ಹೊಸ ಅತಿಥಿ ಆಗಮನದ ಬೆನ್ನಲ್ಲೇ ಇಲಿಯಾನಾ ಕೊಟ್ರು ಗುಡ್ ನ್ಯೂಸ್

Public TV
2 Min Read

ಬಾಲಿವುಡ್ ಬ್ಯೂಟಿ ಇಲಿಯಾನಾ ಡಿ ಕ್ರೂಸ್ (Illeana  D’cruz) ಅವರು 8 ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮನೆಗೆ ಪುಟ್ಟ ರಾಜಕುಮಾರ ಆಗಮನದ ಬೆನ್ನಲ್ಲೇ ನಟಿ ಮತ್ತೊಂದು ಸಿಹಿಸುದ್ದಿ ನೀಡಿದ್ದಾರೆ. ಇಲಿಯಾನಾ ಮತ್ತೆ ನಟನೆಗೆ ಮರಳಿದ್ದಾರೆ.

ಮಗನ ಆರೈಕೆಯ ನಡುವೆಯೂ ಸಿನಿಮಾ ಬಗ್ಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಹೊಸ ಚಿತ್ರದ ಟ್ರೈಲರ್ ಮೂಲಕ ನಟಿ ಸದ್ದು ಮಾಡ್ತಿದ್ದಾರೆ. ‘ತೇರಾ ಕ್ಯಾ ಹೋಗಾ ಲವ್ಲಿ’ (Tera Kya Hoga Lovely) ಎಂಬ ಸಿನಿಮಾದಲ್ಲಿ ನಟಿ ಇಲಿಯಾನಾ ನಾಯಕಿಯಾಗಿ ನಟಿಸಿದ್ದಾರೆ.

ಇಲಿಯಾನಾ, ಕರಣ್ ಕುಂದ್ರಾ, ರಣದೀಪ್ ಹೂಡಾ (Randeep Hooda) ನಟನೆಯ ‘ತೇರಾ ಕ್ಯಾ ಹೋಗಾ ಲವ್ಲಿ’ ಚಿತ್ರದ ಟ್ರೈಲರ್‌ ರಿಲೀಸ್‌ ಆಗಿದೆ. ಟ್ರೈಲರ್‌ನಲ್ಲಿ ಮುಖದ ಬಣ್ಣ ಮತ್ತು ವರದಕ್ಷಿಣೆಯ ವಿಚಾರವಾಗಿ ಸಮಾಜ ನೋಡುವ ರೀತಿಯ ಬಗ್ಗೆ ತೋರಿಸಲಾಗಿದೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ನೋಡಿ ಫ್ಯಾನ್ಸ್‌ ಫಿದಾ ಆಗಿದ್ದು, ಸಿನಿಮಾ ಕುರಿತು ಅಭಿಮಾನಿಗಳಿಗೆ ಹೆಚ್ಚಿನ ನಿರೀಕ್ಷೆ ಮೂಡಿಸಿದೆ.

ಬಲ್ವಿಂದರ್ ಸಿಂಗ್ ಜಂಜುವಾ ನಿರ್ದೇಶನದ ಸಿನಿಮಾದಲ್ಲಿ ಇಲಿಯಾನಾ ಪಾತ್ರ ಭಿನ್ನವಾಗಿದ್ದು, ಮಧ್ಯಮ ಕುಟುಂಬದ ಹುಡುಗಿಯಾಗಿರುವ ನಾಯಕಿ ಇಲಿಯಾನಾ ಮದುವೆ ಸಂದರ್ಭದಲ್ಲಿ ಏನೆಲ್ಲ ಕಷ್ಟಗಳನ್ನು ಎದುರಿಸುತ್ತಾರೆ. ಬ್ಯೂಟಿ ಬಗ್ಗೆ ಸಮಾಜದ ನಡೆಯೇನು ಎಂಬುದನ್ನು ತೋರಿಸುವ ವಿಭಿನ್ನ ಸಿನಿಮಾ ಇದಾಗಿದೆ. ಇದನ್ನೂ ಓದಿ:ತಲೈವಾ ಜೊತೆ ಸಿನಿಮಾ ಮಾಡ್ತಿದ್ದಾರೆ ಬಾಲಿವುಡ್ ಖ್ಯಾತ ನಿರ್ಮಾಪಕ

ಇಲಿಯಾನಾ ಜೊತೆ ಮೊದಲ ಬಾರಿಗೆ ತೆರೆಹಂಚಿಕೊಂಡಿರುವ ರಣದೀಪ್ ಹೂಡಾ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದಾರೆ. ‘ತೇರಾ ಕ್ಯಾ ಹೋಗಾ ಲವ್ಲಿ’ ಚಿತ್ರವು ಮಹಿಳಾ ದಿನಾಚರಣೆ ಮಾರ್ಚ್ 8ರಂದು ರಿಲೀಸ್ ಆಗುತ್ತಿದೆ. ಮುದ್ದು ಮಗನ ಆಗಮನದ ನಂತರ ರಿಲೀಸ್ ಆಗ್ತಿರುವ ಈ ಚಿತ್ರದ ಬಗ್ಗೆ ಇಲಿಯಾನಾಗೆ ಹೆಚ್ಚಿನ ನಿರೀಕ್ಷೆಯಿದೆ.

ಕನ್ನಡದ ಹುಡುಗ- ಹುಡುಗಿ ನಟಿ ಇಲಿಯಾನಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಆಗಸ್ಟ್ 1ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ವಿಚಾರವನ್ನ ತಡವಾಗಿ ರಿವೀಲ್ ಮಾಡಿದ್ದರು. ಕೋವಾ ಫೀನಕ್ಸ್ ಡೋಲನ್ ಎಂದು ಮಗುವಿಗೆ ಹೆಸರನ್ನು ಇಟ್ಟಿದ್ದರು. ಪದಗಳಲ್ಲಿ ನಮ್ಮ ಸಂತಸವನ್ನು ಹೇಳಿಕೊಳ್ಳಲು ಆಗುತ್ತಿಲ್ಲ. ಈ ಪ್ರಪಂಚಕ್ಕೆ ನಮ್ಮ ಮಗುವಿನ ಆಗಮನವಾಗಿದೆ. ಅವನಿಗೆ ಸ್ವಾಗತ ಎಂದು ಸಂಭ್ರಮದಿಂದ ನಟಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.

ಧ್ಯಾನ್ ಜೊತೆ ಕನ್ನಡದ ಹುಡುಗ-ಹುಡುಗಿ ಸಿನಿಮಾದಲ್ಲಿ ಇಲಿಯಾನಾ ಸೊಂಟ ಬಳುಕಿಸಿದ್ದರು. ಸೌತ್- ಹಿಂದಿ ಸಿನಿಮಾಗಳ ಮೂಲಕ ಗಮನ ಸೆಳೆದಿರೋ ಈ ಸುಂದರಿ ಏಪ್ರಿಲ್‌ನಲ್ಲಿ ತಾವು ಪ್ರೆಗ್ನೆಂಟ್ ಎನ್ನುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇಲಿಯಾನಾಗೆ ಇನ್ನೂ ಮದುವೆ ಆಗಿಲ್ಲ. ಅಂದ್ಹಾಗೆ ಇಲಿಯಾನಾ, ಮೈಕಲ್ ಡೋಲನ್ ಎಂಬುವವರ ಜೊತೆ ಎಂಗೇಜ್ ಆಗಿದ್ದಾರೆ. ಮುದ್ದು ಮಗ ಕೋವಾ ಇವರ ಪ್ರೀತಿಗೆ ಸಾಕ್ಷಿಯಾಗಿದೆ.

Share This Article