ಸ್ಫೋಟದಲ್ಲಿ 40% ಗಾಯಗೊಂಡ ಮಹಿಳೆಗೆ ಸರ್ಜರಿ ಅಗತ್ಯ: ಡಾ.ಪ್ರದೀಪ್

Public TV
1 Min Read

ಬೆಂಗಳೂರು: ನಮ್ಮ ಆಸ್ಪತ್ರೆಯಲ್ಲಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟದಲ್ಲಿ (Rameshwaram Cafe Blast) ಗಾಯಗೊಂಡ ಮೂವರನ್ನು ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಮೂವರಲ್ಲಿ ಇಬ್ಬರ ಸ್ಥಿತಿ ನಾರ್ಮಲ್ ಇದೆ. ಓರ್ವ ಮಹಿಳೆಗೆ 40% ಗಾಯಗಳಾಗಿವೆ ಎಂದು ಬ್ರೂಕ್ ಫೀಲ್ಡ್ ಆಸ್ಪತ್ರೆಯ ಮೆಡಿಕಲ್ ನಿರ್ದೇಶಕ ಡಾ.ಪ್ರದೀಪ್ (Dr.Pradeep) ತಿಳಿಸಿದ್ದಾರೆ.

ಇಬ್ಬರು ಹೋಟೆಲ್ ಸಿಬ್ಬಂದಿ 25 ವರ್ಷ ವಯಸ್ಸಿನವರಾಗಿದ್ದು ಅವರಿಗೆ ಹೆಚ್ಚಿನ ಹಾನಿಯಾಗಿಲ್ಲ. ಸುಟ್ಟ ಗಾಯಗಳಾದ ಮಹಿಳೆಗೆ ಸರ್ಜರಿ ಮಾಡುವ ಅವಶ್ಯಕತೆ ಇದೆ. ಮೂವರಲ್ಲಿ ಯಾರ ಜೀವಕ್ಕೂ ಅಪಾಯವಿಲ್ಲ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಬಾಂಬ್‌ ಸ್ಫೋಟ – ಶಂಕಿತನ ಬಗ್ಗೆ ಸ್ಫೋಟಕ ಮಾಹಿತಿ ಕೊಟ್ಟ ಸಿಎಂ

ಸ್ಫೋಟದಲ್ಲಿ ದೇಹಕ್ಕೆ ಗ್ಲಾಸ್ ಚೂರುಗಳು ಸೇರಿರುವ ಅನುಮಾನವಿದೆ. ಈ ಗಾಜಿನ ಚೂರುಗಳು ಎಕ್ಸ್ ರೇಯಲ್ಲಿ ತಿಳಿಯುವುದಿಲ್ಲ. ಅದಕ್ಕಾಗಿ ಸಿಟಿ ಸ್ಕ್ಯಾನ್ ಮಾಡಬೇಕಾಗುತ್ತದೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಮೂರು ಜನರಿಗೆ ಶಬ್ದದಿಂದ ಕಿವಿಗೆ ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದು ಕಡಿಮೆ ಪ್ರಮಾಣದ ಸ್ಫೋಟದ ರೀತಿ ಕಾಣುತ್ತದೆ. ಆಸ್ಪತ್ರೆಗೆ ಗಾಯಾಳುಗಳು ಬಂದ ಕೂಡಲೇ ಬಟ್ಟೆಗಳನ್ನು ಬದಲಿಸಲಾಗಿದ್ದು, ಅವುಗಳನ್ನು ಎಫ್‍ಎಸ್‍ಎಲ್ ಎಫ್‍ಎಸ್‍ಎಲ್ ಅಧಿಕಾರಿಗಳಿಗೆ ಕೊಡುತ್ತೆವೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: Exclusive: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ – ಎದೆ ಝಲ್ ಎನಿಸುವಂತಿದೆ ಸಿಸಿಟಿವಿ ದೃಶ್ಯಗಳು

Share This Article