ಮದುವೆಗೆ ಸಜ್ಜಾದ ಡಿಬಾಸ್ ನಾಯಕಿ ಮೀರಾ ಚೋಪ್ರಾ

Public TV
1 Min Read

ಮುಂಬೈ ಬೆಡಗಿ, ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಸಹೋದರಿ ಮೀರಾ ಚೋಪ್ರಾ (Meera Chopra) ಇದೀಗ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮಾರ್ಚ್‌ನಲ್ಲಿ ಅದ್ಧೂರಿಯಾಗಿ ಮದುವೆಯಾಗಲು ರೆಡಿಯಾಗಿದ್ದಾರೆ.

ದರ್ಶನ್ (Darshan) ನಟನೆಯ ‘ಅರ್ಜುನ್’ (Arjun) ಚಿತ್ರದ ನಾಯಕಿ ಮೀರಾಗೆ ಇದೇ ಮಾರ್ಚ್ 11 ಮತ್ತು 12ರಂದು ಮದುವೆ ಸಮಾರಂಭ ನಡೆಯಲಿದೆ. ಜೈಪುರ ಮತ್ತು ದೆಹಲಿ ಹೆದ್ದಾರಿ ಬಳಿಯಿರುವ ಐಷಾರಾಮಿ ರೆಸಾರ್ಟ್‌ವೊಂದರಲ್ಲಿ ಮೀರಾ ಮದುವೆ (Wedding) ನಡೆಯಲಿದೆ. ಅದಕ್ಕಾಗಿ ಸಕಲ ಸಿದ್ಧತೆ ಕೂಡ ನಡೆಯುತ್ತಿದೆ.

ಮೀರಾ ಮದುವೆ ಆಗುತ್ತಿರುವ ವರನ ಬಗ್ಗೆ ಯಾವುದೇ ಮಾಹಿತಿ ರಿವೀಲ್ ಆಗಿಲ್ಲ. ಉದ್ಯಮಿಯ ಜೊತೆ ಮೀರಾ ಮದುವೆ ಎಂಬ ಸುದ್ದಿ ಹರಿದಾಡುತ್ತಿದೆ. ಮದುವೆ ದಿನ ರಿವೀಲ್ ಆಗಲಿರುವ ಫೋಟೋದಲ್ಲಿ ತಿಳಿಯಲಿದೆ. ಇದನ್ನೂ ಓದಿ:ನಿರ್ದೇಶಕ ಬಾಲಾ ನನಗೆ ಹೊಡೆದರು: ಖ್ಯಾತ ನಟಿಯ ಮಮಿತಾ ಆರೋಪ

ಮೀರಾ ಚೋಪ್ರಾ ಮೂಲತಃ ಮುಂಬೈ ಹುಡುಗಿ ಆಗಿದ್ರೂ ಅವರಿಗೆ ಕನ್ನಡಕ್ಕೆ ನಂಟಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ನಾಯಕಿ ನಟಿಸಿ ಸೈ ಎನಿಸಿಕೊಂಡಿದ್ದರು. ಕನ್ನಡಿಗರಿಗೆ ಅರ್ಜುನ್ ಚಿತ್ರದ ನಟಿ ಅಂದರೆ ಅವರು ಎಂಬುದು ನೆನಪಾಗುತ್ತಾರೆ.

ಸಹೋದರಿ ಸಂಬಂಧಿ ಪ್ರಿಯಾಂಕಾರಂತೆ ಅವರಿಗೆ ಮೀರಾ ಬಾಲಿವುಡ್‌ನಲ್ಲಿ ಗಟ್ಟಿ ನೆಲೆ ಸಿಗಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಇದ್ದರೂ ಕೂಡ ಸಿನಿಮಾರಂಗ ಅವರ ಕೈಹಿಡಿಯಲಿಲ್ಲ.

‘1920 ಲಂಡನ್’, ‘ಸೆಕ್ಷನ್ 375’, ‘ಕಾಮಾತಿಪುರ’ ಎಂಬ ಹಿಂದಿ ಸಿನಿಮಾಗಳಲ್ಲಿ ಮೀರಾ ಚೋಪ್ರಾ ನಟಿಸಿದ್ದಾರೆ. ‘ಸಫೇದ್’ ಸಿನಿಮಾ ಕೂಡ ಬಿಡುಗಡೆಗೆ ಸಿದ್ಧವಾಗಿದೆ.

Share This Article