ಏಕಾಏಕಿ ಮನೆಯೊಳಗೆ ಚಿರತೆ ಎಂಟ್ರಿ- ನಾಜೂಕಾಗಿ ಹ್ಯಾಂಡಲ್‌ ಮಾಡಿದ ಬಾಲಕನ ಧೈರ್ಯಕ್ಕೊಂದು ಸಲಾಂ

Public TV
1 Min Read

ಮುಂಬೈ: ನೀವು ಮನೆಯಲ್ಲಿ ಸೋಫಾದ ಮೇಲೆ ಕುಳಿತು ಮೊಬೈಲ್ ಫೋನ್‌ನಲ್ಲಿ ಆಟವಾಡುತ್ತಿರುವ ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ. ಮನೆಯ ಮುಂದಿನ ಬಾಗಿಲು ಓಪನ್‌ ಇದೆ. ಈ ವೇಳೆ ಪ್ರಾಣಿಯೊಂದು ಮನೆಯೊಳಗೆ ಪ್ರವೇಶ ಮಾಡಿತು ಎಂದು ಭಾವಿಸಿಕೊಳ್ಳಿ. ಈಗ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತೆ? ಪ್ರಾಣಿಯನ್ನು ಓಡಿಸಲು ಪ್ರಯತ್ನಿಸುತ್ತೀರಿ. ಇಲ್ಲವೇ ಮೊಬೈಲ್‌ ಆಟದಲ್ಲಿ ಮುಳುಗಿರುತ್ತೀರಿ. ಆದಾಗ್ಯೂ ಆ ಪ್ರಾಣಿ ಚಿರತೆಯಾಗಿದ್ದರೆ ಖಂಡಿತವಾಗಿ ಗಾಬರಿಗೊಂಡು ನೀವು ಜೋರಾಗಿ ಕಿರುಚಾಡಬಹುದು. ಆದರೆ, ಆಘಾತಕಾರಿ ಘಟನೆಯೊಂದರಲ್ಲಿ 12 ವರ್ಷದ ಬಾಲಕನಿಗೆ ಅದೇ ಪರಿಸ್ಥಿತಿ ಎದುರಾಗಿದೆ.

ಮಹಾರಾಷ್ಟ್ರದ ನಾಸಿಕ ಮೂಲದ ಬಾಲಕ ಮನೆಯ ಸೋಫಾದಲ್ಲಿ ಮೊಬೈಲ್‌ನಲ್ಲಿ ಆಟವಾಡುತ್ತಿರುತ್ತಾನೆ. ಈ ವೇಳೆ ಚಿರತೆಯೊಂದು ಏಕಾಏಕಿ ಮನೆಯೊಳಗೆ ನುಗ್ಗಿದೆ. ಆದರೆ ಬಾಲಕ ಭಯಗೊಂಡು ಕಿರುಚಾಡಲಿಲ್ಲ. ಬದಲಾಗಿ ನಾಜೂಕಾಗಿ ಆ ಪರಿಸ್ಥಿತಿಯನ್ನು ನಿಭಾಯಿಸಿದ್ದಾನೆ. ಇದರ ಸಿಸಿಟಿವಿ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ವೀಡಿಯೋದಲ್ಲೇನಿದೆ..?: ಮನೆಯ ಮುಂದಿನ ಬಾಗಿಲು ಓಪನ್‌ ಇದ್ದು, ಬಾಲಕ ಒಳಗಡೆ ಸೋಫಾದಲ್ಲಿ ಮೊಬೈಲ್‌ನಲ್ಲಿ ಆಟವಾಡುತ್ತಾ ಕುಳಿತಿದ್ದಾನೆ. ಈ ಸಂದರ್ಭದಲ್ಲಿ ಚಿರತೆಯೊಂದು ಮನೆಯೊಳಗೆ ಎಂಟ್ರಿ ಕೊಟ್ಟಿದೆ. ಚಿರತೆ ಕೂಡ ಬಾಲಕನನ್ನು ಗಮನಿಸಿಲ್ಲ. ಇತ್ತ ಬಾಲಕ ಚಿರತೆ ಮುಂದೆ ಚಲಿಸುತ್ತಿದ್ದಂತೆಯೇ ಸೋಫಾದಿಂದ ಮೆಲ್ಲನೆ ಇಳಿದು ಬಾಗಿಲು ಹಾಕಿಕೊಂಡು ಹೊರಗಡೆ ಓಡಿದ್ದಾನೆ. ಈ ಎಲ್ಲಾ ದೃಶ್ಯ ಮನೆಯ ಸಿಸಿಟಿಚಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಬಾಲಕನ ಧೈರ್ಯವನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಈ ಘಟನೆ ಮಾಲೆಗಾಂವ್‌ನಲ್ಲಿ ನಡೆದಿದೆ. 12 ವರ್ಷದ ಮೋಹಿತ್ ಅಹಿರೆ ಆಟ ಆಡುತ್ತಿದ್ದಾಗ ಚಿರತೆ ಮನೆಯೊಳಗೆ ಪ್ರವೇಶಿಸಿತು. ಈ ವೇಳೆ ನಡೆದ ಘಟನೆಯನ್ನು ಬಾಲಕ ತನ್ನ ತಂದೆಗೆ ವಿವರಿಸಿದ್ದಾನೆ. ಅಬಳಿಕ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಜಾಕ್ವೆಲಿನ್‌ ಮನೆಗೆ ಬೆಂಕಿ- ಆತಂಕದಲ್ಲಿ ಫ್ಯಾನ್ಸ್

Share This Article