ನಿಶ್ಚಿತಾರ್ಥ ಸಂಭ್ರಮದಲ್ಲಿ ಕೌಸ್ತುಭ ಮಣಿ

Public TV
1 Min Read

ಕಿರುತೆರೆ ನಟಿ ಕೌಸ್ತುಭ ಮಣಿ (Kaustubha Mani) ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ‘ಗೌರಿ ಶಂಕರ’ (Gowri Shankara) ಸೀರಿಯಲ್‌ನಿಂದ ಹೊರಬರುತ್ತಿದ್ದಂತೆ ನಟಿ ಎಂಗೇಜ್‌ಮೆಂಟ್ (Engagement) ಮಾಡಿಕೊಳ್ಳುವ ಮೂಲಕ ಫ್ಯಾನ್ಸ್‌ಗೆ ಸಿಹಿಸುದ್ದಿ ನೀಡಿದ್ದಾರೆ.

‘ನನ್ನರಸಿ ರಾಧೆ’ ಸೀರಿಯಲ್ ಮೂಲಕ ಟಿವಿ ಪರದೆಗೆ ರಾಧೆಯಾಗಿ ಪರಿಚಿತರಾದ ಕೌಸ್ತುಭ ಇದೀಗ ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಸಿದ್ಧಾಂತ್ ಸತೀಶ್ ಎಂಬುವವರ ಜೊತೆ ನಿಶ್ಚಿತಾರ್ಥ ನಡೆದಿದೆ. ಇದೀಗ ಮದುವೆಯಾಗುವ ಹುಡುಗನ ಜೊತೆ ಚೆಂದದ ಫೋಟೋಶೂಟ್ ಶೇರ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ‘ಗೌರಿ ಶಂಕರ’ ಎಂಬ ಸೀರಿಯಲ್‌ನಲ್ಲಿ ನಟಿಸುತ್ತಿದ್ದರು. ಮದುವೆ ನಿಶ್ಚಯವಾಗಿದೆ ಎಂಬ ಕಾರಣಕ್ಕೆ ನಟಿ ಸೀರಿಯಲ್‌ನಿಂದ ಹೊರಬಂದಿದ್ದರು. ಈ ವಿಚಾರ ಫ್ಯಾನ್ಸ್‌ಗೆ ನಿರಾಸೆ ಮೂಡಿಸಿತ್ತು. ಇದನ್ನೂ ಓದಿ:ರವಿಚಂದ್ರನ್ ನಟನೆಯ ಹೊಸ ಸಿನಿಮಾದ ಪೋಸ್ಟರ್ ರಿಲೀಸ್

‘ರಾಮಾಚಾರಿ 2.0’ ಸಿನಿಮಾದಲ್ಲಿ ನಾಯಕಿಯಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿಗೆ ಜೋಡಿಯಾಗಿ ನಟಿಸಿದ್ದಾರೆ. ಶಿವಣ್ಣ, ಉಪೇಂದ್ರ, ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಈ ಚಿತ್ರದ ರಿಲೀಸ್ ಬಗ್ಗೆ ಮಾಹಿತಿ ಸಿಗಲಿದೆ.

Share This Article