ನಟಿ ರಶ್ಮಿಕಾ ಸಂಚರಿಸುತ್ತಿದ್ದ ವಿಮಾನ ತುರ್ತು ಭೂ ಸ್ಪರ್ಶ

Public TV
1 Min Read

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಸಂಚರಿಸುತ್ತಿದ್ದ ವಿಮಾನ ತುರ್ತು ಭೂ ಸ್ಪರ್ಶ ಮಾಡಿದ್ದು, ಕೆಲ ಹೊತ್ತು ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಈ ಘಟನೆ ನಟಿ ಸೇರಿದಂತೆ ಸಹ ಪ್ರಯಾಣಿಕರಿಗೂ ಬೆಚ್ಚಿ ಬೀಳಿಸಿತ್ತು. ಸದ್ಯ ರಶ್ಮಿಕಾ ಸೇಫ್ ಆಗಿದ್ದಾರೆ.

ಬಾಲಿವುಡ್ ನಟಿ ಶ್ರದ್ಧಾ ದಾಸ್ (Shraddha Das) ಜೊತೆ ರಶ್ಮಿಕಾ ವಿಮಾನದಲ್ಲಿ ಕುಳಿತಿರುವ ಫೋಟೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಆತಂಕದ ಕ್ಷಣದ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಈ ಅನುಭವವನ್ನು ಹಂಚಿಕೊಂಡ ಅವರು, ಇಂದು ಸಾವಿನಿಂದ ತಪ್ಪಿಸಿಕೊಂಡಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಫೆ.17ರಂದು ರಶ್ಮಿಕಾ ಸಂಚರಿಸುತ್ತಿದ್ದ ವಿಮಾನವು ಮುಂಬೈಯಿಂದ ಹೈದರಾಬಾದ್‌ಗೆ ಪ್ರಯಾಣಿಸುತ್ತಿತ್ತು. ಮುಂಬೈ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಹೊತ್ತಿನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ 30 ನಿಮಿಷಗಳ ನಂತರ ವಿಮಾನ ಮತ್ತೆ ಮುಂಬೈಗೆ ಮರಳಿತ್ತು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.‌ ಇದನ್ನೂ ಓದಿ:ಹುಲಿ ಉಗುರು ಪೆಂಡೆಂಟ್‌ ವಿಚಾರವಾಗಿ ವರ್ತೂರುಗೆ ಕುಟುಕಿದ ಜಗ್ಗೇಶ್‌

ಸದ್ಯ ‘ಪುಷ್ಪ’ ನಟಿ ಸೇಫ್ ಆಗಿರುವ ಸುದ್ದಿ ಕೇಳಿ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಮನೆಗೆ ಸುರಕ್ಷಿತವಾಗಿ ಕಿರಿಕ್ ಪಾರ್ಟಿ ನಟಿ ಮರಳಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಪುಷ್ಪ 2(Pushpa 2), ಅನಿಮಲ್ ಪಾರ್ಕ್, ರೈನ್‌ಬೋ, ಚಾವಾ, ಗರ್ಲ್‌ಫ್ರೆಂಡ್ ಸೇರಿದಂತೆ ಹಲವು ಸಿನಿಮಾಗಳಿವೆ.

Share This Article