20 ಕೋಟಿಯ ಸರದಾರ ಪ್ಯಾಟ್‌ ಕಮ್ಮಿನ್ಸ್‌ ಈಗ ಸನ್‌ರೈಸರ್ಸ್‌ ನಾಯಕ

By
2 Min Read

ಹೈದರಾಬಾದ್‌: 2022ರ ಐಪಿಎಲ್‌ ಟೂರ್ನಿಯಲ್ಲಿ ಹೊಸ ನಾಯಕನೊಂದಿಗೆ ಸನ್‌ರೈಸರ್ಸ್ ಹೈದರಾಬಾದ್‌ (Sunrisers Hyderabad) ತಂಡ ಸಜ್ಜಾಗಿದೆ. ಕಳೆದ ಮೂರು ಆವೃತ್ತಿಗಳಿಂದಲೂ ತಂಡದ ನಾಯಕನ ಬದಲಾವಣೆ ಮಾಡುತ್ತಲೇ ಬಂದಿರುವ ಎಸ್‌ಆರ್‌ಹೆಚ್‌ ತಂಡ ಈ ಬಾರಿ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ (Pat Cummins) ಅವರ ನಾಯತ್ವದಲ್ಲಿ ಕಣಕ್ಕಿಳಿಯಲಿದೆ.

2023ರಲ್ಲಿ ಆಸೀಸ್‌ ತಂಡಕ್ಕೆ ಐಸಿಸಿ ವಿಶ್ವ ಟೆಸ್ಟ್‌ ವಿಶ್ವಚಾಂಪಿಯನ್‌ ಶಿಪ್‌ (WTC) ಮತ್ತು ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ (ICC World Cup) ಗೆದ್ದುಕೊಟ್ಟ ಹೆಗ್ಗಳಿಕೆ ವೇಗಿ ಪ್ಯಾಟ್‌ ಕಮಿನ್ಸ್‌ ಅವರಿಗಿದೆ. ಅದರಲ್ಲೂ ಎರಡೂ ಟ್ರೋಫಿಗಳಲ್ಲಿಯೂ ಆಸ್ಟ್ರೇಲಿಯಾ ಫೈನಲ್‌ನಲ್ಲಿ ಭಾರತದೊಂದಿಗೆಯೇ ಜಿದ್ದಾಜಿದ್ದಿ ನಡೆಸಿತ್ತು. ಇದೇ ಕಾರಣಕ್ಕೆ ಮಿನಿ ಹರಾಜಿನಲ್ಲಿ ಪ್ಯಾಟ್‌ ಕಮಿನ್ಸ್‌ ಅವರನ್ನು ದಾಖಲೆಯ 20.50 ಕೋಟಿ ರೂ.ಗಳಿಗೆ ಹೈದರಾಬಾದ್‌ ತಂಡ ಖರೀದಿ ಮಾಡಿತು.

ಮಾರ್ಕ್ರಮ್‌ ನಾಯಕತ್ವಕ್ಕೆ ಕೊಕ್‌: 
SA T20 ಲೀಗ್‌ (ದಕ್ಷಿಣ ಆಫ್ರಿಕಾ ಟಿ20 ಲೀಗ್‌) ಟೂರ್ನಿಯಲ್ಲಿ ಸನ್‌ರೈಸರ್ಸ್‌ ಈಸ್ಟರ್ನ್‌ ಕೇಪ್‌ ತಂಡವನ್ನು ಮುನ್ನಡೆಸಿ ಬ್ಯಾಕ್‌ ಟು ಬ್ಯಾಕ್‌ ಟ್ರೋಫಿ ಗೆದ್ದುಕೊಟ್ಟ ಬಲಗೈ ಬ್ಯಾಟರ್‌ ಏಡೆನ್‌ ಮಾರ್ಕ್ರಮ್‌, 2023ರ ಟೂರ್ನಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಮುನ್ನಡೆಸಿದ್ದರು. ಕಳಪೆ ಪ್ರದರ್ಶನದಿಂದಾಗಿ ಹೈದರಾಬಾದ್‌ ತಂಡ ಲೀಗ್‌ ಸುತ್ತಿನಲ್ಲೇ ಹೊರಬಿದ್ದಿತು. ಆಡಿದ 14 ಪಂದ್ಯಗಳಲ್ಲಿ ಕೇವಲ 4 ಜಯದೊಂದಿಗೆ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿ ತನ್ನ ಅಭಿಯಾನ ಅಂತ್ಯಗೊಳಿಸಿತು. ಇದನ್ನೂ ಓದಿ: ಅಯ್ಯರ್‌, ಕಿಶನ್‌ ಕಾಂಟ್ರವರ್ಸಿ; ಸೋಶಿಯಲ್‌ ಮೀಡಿಯಾದಲ್ಲೂ ಟ್ರೆಂಡ್‌ – ಬಿಸಿಸಿಐ ಪರ ಪಾಕ್‌ ಮಾಜಿ ಕ್ರಿಕೆಟಿಗ ಬ್ಯಾಟಿಂಗ್‌

2016ರಲ್ಲಿ ಚಾಂಪಿಯನ್‌ ಆಗಿದ್ದ ಎಸ್‌ಆರ್‌ಹೆಚ್‌:
2016ರ ರಲ್ಲಿ ಡೇವಿಡ್‌ ವಾರ್ನರ್‌ ಅವರ ನಾಯಕತ್ವದಲ್ಲಿ ಐಪಿಎಲ್‌ ಕಿರೀಟ ಧರಿಸಿದ್ದ ಹೈದರಾಬಾದ್‌, ಈ ಬಾರಿ ಬಲಿಷ್ಠ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಪಡೆಯನ್ನು ಹೊಂದಿದ್ದು, ಸುಧಾರಿತ ಪ್ರದರ್ಶನ ನೀಡುವ ಉತ್ಸಾಹದಲ್ಲಿದೆ. ಇದನ್ನೂ ಓದಿ: 2024ರ ಐಪಿಎಲ್‌ ಧೋನಿಯ ಕೊನೆಯ ಸೀಸನ್‌ ಅಲ್ಲ – ಸುಳಿವು ಬಿಟ್ಟುಕೊಟ್ಟ ಬಾಲ್ಯದ ಗೆಳೆಯ

ದಾಖಲೆ ಬೆಲೆಗೆ ಪ್ಯಾಟ್‌ ಕಮ್ಮಿನ್ಸ್‌ ಹರಾಜು:
2024ರ ಐಪಿಎಲ್‌ ಟೂರ್ನಿಗೆ ಕಳೆದ ಡಿಸೆಂಬರ್‌ 19ರಂದು ದುಬೈನಲ್ಲಿ ನಡೆದ ಮಿನಿ ಹರಾಜಿನಲ್ಲಿ ಹೈದರಾಬಾದ್‌ ತಂಡ ಹಣದ ಹೊಳೆಯನ್ನೇ ಹರಿಸಿತು. 2023ರ ವಿಶ್ವಕಪ್‌ ಟೂರ್ನಿಯಲ್ಲಿ ಮಿಂಚಿದ್ದ ಟ್ರಾವಿಸ್‌ ಹೆಡ್‌ (6.80 ಕೋಟಿ ರೂ.) ಮತ್ತು ಪ್ಯಾಟ್‌ ಕಮಿನ್ಸ್‌ (20.50 ಕೋಟಿ ರೂ.) ಅವರನ್ನು ದುಬಾರಿ ಬೆಲೆಗೆ ಖರೀದಿ ಮಾಡಿತು. ಆದ್ರೆ ಆಲ್‌ರೌಂಡರ್‌ ವಾನಿಂದು ಹಸರಂಗ ಅವರನ್ನು ಕೇವಲ 1.50 ಕೋಟಿ ರೂ.ಗೆ ಖರೀದಿಸಿ ತನ್ನ ಬಲ ಹೆಚ್ಚಿಸಿಕೊಂಡಿತು. ಇದನ್ನೂ ಓದಿ: WTC – ಮತ್ತೆ ನಂ.1 ಸ್ಥಾನಕ್ಕೆ ಜಿಗಿದ ಭಾರತ – ಹಿಟ್‌ಮ್ಯಾನ್‌ ನಾಯಕತ್ವಕ್ಕೆ ಮೆಚ್ಚುಗೆ

Share This Article