ಮದುವೆಯಾಗುವುದಾಗಿ 13 ವರ್ಷಗಳ ಕಾಲ ನಿರಂತರ ಅತ್ಯಾಚಾರ ಆರೋಪ – ನಟ ಮನೋಜ್ ರಜಪೂತ್ ಅರೆಸ್ಟ್

Public TV
1 Min Read

ರಾಯ್‍ಪುರ್: ಮದುವೆಯಾಗುವುದಾಗಿ ನಂಬಿಸಿ ಸಂಬಂಧಿಯೊಬ್ಬರ ಮೇಲೆ ಕಳೆದ 13 ವರ್ಷಗಳಿಂದ ನಿರಂತರ ಅತ್ಯಾಚಾರ ಎಸಗಿದ ಆರೋಪದ ಮೇಲೆ ಛತ್ತೀಸ್‍ಗಢದ (Chhattisgarh) ನಟ, ನಿರ್ದೇಶಕ ಹಾಗೂ ನಿರ್ಮಾಪಕ ಮನೋಜ್ ರಜಪೂತ್‍ನನ್ನು ಪೊಲೀಸರು (Police) ಬಂಧಿಸಿದ್ದಾರೆ.

ಮದುವೆಯಾಗುವುದಾಗಿ 2011 ರಿಂದ ರಜಪೂತ್ ತನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾನೆ ಎಂದು 29 ವರ್ಷದ ಸಂತ್ರಸ್ತೆ ಆರೋಪಿಸಿದ್ದಾಳೆ. ಈ ಬಗ್ಗೆ ಫೆ.22 ರಂದು ಓಲ್ಡ್ ಭಿಲಾಯ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಇದೀಗ ಪೊಲೀಸರು ಮನೋಜ್ ರಜಪೂತ್‍ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: 3 ವರ್ಷಗಳಿಂದ ವರ್ಗಾವಣೆಯಾಗಿಲ್ಲ; ಪೊಲೀಸರಿಂದಲೇ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ!

ಆರೋಪಿಯ ವಿರುದ್ಧ ಅತ್ಯಾಚಾರ, ಅಸ್ವಾಭಾವಿಕ ಲೈಂಗಿಕತೆ ಮತ್ತು ಬೆದರಿಕೆ ಪ್ರಕರಣಗಳು ದಾಖಲಾಗಿದೆ. ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಸಹ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಸ್ಥಳೀಯ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರುಪಡಿಸಿದಾಗ ನ್ಯಾಯಾಲಯ ಪೋಕ್ಸೊ ಪ್ರಕರಣವನ್ನು ರದ್ದುಪಡಿಸಿದೆ.

2011ರಲ್ಲಿ ಪೋಕ್ಸೊ ಕಾನೂನು ಅಸ್ತಿತ್ವದಲ್ಲಿರಲಿಲ್ಲ (ಶೋಷಣೆ ಪ್ರಾರಂಭವಾದಾಗ) ಎಂದು ನ್ಯಾಯಾಲಯ (Court) ಹೇಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕೆಇಎ ಪ್ರಶ್ನೆಪತ್ರಿಕೆ ಲೀಕ್ ಮಾಡಲು 40 ಲಕ್ಷ ನೀಡಿದ ಆರೋಪ – ಸರ್ಕಾರಿ ಕೆಲಸಕ್ಕೆ ಸೇರಿ ತಿಂಗಳಲ್ಲೇ ಹಾಸ್ಟೆಲ್ ವಾರ್ಡನ್ ಜೈಲುಪಾಲು

Share This Article