ಡಿವೋರ್ಸ್‌ಗೆ ಮುಂದಾದ್ರಾ ನಯನತಾರಾ, ವಿಘ್ನೇಶ್ ಶಿವನ್?

By
1 Min Read

ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanatara) ಅಭಿಮಾನಿಗಳಿಗೆ (Fans) ಶಾಕಿಂಗ್ ನ್ಯೂಸ್‌ವೊಂದು ಸದ್ದು ಮಾಡುತ್ತಿದೆ. ನಯನತಾರಾ- ವಿಘ್ನೇಶ್ ಶಿವನ್ (Vignesh Shivan) ಡಿವೋರ್ಸ್ ಆಗಲಿದ್ದಾರೆ ಎಂಬ ಸುದ್ದಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ತಮಿಳಿನ ಬೆಸ್ಟ್ ಕಪಲ್ ಆಗಿ ಹೈಲೆಟ್ ಆಗಿದ್ದ ನಯನತಾರಾ ಮತ್ತು ವಿಘ್ನೇಶ್ ಶಿವನ್ ಬಾಳಲ್ಲಿ ಬಿರುಗಾಳಿ ಬೀಸಿದ್ಯಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡುತ್ತಿದೆ. ಅದಕ್ಕೆಲ್ಲಾ ಕಾರಣ ನಟಿ ನಯನತಾರಾ ಅವರು ಪತಿ ವಿಘ್ನೇಶ್‌ರನ್ನು ಅನ್‌ಫಾಲೋ ಮಾಡಿರೋದು. ಇದನ್ನೂ ಓದಿ:‘ರಂಗನಾಯಕ’ ಟ್ರೈಲರ್ ನಲ್ಲಿ ಯಶ್, ದರ್ಶನ್, ಸುದೀಪ್ ರನ್ನು ಎಳೆತಂದ ಗುರುಪ್ರಸಾದ್

ಪತ್ನಿಯನ್ನು ವಿಘ್ನೇಶ್ ಫಾಲೋ ಮಾಡ್ತಿದ್ದಾರೆ. ಆದರೆ ನಯನತಾರಾ ಅನ್‌ಫಾಲೋ ಮಾಡಿ ಫುಲ್ ಸೈಲೆಂಟ್ ಆಗಿದ್ದಾರೆ. ಬಳಿಕ ಸೋಷಿಯಲ್ ಮೀಡಿಯಾದಲ್ಲಿ ನಟಿ ಅಳಲು ತೋಡಿಕೊಂಡಿದ್ದಾರೆ. ‘ಕಣ್ಣಲ್ಲಿ ನೀರು ಬರುತ್ತಿದ್ದರೂ ಇದು ನನಗೆ ಸಿಕ್ಕಿತು’ ಎಂದು ಬರೆದುಕೊಂಡಿದ್ದಾರೆ. ಇಬ್ಬರ ನಡುವೆ ಇದೀಗ ಬಿರುಕು ಮೂಡಿದೆ ಎನ್ನಲಾಗುತ್ತಿದೆ. ಡಿವೋರ್ಸ್‌ಗೆ (Divorce) ಈ ಜೋಡಿ ಮುಂದಾಗಿದೆ ಎಂದೇ ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜನಾ? ಕಾದುನೋಡಬೇಕಿದೆ.

ಹಲವು ವರ್ಷಗಳು ಪ್ರೀತಿಸಿ, ಕಳೆದ ವರ್ಷ ಜೂನ್‌ನಲ್ಲಿ ನಯನತಾರಾ- ವಿಘ್ನೇಶ್ ಶಿವನ್ ಅದ್ಧೂರಿಯಾಗಿ ಮದುವೆಯಾದರು. ಬಳಿಕ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದರು. ಖುಷಿ ಖುಷಿಯಿಂದ ಬದುಕುತ್ತಿದ್ದ ಈ ಜೋಡಿ ಈಗ ಬೇರೇ ಆಗ್ತಾರೆ ಎಂದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದ್ದಂತೆ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ. ಈ ಸುದ್ದಿ ಸುಳ್ಳಾಗಲಿ ಎಂದು ಫ್ಯಾನ್ಸ್ ಆಶಿಸುತ್ತಿದ್ದಾರೆ.

Share This Article