ಮತ್ತೆ ಒಂದಾಯಿತು ಧನುಷ್ ಮತ್ತು ಪ್ರಕಾಶ್ ರೈ ಜೋಡಿ

By
1 Min Read

ನ್ನಡದ ನಟ, ಪರಭಾಷೆಗಳಲ್ಲಿಯೂ ಕರುನಾಡನ್ನು ಪ್ರತಿನಿಧಿಸುವ ಪ್ರಕಾಶ್ ರಾಜ್ (Prakash Raj) ಅಲಿಯಾಸ್ ಪ್ರಕಾಶ್ ರೈ, ತಮ್ಮ ಅಭಿನಯದ ಮೂಲಕವೇ ಎಲ್ಲರನ್ನು ಸೆಳೆದವರು. ಯಾವುದೇ ಪಾತ್ರ ಕೊಟ್ಟರು ಅವರು ಲೀಲಾಜಾಲವಾಗಿ ನಟಿಸುತ್ತಾರೆ. ಕೆಲವೊಮ್ಮೆ ಭಾರವಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಮತ್ತೆ ಕೆಲವೊಮ್ಮೆ ಪಕ್ಕಾ ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸಿದ್ದೂ ಇದೆ. ಪಾತ್ರ ಚಿಕ್ಕದೇ ಇರಲಿ, ದೊಡ್ಡದ್ದೇ ಇರಲಿ ಅದಕ್ಕೆ ಪ್ರಕಾಶ್ ರಾಜ್ ನ್ಯಾಯ  ಒದಗಿಸುತ್ತಾರೆ. ಹೀಗಾಗಿ ಕಾಲಿವುಡ್ ನಟ ಧನುಷ್ (Dhanush) ತಮ್ಮ ನಿರ್ದೇಶನದಲ್ಲಿ ಪ್ರಕಾಶ್ ರಾಜ್ ಅವರಿಗೊಂದು ತೂಕದ ಪಾತ್ರ ನೀಡಿದ್ದಾರೆ.

2017ರಲ್ಲಿ ತೆರೆಕಂಡ ‘ಪಾ ಪಂಡಿ’ ಸಿನಿಮಾದ ಮೂಲಕ ಧನುಷ್ ನಿರ್ದೇಶಕರಾಗಿಯೂ ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ಒಂದಷ್ಟು ಗ್ಯಾಪ್ ಬಳಿಕ ನಿಲವುಕ್ಕು ಎನ್ ಮೆಲ್ ಎನ್ನಡಿ ಕೋಬಮ್ ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಇದೀಗ ರಾಯನ್ (Rayan) ಚಿತ್ರದ ಮೂಲಕ ಧನುಷ್ ಮತ್ತೊಮ್ಮ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಇದು ಅವರ 50ನೇ ಚಿತ್ರ ಅನ್ನೋದು ವಿಶೇಷ. ಸನ್ ಪಿಕ್ಚರ್ಸ್ ನಡಿ ಮೂಡಿ ಬರ್ತಿರುವ ರಾಯನ್ ಬಳಗಕ್ಕೀಗ ಕನ್ನಡದ ಪ್ರಕಾಶ್ ರಾಜ್ ಎಂಟ್ರಿ ಕೊಟ್ಟಿದ್ದಾರೆ.

ಪ್ರಕಾಶ್ ರಾಜ್ ಹಾಗೂ ಧನುಷ್ ‘ತಿರುಚಿತ್ರಂಬಲಂ’ ಸಿನಿಮಾದಲ್ಲಿ ಕಮಾಲ್ ಮಾಡಿದ್ದರು. ಅಪ್ಪ ಮಗನಾಗಿ ಪ್ರೇಕ್ಷಕರನ್ನು ರಂಜಿಸಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಈಗ ರಾಯನ್ ಚಿತ್ರದ ಮೂಲಕ ಮತ್ತೊಂದು ಸುಂದರ ಪಯಣಕ್ಕೆ ಧನುಷ್, ಪ್ರಕಾಶ್ ರಾಜ್ ಸಜ್ಜಾಗಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಕಾಶ್ ರಾಜ್ ಅವರ ಆನ್ ಬೋರ್ಡ್ ಲುಕ್ ಹಂಚಿಕೊಂಡು ಧನುಷ್ ತಮ್ಮ ತಂಡಕ್ಕೆ ಸ್ವಾಗತಿಸಿದ್ದಾರೆ.

ಕುರ್ಚಿ ಮೇಲೆ ಕುಳಿತಿರುವ ಪ್ರಕಾಶ್ ರಾಜ್ ಯಾವುದೋ ಗಾಢ ಯೋಚನೆಯಲ್ಲಿ ಮಗ್ನರಾಗಿದ್ದಾರೆ. ಪೋಸ್ಟರ್ ನಲ್ಲಿ ಕಪ್ಪು ಬೆಳಕಿನ ಆಟವಿದೆ. ಎಆರ್ ರೆಹಮಾನ್ ಸಂಗೀತ ಸಂಯೋಜನೆಯಲ್ಲಿ ತಯಾರಾಗುತ್ತಿರುವ ರಾಯನ್ ಚಿತ್ರದಲ್ಲಿ ದೊಡ್ಡ ತಾರಾಬಗಳವಿದೆ.

Share This Article