ಜಾಕ್ವೆಲಿನ್‌ ಮನೆಗೆ ಬೆಂಕಿ- ಆತಂಕದಲ್ಲಿ ಫ್ಯಾನ್ಸ್

Public TV
1 Min Read

ಸುಕೇಶ್ ಚಂದ್ರಶೇಖರ್ ಕೇಸ್ ವಿಚಾರಕ್ಕೆ ಕೋರ್ಟ್‌ಗೆ ನಟಿ ಜಾಕ್ವೆಲಿನ್  (Jacqueline Fernandez) ಅಲೆಯುತ್ತಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಇದು ಜಾಕ್ವೆಲಿನ್ ಫ್ಯಾನ್ಸ್‌ಗೆ ಶಾಕ್ ಕೊಟ್ಟಿದೆ. ‘ವಿಕ್ರಾಂತ್ ರೋಣ’ ((Vikrant Rona) ಬೆಡಗಿ ಜಾಕ್ವೆಲಿನ್ ಮನೆಗೆ ಬೆಂಕಿ ಬಿದ್ದಿದೆ. ಸದ್ಯ ಬೆಂಕಿ ಅವಘಡ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಮುಂಬೈನಲ್ಲಿರುವ ಜಾಕ್ವೆಲಿನ್ ಮನೆಗೆ ಬೆಂಕಿ ಬಿದ್ದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಮೂಲಗಳ ಪ್ರಕಾರ, ಜಾಕ್ವೆಲಿನ್ ಉಳಿದುಕೊಂಡಿರುವ ಅಪಾರ್ಟ್‌ಮೆಂಟ್‌ನ 14ನೇ ಮಹಡಿಗೆ ಬೆಂಕಿ ಬಿದ್ದಿದೆ. ಜಾಕ್ವೆಲಿನ್ ಮನೆ 15ನೇ ಮಹಡಿಯಲ್ಲಿದೆ. ಈ ವೇಳೆ, ನಟಿ ಶೂಟಿಂಗ್‌ವೊಂದಕ್ಕಾಗಿ ದುಬೈಗೆ ಹೋಗಿದ್ದಾರೆ ಎನ್ನಲಾಗಿದೆ. ಸದ್ಯ ನಟಿ ಸೇಫ್ ಆಗಿದ್ದಾರೆ ಎಂದು ತಿಳಿದು ಫ್ಯಾನ್ಸ್ ನಿರಾಳವಾಗಿದ್ದಾರೆ.

 

View this post on Instagram

 

A post shared by Viral Bhayani (@viralbhayani)

ಅಷ್ಟಕ್ಕೂ ಈ ಬೆಂಕಿ ಅವಘಡ ನಡೆದಿದ್ದು ಹೇಗೆ? ಏಕಾಎಕಿ ಅಲ್ಲಿ ಆಗಿದಾದ್ರೂ ಎನು? ಎಂಬುದರ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಸದ್ಯ ರಕ್ಕಮ್ಮ ಸೇಫ್ ಆಗಿರುವ ವಿಷ್ಯ ತಿಳಿದು ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇದನ್ನೂ ಓದಿ:ಅಭಿಮಾನಿಯ ಅಸಭ್ಯ ವರ್ತನೆಗೆ ‘ಮಗಧೀರ’ ನಟಿ ಶಾಕ್

ಕೇಸ್, ಕಾಂಟ್ರವರ್ಸಿಗಳಿಂದ ಸುಸ್ತಾಗಿರುವ ಜಾಕ್ವೆಲಿನ್ ಮತ್ತೆ ಸಿನಿಮಾದಲ್ಲಿ ನಟಿಸಲು ಆ್ಯಕ್ಟಿವ್ ಆಗಿದ್ದಾರೆ. ಹೊಸ ಬಗೆಯ ಕಥೆಗಳನ್ನು ಕೇಳ್ತಿದ್ದಾರೆ.

Share This Article