೇಶ್ ಚಂದ್ರ.

Share This Article