ಶಾಲೆಯಲ್ಲಿ ಕೊಟ್ಟ ಪ್ರೊಟೀನ್ ಮಾತ್ರೆಯಿಂದ ಬಾಲಕಿ ಸಾವು- ಪೋಷಕರ ಆರೋಪ

Public TV
1 Min Read

ಬೆಂಗಳೂರು: ಶಾಲೆಯಲ್ಲಿ ಕೊಟ್ಟ ಪ್ರೊಟೀನ್ ಮಾತ್ರೆಯಿಂದ ಬಾಲಕಿ ಸಾವನ್ನಪ್ಪಿರುವುದಾಗಿ ಪೋಷಕರು ಆರೋಪ ಮಾಡಿದ್ದಾರೆ.

ಈ ಘಟನೆ ಬನಶಂಕರಿಯ ಕಾವೇರಿ ನಗರದಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಜೋಯಾ (9) ಎಂದು ಗುರುತಿಸಲಾಗಿದೆ. ಈಕೆ ಕರಿಸಂದ್ರದ ನಮ್ಮೂರ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ 4 ನೇ ತರಗತಿಯಲ್ಲಿ ಓದುತ್ತಿದ್ದಳು.

ಮಂಗಳವಾರ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಕರು ಪೌಷ್ಠಿಕಾಂಶ ಮಾತ್ರೆ (Protein Tablets) ನೀಡಿದ್ರಂತೆ. ಇದನ್ನ ಸೇವಿಸಿದ ಜೋಯಾ ಅಲ್ಲೇ ಅಸ್ವಸ್ಥಳಾಗಿದ್ದಾಳೆ. ಕೂಡಲೇ ಶಾಲೆಯ ಟೀಚರ್ಸ್ ಸ್ಥಳೀಯ ಆಸ್ಪತ್ರೆಗೆ ಬಾಲಕಿಯನ್ನ ಸೇರಿಸಿದ್ದರು. ಆದರೆ ರಾತ್ರಿ ಬಾಲಕಿ ಮತ್ತೆ ಅಸ್ವಸ್ಥಳಾಗಿದ್ದು, ಚಿಕಿತ್ಸೆ ಫಲಿಸದೇ ಮೃಪಟ್ಟಿದ್ದಾಳೆ. ಇದನ್ನೂ ಓದಿ: ಅಬ್ದುಲ್ ಕಲಾಂ ವಸತಿ ಪ್ರಾಂಶುಪಾಲರ ಎಡವಟ್ಟು- ಕ್ರೂಸರ್ ಟಾಪ್‍ನಲ್ಲಿ ಮಕ್ಕಳ ಡೇಂಜರ್ ಜರ್ನಿ

Share This Article