‘ದಂಗಲ್’ ನಟಿ ಸುಹಾನಿ ಪೋಷಕರನ್ನು ಭೇಟಿಯಾದ ಆಮೀರ್ ಖಾನ್

Public TV
1 Min Read

ಬಾಲಿವುಡ್‌ನ ಹೆಸರಾಂತ ನಟ ಆಮೀರ್ ಖಾನ್ (Aamir Khan) ನಟನೆಯ ‘ದಂಗಲ್’ (Dangal) ಸಿನಿಮಾದಲ್ಲಿ ಬಬಿತಾ ಪೋಗಟ್ ಪಾತ್ರದಲ್ಲಿ ನಟಿಸಿದ್ದ ಸುಹಾನಿ ಭಟ್ನಾಗರ್ (Suhani Bhatnagar) ಫೆ.17ರಂದು ವಿಧಿವಶರಾದರು. ಈ ಬೆನ್ನಲ್ಲೇ ಸುಹಾನಿ ನಿವಾಸಕ್ಕೆ ಭೇಟಿ ನೀಡಿ ಆಮೀರ್ ಸಂತೈಸಿದ್ದಾರೆ. ಇದನ್ನೂ ಓದಿ:ಮದುವೆ ನಂತರ ಮೊದಲ ಬಾರಿಗೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡ ರಕುಲ್ ದಂಪತಿ

ಸುಹಾನಿ ನಿಧನರಾಗಿ 5 ದಿನಗಳ ನಂತರ ನಟ ಆಮೀರ್ ಇಂದು (ಫೆ.22) ಸಂಜೆ 6 ಗಂಟೆಗೆ ಫರಿದಾಬಾದ್‌ನಲ್ಲಿರುವ ನಟಿಯ ಕುಟುಂಬಸ್ಥರನ್ನು ಭೇಟಿಯಾಗಿದ್ದಾರೆ. ಸುಹಾನಿ ನಿಧನದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು. ಬಳಿಕ ಸುಹಾನಿ ಕುಟುಂಬಕ್ಕೆ ಆಮೀರ್ ಧೈರ್ಯ ತುಂಬಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಸುಹಾನಿ ನಿಧನಕ್ಕೆ ಆಮೀರ್‌ ಸಂತಾಪ ಸೂಚಿಸಿದ್ದರು. ಈಗ ಅವರ ಕುಟುಂಬದವರನ್ನು ನಟ ಭೇಟಿಯಾಗಿರುವುದ್ದಕ್ಕೆ‌ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

ಸುಹಾನಿ ಸಾವಿಗೆ ಬಾಲಿವುಡ್ ಕಂಬನಿ ಮಿಡಿದಿದೆ. ಆಪ್ತರ ಪ್ರಕಾರ, ಸುಹಾನಿ ತಮ್ಮ ಕಾಲಿನ ಮೂಳೆ ಮುರಿತದ ಸಲುವಾಗಿ ಚಿಕಿತ್ಸೆ ಪಡೆದುಕೊಂಡು, ಅದಕ್ಕೆ ಸಂಬಂಧಿಸಿದ ಔಷಧಿ ಸೇವಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ಔಷಧಿಯ ಅಡ್ಡ ಪರಿಣಾಮದಿಂದ ಸಾವು ಸಂಭವಿಸಿರಬಹುದು ಎನ್ನಲಾಗುತ್ತಿದೆ. ಇದನ್ನೂ ಓದಿ:ವಿಜಯ್ ಅಡ್ಡಾದಿಂದ ‘ಭೀಮ’ ಮೇಕಿಂಗ್ ವಿಡಿಯೋ ಔಟ್

ಸಾವಿನ ಕುರಿತಂತೆ ನಾನಾ ಸುದ್ದಿಗಳು ಹರಡಿದ್ದು, ಸಾವಿನ ಬಗ್ಗೆ ನಿಖರವಾದ ಕಾರಣ ಇನ್ನಷ್ಟೇ ತಿಳಿಯಬೇಕಿದೆ. ಆಕೆ ದೆಹಲಿಯ ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನುವ ಮಾಹಿತಿ ಇದೆ.

Share This Article