ಮಗು ಜೋರಾಗಿ ಅಳುತ್ತೆಂದು ನೆಲಕ್ಕೆ ಹೊಡೆದ ತಂದೆ!

Public TV
1 Min Read

ಧಾರವಾಡ: ಮಗು ಬಹಳ ಅಳುತ್ತದೆ ಎಂದು ಅದನ್ನು ಸಮಾಧಾನ ಮಾಡಲಾಗದೇ ತಂದೆಯೊಬ್ಬ ತನ್ನ ಹೆಣ್ಣು ಮಗುವನ್ನೇ ನೆಲಕ್ಕೆ ಎಸೆದು ಪೈಶಾಚಿಕ ಕೃತ್ಯ ಮೆರೆದಿರುವ ಘಟನೆ ಧಾರವಾಡ (Dharwad) ತಾಲೂಕಿನ ಯಾದವಾಡ ಗ್ರಾಮದಲ್ಲಿ ನಡೆದಿದೆ.

ಶಂಭುಲಿಂಗಯ್ಯ ಶಹಾಪುರಮಠ ಎಂಬ ತಂದೆಯೇ ತನ್ನ ಒಂದು ವರ್ಷದ ಹೆಣ್ಣು ಮಗುವನ್ನು ಗೋಡೆಗೆ ಎಸೆದ ಪಾಪಿ ತಂದೆ. ಕಳೆದ ರಾತ್ರಿ ಮಗು ವಿಪರೀತ ಅಳುತ್ತಿತ್ತು. ಅದನ್ನು ಸಮಾಧಾನ ಮಾಡಲಾಗದೇ ಶಂಭುಲಿಂಗಯ್ಯ ನೆಲಕ್ಕೆ ಎತ್ತಿ ಬಿಸಾಕಿದ್ದಾನೆ. ಇದರಿಂದ ಮಗುವಿನ ತಲೆಗೆ ಬಲವಾದ ಪೆಟ್ಟು ಬಿದ್ದಿದೆ.

ಸದ್ಯ ಮಗುವಿಗೆ ಕಿಮ್ಸ್‌ನ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕುಟುಂಬಸ್ಥರು ಪಾಪಿ ತಂದೆ ಶಂಭುಲಿಂಗಯ್ಯನ ವಿರುದ್ಧ ದೂರು ನೀಡಿದ್ದು, ಗರಗ ಠಾಣೆ ಪೊಲೀಸರು ಶಂಭುಲಿಂಗಯ್ಯನನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ನಾಮಫಲಕಗಳಲ್ಲಿ ಶೇ.60 ಕನ್ನಡ ಕಡ್ಡಾಯಗೊಳಿಸಿ ನೀಡಿದ್ದ ಗಡುವು 2 ವಾರ ವಿಸ್ತರಣೆ

Share This Article