ಅಭಿಮಾನಿಯ ಆಟೋ ಓಡಿಸಿ ಶುಭಹಾರೈಸಿದ ಡ್ರೋನ್ ಪ್ರತಾಪ್

Public TV
1 Min Read

‘ಬಿಗ್ ಬಾಸ್ ಸೀಸನ್ 10’ರ (Bigg Boss Kannada 10) ಮೊದಲ ರನ್ನರ್ ಅಪ್ ಆಗಿ ಗುರುತಿಸಿಕೊಂಡಿರುವ ಡ್ರೋನ್ ಪ್ರತಾಪ್‌ಗೆ (Drone Prathap) ಹೋದಲೆಲ್ಲಾ ಅಭಿಮಾನಿಗಳು ಮುಗಿಬೀಳ್ತಿದ್ದಾರೆ. ಇದೀಗ ಅಭಿಮಾನಿಯ (Fan) ಆಟೋ ಓಡಿಸಿ ಡ್ರೋನ್ ಪ್ರತಾಪ್ ಶುಭಹಾರೈಸಿದ್ದಾರೆ.

ಈ ಹಿಂದೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದ ಪ್ರತಾಪ್ ಬಿಗ್ ಬಾಸ್ ಮನೆಯಿಂದ ಬಂದ್ಮೇಲೆ ಅವರ ಮೇಲಿದ್ದ  ಜನರ ಅಭಿಪ್ರಾಯ ಬದಲಾಗಿದೆ. ಇದೀಗ ಅಭಿಮಾನಿಯೊಬ್ಬ ಮಳವಳ್ಳಿಯಲ್ಲಿರುವ ಪ್ರತಾಪ್ ಮನೆಗೆ ಭೇಟಿ ನೀಡಿ, ಮಾತನಾಡಿಸಿದ್ದಾರೆ. ಅಭಿಮಾನಿಯ ಆಟೋ ಓಡಿಸಿ ಶಂಕರ್‌ನಾಗ್ ಅವರನ್ನು ನೆನಪು ಮಾಡಿಸಿದ್ರಿ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಆಟೋ ಓಡಿಸುತ್ತಲೇ ಶಂಕರ್‌ನಾಗ್ ಅವರಿಗೆ ಜೈ ಎಂದು ಪ್ರತಾಪ್ ಕೊಂಡಾಡಿದ್ದಾರೆ. ತಮ್ಮ ಮನೆಗೆ ಆಗಮಿಸಿ ಆಟೋ ಓಡಿಸಲು ಕಲಿಸಿಕೊಟ್ಟ ಅಭಿಮಾನಿಗೆ ಡ್ರೋನ್ ಪ್ರತಾಪ್ ಧನ್ಯವಾದಗಳನ್ನ ತಿಳಿಸಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಮತ್ತೆ ಒಂದಾಗಲಿದೆ ‘ತನು ಮತ್ತು ಮನು’ ಜೋಡಿ

ಬಿಗ್ ಬಾಸ್ ಶೋ ಮುಗಿದ ಮೇಲೆ ಪ್ರತಾಪ್ ಗಿಚ್ಚಿ ಗಿಲಿಗಿಲಿ-3 ಶೋನಲ್ಲಿ ಸ್ಪರ್ಧಿಯಾಗಿ ಹೊಸ ಜರ್ನಿ ಶುರು ಮಾಡಿದ್ದಾರೆ. ಈ ಮೂಲಕ ಕಾಮಿಡಿ ಶೋನಲ್ಲಿ ಪ್ರತಾಪ್ ಭಾಗವಹಿಸಿದ್ದಾರೆ. ಇತ್ತೀಚೆಗಷ್ಟೇ ಅವರು ಡೈಲಾಗ್ ಹೇಳಲಾಗದೇ ಪರದಾಡುತ್ತಿದ್ದ ವಿಡಿಯೋವೊಂದು ಸೆನ್ಸೇಷನ್‌ ಕ್ರಿಯೇಟ್‌ ಮಾಡಿತ್ತು. ಪ್ರತಾಪ್ ಡೈಲಾಗ್ ಹೇಳಿದ್ದ ರೀತಿ ಪ್ರೇಕ್ಷಕರಿಗೆ ಮನರಂಜನೆ ಕೊಟ್ಟಿತ್ತು.

ಸದ್ಯ ಪ್ರತಾಪ್, ರಿಯಾಲಿಟಿ ಶೋ ಮತ್ತು ತಮ್ಮ ಆಫೀಸ್‌ ಕೆಲಸದಲ್ಲಿ ನಿರತರಾಗಿದ್ದಾರೆ. ಎರಡನ್ನು ಬ್ಯಾಲೆನ್ಸ್ ಮಾಡುತ್ತಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ನೆಗೆಟಿವ್ ಫೇಮ್ ಅನ್ನು ಪಾಸಿಟಿವ್ ಆಗಿ ಬದಲಾಯಿಸಿಕೊಂಡು ಹೊಸ ಹೆಜ್ಜೆ ಇಡ್ತಿದ್ದಾರೆ ಪ್ರತಾಪ್.

Share This Article