ಲೋಕಸಭೆಗೆ ಬೆಂಗಳೂರು ಗ್ರಾಮಾಂತರದಿಂದ ಡಾ.ಮಂಜುನಾಥ್‌ ಸ್ಪರ್ಧೆ? – ಆರ್‌.ಅಶೋಕ್‌ ಹೇಳಿದ್ದೇನು?

Public TV
1 Min Read

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಡಾ.ಮಂಜುನಾಥ್ (Dr.Manjunath) ಬಿಜೆಪಿ ಅಭ್ಯರ್ಥಿಯಾಗುವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ (R.Ashok) ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತಾಡಿದ ಆರ್.ಅಶೋಕ್, ಬಹಳ ದಿನಗಳಿಂದ ಡಾ.ಮಂಜುನಾಥ್ ಹೆಸರು ಓಡಾಡ್ತಿದೆ. ಮಂಜುನಾಥ್‌ ಅವರಿಗೆ ನಮ್ಮಿಂದ ಟಿಕೆಟ್ ಕೊಡಬೇಕು ಅನ್ನುವ ಬಗ್ಗೆ ನಮ್ಮ ಪಕ್ಷದಲ್ಲಿ ಇನ್ನೂ ಚರ್ಚೆಗೆ ಬಂದಿಲ್ಲ. ಸೀಟು ಹೊಂದಾಣಿಕೆ ಸೂತ್ರ ಇನ್ನೂ ಆಗಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಸತಿ ಶಾಲೆಗಳಲ್ಲಿ CBSE ಪಠ್ಯಕ್ರಮ ಜಾರಿ: ಮಹದೇವಪ್ಪ

ಡಾ.ಮಂಜುನಾಥ್ ಇನ್ನೂ ಯಾವ ಪಕ್ಷಕ್ಕೂ ಸೇರಿದವರಲ್ಲ. ಅವರು ಜೆಡಿಎಸ್‌ಗೆ ಸೇರ್ತಾರೋ ಬಿಜೆಪಿಗೆ ಸೇರ್ತಾರೋ ಅಂತ ನೋಡಬೇಕು. ಅವರಿಗೆ ಟಿಕೆಟ್ ಕೊಡುವ ಬಗ್ಗೆ ಹೈಕಮಾಂಡ್ ನಿರ್ಣಯ ಮಾಡಲಿದೆ. ನಮ್ಮ ಕೇಂದ್ರದ ನಾಯಕರು ಎಲ್ಲ ಕಡೆ ಎರಡು ಸರ್ವೆ ಮಾಡಿದ್ದಾರೆ. ಅದರಲ್ಲಿ ಯಾರ ಹೆಸರು ಬರುತ್ತೋ ನೋಡಬೇಕು ಎಂದು ಹೇಳಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಸಿ.ಟಿ.ರವಿ, ಡಾ.ಮಂಜುನಾಥ್ ಒಳ್ಳೆಯ ಮನುಷ್ಯ. ಅಂಥವರು ರಾಜಕೀಯಕ್ಕೆ ಬಂದರೆ ಒಳ್ಳೆಯದೇ ಆಗುತ್ತೆ. ಅವರ ರಾಜಕೀಯ ಪ್ರವೇಶವನ್ನು ನಾನು ಸ್ವಾಗತಿಸುತ್ತೇನೆ. ಆದ್ರೆ ಯಾವ ಪಕ್ಷದಿಂದ ಅನ್ನೋದು ಅವರಿಗೆ ಬಿಟ್ಟಿದ್ದು. ಆದ್ರೆ ನಮ್ಮ ಪಕ್ಷದಲ್ಲಿ ಅಭ್ಯರ್ಥಿ ಯಾರನ್ನ ಮಾಡ್ತಾರೆ ಅಂತಾ ಗೊತ್ತಿಲ್ಲ. ನಮ್ಮ ಪಕ್ಷದ ವೇದಿಕೆಯಲ್ಲಿ ಇದರ ಬಗ್ಗೆ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ರಾಜ್ಯದ ಮುಖ್ಯಮಂತ್ರಿ ಅಮ್ಮಾ.. ತಾಯಿ.. ಅಂತ ಬೇಡುವ ಸ್ಥಿತಿ ಉದ್ಭವಿಸಿದೆ: ಹೆಚ್‌ಡಿಕೆ ಲೇವಡಿ

Share This Article