ಸಿದ್ದರಾಮಯ್ಯನವರೇ ನಿಮ್ಮಷ್ಟು ನೀಚತನಕ್ಕೆ ನಾನು ಇಳಿಯೋದಿಲ್ಲ – ಸಿಎಂ ವಿರುದ್ಧ ಹರಿಹಾಯ್ದ ಜೋಶಿ

Public TV
1 Min Read

ಹುಬ್ಬಳ್ಳಿ: ನಿಮಗೆ ಮಾನ ಮರ್ಯಾದೆ ಇಲ್ಲ‌‌ ಅಂದ್ರೆ ನನಗೂ ಇಲ್ಲ ಅಂದುಕೊಂಡಿದ್ದಿರಾ? ಸಿದ್ದರಾಮಯ್ಯನವರೇ (Siddaramaiah) ನಿಮ್ಮಷ್ಟು ನೀಚತನಕ್ಕೆ ನಾನು ಇಳಿಯುವುದಿಲ್ಲ ಅಂತ, ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹರಿಹಾಯ್ದಿದ್ದಾರೆ.

ಮಹದಾಯಿ ವಿಚಾರವಾಗಿ ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡಿರುವ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಪ್ರತಿಕ್ರಿಯೆ ನೀಡಿ ಅವರು, ಸಿದ್ದರಾಮಯ್ಯ ಅವರಿಗೆ ಮಹಾದಾಯಿಗೆ (Mhadei River) EC ಸಿಕ್ಕಿದೆ ಅಂತಾನೂ ಗೊತ್ತಿಲ್ಲ. ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಿ, ನೀವು ಏಕವಚನದಲ್ಲಿ ಮಾತನಾಡಿದ್ದಿರಿ ನಿಮ್ಮ ಸಂಸ್ಕೃತಿಗೆ ನಾನು ಇಳಿಯುವದಿಲ್ಲ. ನೀವು ಹೇಗೆ ಪ್ರಮಾಣವಚನ ಸ್ವೀಕರಿಸಿದ್ದೀರೋ, ನಾನೂ ಹಾಗೆ ಪ್ರಮಾಣವಚನ ಸ್ವೀಕಾರ ಮಾಡಿದ್ದೇನೆ. ಆಡಳಿತ ಅಧಿಕಾರ ನಿಮಗೆ ಜಾಸ್ತಿ ಇರಬಹುದು. ಆದ್ರೆ ಕೇಂದ್ರ ಸರ್ಕಾರದ ಒಬ್ಬ ಮಂತ್ರಿ ರಾಜ್ಯದ ಮುಖ್ಯಮಂತ್ರಿ ಸಂವಿಧಾನದಲ್ಲಿ ಒಂದೇ ಎಂದು ಹೇಳಿದ್ದಾರೆ.

ನಾನು ಮಾನ ಮರ್ಯಾದೆ ಬಿಟ್ಟು ವರ್ತನೆ ಮಾಡುವುದಿಲ್ಲ. ಸಿದ್ದರಾಮಯ್ಯ ಏನು ಫೈಲ್ ನೋಡದೆ ಉಡಾಫೆ ಹೊಡೀತಾರೆ. ಕಾಂಗ್ರೆಸ್ ಎಲ್ಲಾ ಸಂದರ್ಭದಲ್ಲಿ ಕಳಸಾ ಬಂಡೂರಿಗೆ ಅನ್ಯಾಯ ಮಾಡಿದೆ. ಡಿಪಿಆರ್ ಸಹ ಬಿಜೆಪಿ ಮಾಡಿದೆ, ಆದರೆ ಸೋನಿಯಾ ಗಾಂಧಿ ಗೋವಾಗೆ ಹೋಗಿ ಹನಿ‌ ನೀರು ಕೊಡಲ್ಲ ಅಂದ್ರು ಫಾರೆಸ್ಟ್ ಕ್ಲಿಯರ್ ಬೇಕಾಗಿದೆ, ತಾಂತ್ರಿಕ ಸಮಸ್ಯೆಯಿದೆ. ಹುಲಿ‌ ಸಂರಕ್ಷಣೆ ಪ್ರಾಧಿಕಾರದ ಅನುಮತಿ ಬೇಕಾಗಿದೆ. ಆದರೆ ಅದನ್ನು ಕಾಂಗ್ರೆಸ್ ಸರ್ಕಾರ ಮಾಡಿಲ್ಲ, ಇವರಿಗೆ ಎಷ್ಟು ನಾಲಿಗೆ ಇದೆ ಅಂತ ಗೊತ್ತಾಗಿದೆ. ದೇಶದಲ್ಲಿ ಇವತ್ತು ಕಾಂಗ್ರೆಸ್‌ ಯಾವ ಪರಿಸ್ಥಿತಿಗೆ ಬಂದಿದೆ ಅಂದ್ರೆ ಎರಡು ಸೀಟ್‌ ಕೊಡಿ, ಮೂರು ಸೀಟ್‌ ಕೊಡಿ ಅಂತ ತೃಣಮೂಲ ಕಾಂಗ್ರೆಸ್‌ ಬಳಿ ಭಿಕ್ಷೆ ಬೇಡ್ತಿದ್ದೀರಿ. ‌ಮುಂದೆ ಈಗ ಇರುವ ಸ್ಥಾನಗಳೂ ಕಡಿಮೆಯಾಗಲಿದೆ ಎಂದು ಕುಟುಕಿದ್ದಾರೆ.

ಸಿಟಿ ರವಿ ಮತ್ತು ಶೋಭಾ ಕರಂದ್ಲಾಜೆ ಗೋ ಬ್ಯಾಕ್ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಸ್ವಂತ ಬಲ ಮತ್ತು ಅಭಿವೃದ್ಧಿಯಿಂದ ಗೆಲ್ಲೋದಿಲ್ಲ. ಆದ್ದರಿಂದ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್‌ ಷಡ್ಯಂತ್ರಕ್ಕೆ ಜನ ಬಲಿಯಾಗೋದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

Share This Article