Bigg Boss: ಅದೃಷ್ಟ ತಂದ ತಂಗಿ ಮಗನನ್ನು ಮುದ್ದಾಡಿದ ಕಾರ್ತಿಕ್ ಮಹೇಶ್

Public TV
1 Min Read

‘ಬಿಗ್ ಬಾಸ್ ಸೀಸನ್ 10’ರ (Bigg Boss Kannada 10) ವಿನ್ನರ್ ಕಾರ್ತಿಕ್ ಮಹೇಶ್ (Karthik Mahesh) ಅವರು ಇಷ್ಟು ದಿನ ಅಭಿಮಾನಿಗಳನ್ನು ಭೇಟಿ ಮಾಡುವುದರಲ್ಲಿ ಬ್ಯುಸಿಯಾಗಿದ್ದರು. ಇದೀಗ ಬಿಡುವು ಮಾಡಿಕೊಂಡು ಅಳಿಮಯ್ಯನ ಜೊತೆಗೆ ಕಾರ್ತಿಕ್ ಸಮಯ ಕಳೆದಿದ್ದಾರೆ. ತಂಗಿ ಮಗನನ್ನು ಹಿಡಿದು ಮುದ್ದಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಗುವಿನ ಜೊತೆಯಿರುವ ಕಾರ್ತಿಕ್ ಫೋಟೋ ಹಂಚಿಕೊಂಡಿದ್ದಾರೆ.

ಇಷ್ಟು ದಿನ ಕಾರ್ತಿಕ್, ಬಿಗ್ ಬಾಸ್ ಟ್ರೋಫಿ ಗೆದ್ದ ಸಂಭ್ರಮದಲ್ಲಿದ್ದರು. ಹಲವು ಸಂದರ್ಶನ ಮತ್ತು ಅಭಿಮಾನಿಗಳನ್ನು ಭೇಟಿ ಮಾಡುವುದರಲ್ಲಿ ಬ್ಯುಸಿಯಾಗಿದ್ದರು. ಈಗ ಕಾರ್ತಿಕ್, ತಾಯಿಯ ತವರು ಮನೆಗೆ ಭೇಟಿ ನೀಡಿದ್ದಾರೆ. ಕಾರ್ತಿಕ್ ಅವರ ತಾಯಿ ಮೀನಾಕ್ಷಿ ತವರೂರು ಚಾಮರಾಜನಗರ. ಕಾರ್ತಿಕ್ ಮತ್ತು ಸಹೋದರಿ ಹುಟ್ಟಿ, ಬೆಳೆದಿದ್ದು ಅಲ್ಲೇ. ಇದೀಗ ಕಾರ್ತಿಕ್ ತಂಗಿಯ ಬಾಣಂತನ ಕೂಡ ಚಾಮರಾಜನಗರದಲ್ಲೇ ಆಗುತ್ತಿದೆ.

ಇದೀಗ ತಂಗಿ ಹಾಗೂ ಅಳಿಮಯ್ಯನ ನೋಡಲು ಚಾಮರಾಜನಗರಕ್ಕೆ ಕಾರ್ತಿಕ್ ಭೇಟಿ ಕೊಟ್ಟಿದ್ದಾರೆ. ತಮ್ಮ ಅಳಿಮಯ್ಯನನ್ನ ಅಪ್ಪಿ ಮುದ್ದಾಡಿದ್ದಾರೆ. ಕಾರ್ತಿಕ್ ತಂಗಿ ಮಗುಗೆ ಇನ್ನೂ ಹೆಸರಿಟ್ಟಿಲ್ಲ. ಆದರೆ, ಅಳಿಮಯ್ಯನನ್ನ ‘ಸಿಂಬಾ’ (Simba) ಅಂತ ಕರೆಯುತ್ತಿದ್ದಾರೆ. ಇದನ್ನೂ ಓದಿ:ಥ್ರಿಲ್ ಕೊಟ್ಟ ‘ಸಾರಾಂಶ’ ಪಾತ್ರ: ನಟ ದೀಪಿಕ್ ಸುಬ್ರಮಣ್ಯ

 

View this post on Instagram

 

A post shared by Karthik Mahesh (@karthi_mahesh)

ಕಾರ್ತಿಕ್ ಬಿಗ್ ಬಾಸ್‌ಗೆ (Bigg Boss Kannada 10) ಹೋಗುವ ಸಮಯದಲ್ಲಿ ತಂಗಿ ತುಂಬು ಗರ್ಭೀಣಿಯಾಗಿದ್ದರು. ಮನೆಗೆ ಮುದ್ದಾದ ಗಂಡು ಮಗನ ಆಗಮನವಾಗಿದೆ. ಬಿಗ್ ಬಾಸ್ ಮನೆಯಲ್ಲಿರುವಾಗ ಕಾರ್ತಿಕ್ ತಂಗಿ ಚಿಂತೆಯಲ್ಲೇ ಇದ್ದರು. ಹಾಗಾಗಿ ಶೋ ಮುಗಿದ ಬಳಿಕ ತಂಗಿ ಮತ್ತು ಮಗುವಿನ ಜೊತೆ ಸಮಯ ಕಳೆದಿದ್ದಾರೆ. ಸಾಕಷ್ಟು ಸಂದರ್ಶನಗಳಲ್ಲಿ ಕಾರ್ತಿಕ್‌, ನನ್ನ ಪಾಲಿಗೆ ತಂಗಿ ಮಗ ಲಕ್ಕಿ ಚಾರ್ಮ್‌ ಎಂದು ಮಾತನಾಡಿದ್ದರು.

ಬಿಗ್ ಬಾಸ್ ಶೋ ಬಳಿಕ ಕಾರ್ತಿಕ್‌ಗೆ ಹಲವು ಸಿನಿಮಾಗಳ ಆಫರ್ ಅರಸಿ ಬರುತ್ತಿದೆ. ಉತ್ತಮ ಸಿನಿಮಾಗಳ ಮೂಲಕ ರಂಜಿಸಲು ಕಾರ್ತಿಕ್ ನಿರ್ಧರಿಸಿದ್ದಾರೆ.

Share This Article