ಕಾಂಗ್ರೆಸ್‌ನವ್ರು ಕೊಟ್ಟ ಕಾರ್ಡ್ ನೀಡಿದ್ರೆ ಮೈತ್ರಿ ಪಕ್ಷದಿಂದ ಗಿಫ್ಟ್

Public TV
1 Min Read

– ಕಾಂಗ್ರೆಸ್‌ನ ಗಿಫ್ಟ್ ಕಾರ್ಡ್ ಪಾಲಿಟಿಕ್ಸ್‌ಗೆ ಜೆಡಿಎಸ್-ಬಿಜೆಪಿ ಕೌಂಟರ್

ರಾಮನಗರ: ಲೋಕಸಭಾ ಚುನಾವಣೆ ಸಮೀಪ ಹಿನ್ನೆಲೆ ಕಾಂಗ್ರೆಸ್‌ನ (Congress) ಗಿಫ್ಟ್ ಕಾರ್ಡ್ ಪಾಲಿಟಿಕ್ಸ್‌ಗೆ ಜೆಡಿಎಸ್-ಬಿಜೆಪಿ ಕೌಂಟರ್ ಕೊಡಲು ಮುಂದಾಗಿದೆ.

ಕಳೆದ ಚುನಾವಣೆ ವೇಳೆ ರಾಮನಗರ ಹಾಗೂ ಮಾಗಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನಿಂದ ಗಿಫ್ಟ್ ಕಾರ್ಡ್ ಹಂಚಿಕೆ ಹಿನ್ನೆಲೆ ಗಿಫ್ಟ್ ನೀಡದ ಕಾಂಗ್ರೆಸ್ಸಿಗರಿಗೆ ಜೆಡಿಎಸ್ ಮಾಜಿ ಶಾಸಕ ಎ.ಮಂಜುನಾಥ್‌ (A.Manjunath) ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: BJP- JDS ಸೀಟು ಹಂಚಿಕೆ ಇನ್ನೂ ಆಗಿಲ್ಲ: ಪ್ರಹ್ಲಾದ್ ಜೋಶಿ

ಮಾಗಡಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಮತದಾರರಿಗೆ ಗಿಫ್ಟ್ ಕಾರ್ಡ್ ಕೊಟ್ಟು ಕಾಂಗ್ರೆಸ್‌ನವ್ರು ಮೋಸ ಮಾಡಿದ್ದಾರೆ. ಸರ್ಕಾರ ಬಂದು ವರ್ಷ ಸಮೀಪಿಸಿದ್ರೂ ಗಿಫ್ಟ್‌ಗಳನ್ನ ನೀಡದೇ ಜನರನ್ನು ಯಾಮಾರಿಸಿದ್ದಾರೆ. ಹಾಗಾಗಿ ಮೋಸ ಹೋದ ಜನರಿಗೆ ಜೆಡಿಎಸ್-ಬಿಜೆಪಿಯಿಂದ ಗಿಫ್ಟ್ ಕೊಡುತ್ತೇವೆ. ಕಾಂಗ್ರೆಸ್‌ನವರು ಕೊಟ್ಟ ಕಾರ್ಡ್ ಅನ್ನ ನಮ್ಮ ಬಳಿ ತಂದು ಕೊಟ್ಟರೆ, ನೀವು ಕಾಂಗ್ರೆಸ್ಸಿಗೆ ಮತ ಹಾಕಿ ಮೋಸ ಹೋಗಿದ್ದೀರಾ ಎಂದು ತಿಳಿಹೇಳಿ ನಾವೇ ಗಿಫ್ಟ್ ಕೊಡ್ತೇವೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ತಿಳಿಸಿದ್ದಾರೆ.

ಕಾಂಗ್ರೆಸ್‌ನವರು ಹಂಚಿದ್ದ ಗಿಫ್ಟ್ ಕಾರ್ಡ್‌ಗಳು ಈಗಾಗಲೇ ಎಕ್ಸ್ಫೈರ್ ಆಗಿದೆ. ಆದರೂ ಆ ಕಾರ್ಡ್‌ಗಳಿಗೆ ನಾವೇ ಗಿಫ್ಟ್ ಹಂಚುತ್ತೇವೆ. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಗೂ ಕೂಡಾ ಗಿಫ್ಟ್ ಕೊಡಲು ನಾವು ಸಿದ್ಧರಿದ್ದೇವೆ. ಕಾರ್ಡ್ ನಮ್ಮ ಬಳಿ ತಂದು ಕೊಟ್ಟು ಗಿಫ್ಟ್ ಪಡೆದುಕೊಳ್ಳಬಹದು ಎಂದು ಮಾಜಿ ಶಾಸಕ ಎ.ಮಂಜುನಾಥ್ ತಿಳಿಸಿದ್ದಾರೆ. ಇದನ್ನೂ ಓದಿ: ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಅಳವಡಿಕೆಗೆ 3 ತಿಂಗಳ ಅವಧಿ ವಿಸ್ತರಣೆ

Share This Article