21 ವರ್ಷದ ಹುಡುಗಿ ಜೊತೆ 50ರ ವಯಸ್ಸಿನ ನಟನ ಮದುವೆ

Public TV
1 Min Read

ಟ ಕಮ್ ಫಿಟ್‌ನೆಸ್ ಟ್ರೈನರ್ ಸಾಹಿಲ್ ಖಾನ್ (Sahil Khan) ಅವರು 21ನೇ ವಯಸ್ಸಿನ ಯುವತಿ ಜೊತೆ 2ನೇ ಮದುವೆಯಾಗುವ (Wedding) ಮೂಲಕ ಅಚ್ಚರಿ ಮೂಡಿಸಿದ್ದಾರೆ. 50ರ ಅಂಚಿನಲ್ಲಿರುವ ಸಾಹಿಲ್ ಇದೀಗ ಸಾಮಾಜಿಕ ಜಾಲತಾಣದಲ್ಲಿ 2ನೇ ಪತ್ನಿಯ ಪರಿಚಯ ಮಾಡಿಸಿದ್ದಾರೆ. ಇದನ್ನೂ ಓದಿ:ರಾಕುಲ್ ಮದುವೆಯಲ್ಲಿ ಹೆಜ್ಜೆ ಹಾಕಲಿದ್ದಾರೆ ಶಿಲ್ಪಾ ಶೆಟ್ಟಿ ದಂಪತಿ

ಮದುವೆ ವಯಸ್ಸಿಗೆ ಬಂದಿರುವ ಹುಡುಗರು ತಮಗೆ ಹುಡುಗಿ ಸಿಗುತ್ತಿಲ್ಲ ಎಂದು ಗೋಳಾಡುತ್ತಿದ್ದಾರೆ. ಇದರ ನಡುವೆ 50 ವರ್ಷ ಸಮೀಪದಲ್ಲಿರುವ  ನಟ ಸಾಹಿಲ್ ಖಾನ್, 21ರ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.

 

View this post on Instagram

 

A post shared by Sahil Khan (@sahilkhan)

ʻಸುಂದರ ಯುವತಿಯ ಜೊತೆ ಫೋಟೋ ಶೇರ್ ಮಾಡಿಕೊಂಡಿರುವ ನಟ, ಈಕೆ ನನ್ನ ಗೊಂಬೆʼ ಸಾಹಿಲ್‌ ಖಾನ್ ಎಂದಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಇಬ್ಬರೂ ಜೊತೆಯಾಗಿ ಇರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ 2ನೇ ಮದುವೆ ಬಗ್ಗೆ ನಟ ಮಾಹಿತಿ ನೀಡಿದ್ದಾರೆ. ಆದರೆ ಪತ್ನಿಯ ಹೆಸರಾಗಲಿ ಆಕೆಯ ಬಗ್ಗೆ ಯಾವುದೇ ಮಾಹಿತಿ ನಟ ಹಂಚಿಕೊಂಡಿಲ್ಲ. ಸಾಹಿಲ್ ಪತ್ನಿ ನೋಡಲು ಗೊಂಬೆಯಂತೆಯೇ ಇದ್ದಾರೆ. ಸದ್ಯ ನಟನ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

2003ರಲ್ಲಿ ನಿಗರ್ ಖಾನ್ ಎಂಬುವವರನ್ನು ಸಾಹಿಲ್ ಖಾನ್ ಮದುವೆಯಾಗಿದ್ದರು. ಕೆಲ ಮನಸ್ತಾಪಗಳಿಂದ 2005ರಲ್ಲಿ ಮೊದಲ ಪತ್ನಿಗೆ ನಟ ಡಿವೋರ್ಸ್ ನೀಡಿದರು. ಅಂದಹಾಗೆ, ಸಾಹಿಲ್ ಅವರು, ಬಾಲಿವುಡ್‌ನ ಸ್ಟೈಲ್‌, ಎಕ್ಸ್‌ಕ್ಯೂಸ್‌ ಮಿ ಚಿತ್ರಗಳಲ್ಲಿ ನಟಿಸಿದ್ದಾರೆ.

Share This Article