ಮೊದಲ ಮಗುವಿನ ನಿರೀಕ್ಷೆಯಲ್ಲಿ ಪರಿಣಿತಿ ಚೋಪ್ರಾ?

Public TV
1 Min Read

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ (Parineeti Chopra) ಕಳೆದ ವರ್ಷ ರಾಜಕಾರಣಿ ರಾಘವ್ (Raghav Chadha) ಜೊತೆ ದಾಂಪತ್ಯ(Wedding) ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ದೀಪಿಕಾ-ರಣ್‌ವೀರ್‌ ದಂಪತಿ ಗುಡ್‌ ನ್ಯೂಸ್‌ ಕೊಟ್ಟ ಬೆನ್ನಲ್ಲೇ ಪರಿಣಿತಿ ಕೂಡ ಸಿಹಿಸುದ್ದಿ ಕೊಡಲು ರೆಡಿಯಾದ್ರಾ? ಎಂಬ ಅನುಮಾನ ಅಭಿಮಾನಿಗಳಿಗೆ ಮೂಡಿದೆ. ನಟಿಯ ಬೇಬಿ ಬಂಪ್ ಲುಕ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಯಾಮಿ ಗೌತಮಿ, ದೀಪಿಕಾ ಪಡುಕೋಣೆ (Deepika Padukone), ವರುಣ್ ಧವನ್ ಪತ್ನಿ ನತಾಶಾ ಪ್ರೆಗ್ನೆನ್ಸಿ ಬಗ್ಗೆ ಗುಡ್ ನ್ಯೂಸ್ ಕೊಟ್ಟಿದ್ದರು. ಆ ಸಾಲಿಗೆ ಪ್ರಿಯಾಂಕಾ ಚೋಪ್ರಾ ಸಹೋದರಿ ಪರಿಣಿತಿ ಕೂಡ ಸೇರಿದ್ದಾರೆ ಎನ್ನಲಾಗಿದೆ. ಅದಕ್ಕೆ ಕಾರಣ ಸದ್ಯ ವೈರಲ್ ಆಗಿರುವ ವಿಡಿಯೋ ಆಗಿದೆ. ಇದನ್ನೂ ಓದಿ:ರಾಜಕಾರಣಿ ಜೊತೆಗಿನ ನಂಟಿನ ವಿಚಾರ: ಗರಂ ಆದ ನಟಿ ನಿವೇತಾ ಪೇತುರಾಜ್

 

View this post on Instagram

 

A post shared by Viral Bhayani (@viralbhayani)

ವಿಮಾನ ನಿಲ್ದಾಣಕ್ಕೆ ಎಂಟ್ರಿ ಕೊಟ್ಟಾಗ ಬಿಳಿ ಶರ್ಟ್ಸ್ ಮತ್ತು ಶಾಟ್ಸ್ ಅನ್ನು ನಟಿ ಧರಿಸಿದ್ದರು. ಡ್ರೆಸ್ ತುಂಬಾ ಲೂಸ್ ಆಗಿತ್ತು. ನಿಧಾನವಾಗಿ ನಡೆಯುತ್ತಾ ಪಾಪರಾಜಿಗಳಿಗೆ ನಟಿ ಸ್ಮೈಲ್ ಮಾಡಿದ್ದರು. ಪರಿಣಿತಿ ಲುಕ್ ನೋಡಿದ್ರೆ ಪ್ರೆಗ್ನೆಂಟ್ ಎಂದೇ ಹೇಳಲಾಗುತ್ತಿದೆ. ನಟಿ ಪ್ರೆಗ್ನೆಂಟ್ ಆದ್ರಾ ಎಂದು ನೆಟ್ಟಿಗರು ಪ್ರಶ್ನೆ ಮಾಡ್ತಿದ್ದಾರೆ.

ಹಲವು ವರ್ಷಗಳು ಪ್ರೀತಿಸಿ ಕಳೆದ ವರ್ಷ ಸೆ.24ರಂದು ಉದಯ್‌ಪುರದಲ್ಲಿ ಅದ್ಧೂರಿಯಾಗಿ ಪರಿಣಿತಿ-ರಾಘವ್ ಮದುವೆಯಾಗಿದ್ದಾರೆ. ಸದ್ಯ ಗುಡ್ ನ್ಯೂಸ್ ಬಗ್ಗೆ ಅಧಿಕೃತವಾಗಿ ಹೇಳ್ತಾರಾ ಎಂದು ಕಾದುನೋಡಬೇಕಿದೆ.

Share This Article