ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಶ್ವಿನ್‌ ಕಮಾಲ್‌ – ಕುಂಬ್ಳೆ ದಾಖಲೆ ಅಳಿಸಿ ಅಗ್ರಸ್ಥಾನಕ್ಕೇರಿದ ಸ್ಪಿನ್‌ ಮಾಂತ್ರಿಕ

By
2 Min Read

ರಾಂಚಿ: ಇಲ್ಲಿನ JSCA ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್‌ನ 3ನೇ ದಿನದಾಟದಲ್ಲಿ ಟೀಂ ಇಂಡಿಯಾದ ಆಫ್‌ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ (Ashwin) ಟೆಸ್ಟ್‌ ಕ್ರಿಕೆಟ್‌ನಲ್ಲಿ (Test Cricket) ಭಾರತದಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

3ನೇ ದಿನದ ಆಟದಲ್ಲಿ ಇಂಗ್ಲೆಂಡ್‌ (England) ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ಬೆನ್‌ ಡಕೆಟ್‌, ಓಲಿ ಪೋಪ್‌, ಜೋ ರೂಟ್‌ ಅವರನ್ನು ಔಟ್‌ ಮಾಡುವ ಮೂಲಕ ಟೆಸ್ಟ್‌ನಲ್ಲಿ ಭಾರತದಲ್ಲಿ ಅತಿಹೆಚ್ಚು ವಿಕೆಟ್‌ ಪಡೆದ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಭಾರತದಲ್ಲಿ ನಡೆದ ಟೆಸ್ಟ್‌ ಪಂದ್ಯಗಳಲ್ಲಿ 351 ವಿಕೆಟ್‌ ಪಡೆದಿರುವ ಅಶ್ವಿನ್‌ 350 ವಿಕೆಟ್‌ ಪಡೆದ ಅಗ್ರಸ್ಥಾನದಲ್ಲಿದ್ದ ಅನಿಲ್‌ ಕುಂಬ್ಳೆ (Anil Kumble) ಅವರ ದಾಖಲೆಯನ್ನು ಅಳಿಸಿಹಾಕಿದ್ದಾರೆ. ಇದನ್ನೂ ಓದಿ: WPL 2024: 2 ರನ್‌ಗಳ ರೋಚಕ ಜಯ – ಮೊದಲ ಗೆಲುವನ್ನು ಅಭಿಮಾನಿ ದೇವ್ರುಗಳಿಗೆ ಅರ್ಪಿಸಿದ ‌RCB

ಟೀಂ ಇಂಡಿಯಾದ ಬೌಲಿಂಗ್‌ ದಿಗ್ಗಜ ಅನಿಲ್‌ ಕುಂಬ್ಳೆ ಭಾರತದಲ್ಲಿ ಆಡಿದ 63 ಪಂದ್ಯಗಳಲ್ಲಿ 24.88 ಸರಾಸರಿಯಲ್ಲಿ 350 ವಿಕೆಟ್‌ಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದರು. ಆದ್ರೆ ಅಶ್ವಿನ್‌ ಸ್ವದೇಶದಲ್ಲಿ ಆಡಿದ 59 ಪಂದ್ಯಗಳಲ್ಲಿ 21.40 ಸರಾಸರಿಯಲ್ಲಿ 351 ವಿಕೆಟ್‌ ಪಡೆದು ಅಗ್ರಸ್ಥಾನ ತಲುಪಿದ್ದಾರೆ. ಇದೊಂದಿಗೆ ಎರಡು ಪ್ರತ್ಯೇಕ ದೇಶಗಳ ವಿರುದ್ಧ ನಡೆದ ಪಂದ್ಯಗಳಲ್ಲಿ 100ಕ್ಕೂ ಹೆಚ್ಚು ವಿಕೆಟ್‌ ಪಡೆದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಡೆದ 22 ಪಂದ್ಯಗಳಲ್ಲಿ 114 ವಿಕೆಟ್‌, ಇಂಗ್ಲೆಂಡ್‌ ವಿರುದ್ಧ ನಡೆದ 23 ಪಂದ್ಯಗಳಲ್ಲಿ 102 ವಿಕೆಟ್‌ ಪಡೆದು ಅಶ್ವಿನ್‌ ಈ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: ಬಶೀರ್‌ ಸ್ಪಿನ್‌ ದಾಳಿಗೆ ಭಾರತ ಕಂಗಾಲು – ಇಂಗ್ಲೆಂಡ್‌ಗೆ 134 ರನ್‌ಗಳ ಮುನ್ನಡೆ

ಟೆಸ್ಟ್‌ನಲ್ಲಿ ಭಾರತದಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಸ್ಪಿನ್ನರ್ಸ್‌:

  • ಆರ್. ಅಶ್ವಿನ್ – 351*
  • ಅನಿಲ್ ಕುಂಬ್ಳೆ – 350
  • ಹರ್ಭಜನ್ ಸಿಂಗ್ – 265
  • ಕಪಿಲ್ ದೇವ್ – 219
  • ರವೀಂದ್ರ ಜಡೇಜಾ – 210*

ಪ್ರತ್ಯೇಕ ದೇಶಗಳ ವಿರುದ್ಧ 100+ ವಿಕೆಟ್‌ ಪಡೆದ ಮೊದಲ ಭಾರತೀಯ ಅಶ್ವಿನ್‌:

  • ಆರ್‌.ಅಶ್ವಿನ್‌ – ಆಸ್ಟ್ರೇಲಿಯಾ ವಿರುದ್ಧ – 22 ಪಂದ್ಯ – 114 ವಿಕೆಟ್‌
  • ಅನಿಲ್‌ ಕುಂಬ್ಳೆ – ಆಸ್ಟ್ರೇಲಿಯಾ ವಿರುದ್ಧ – 20 ಪಂದ್ಯ – 111 ವಿಕೆಟ್‌
  • ಆರ್‌.ಅಶ್ವಿನ್‌ – ಇಂಗ್ಲೆಂಡ್‌ ವಿರುದ್ಧ – 23 ಪಂದ್ಯ – 102 ವಿಕೆಟ್‌
  • ಕಪಿಲ್‌ ದೇವ್‌ – ಪಾಕಿಸ್ತಾನ ವಿರುದ್ಧ – 29 ಪಂದ್ಯ – 99 ವಿಕೆಟ್‌

Share This Article