ಶಿಕ್ಷಕನಿಂದ ಮಾನಹಾನಿ ಮೆಸೇಜ್- ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

By
1 Min Read

ಮಂಗಳೂರು: ಶಿಕ್ಷಕನೋರ್ವ ವಿದ್ಯಾರ್ಥಿನಿಯೋರ್ವಳ ಬಗ್ಗೆ ಮಾನಹಾನಿ ಮೆಸೇಜ್ ಕಳಿಸಿದ್ದಕ್ಕೆ ಮನನೊಂದು ಹತ್ತನೇ ತರಗತಿ ವಿದ್ಯಾರ್ಥಿನಿ (Student) ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ (Darmasthala) ಬಳಿ ನಡೆದಿದೆ.

ಧರ್ಮಸ್ಥಳದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿಗೆ ಡ್ರಾಯಿಂಗ್ ಶಿಕ್ಷಕ ರೂಪೇಶ್ ಪೂಜಾರಿ ಎಂಬಾತ ಮೃತಪಟ್ಟ ವಿದ್ಯಾರ್ಥಿನಿಯ ಬಗ್ಗೆ ಇನ್ನೊಂದು ವಿದ್ಯಾರ್ಥಿನಿಯ ಮೊಬೈಲ್‍ಗೆ ಮಾನಹಾನಿ ರೀತಿಯ ಮಸೇಜ್ ಕಳಿಸಿದ್ದ. ಈ ಬಗ್ಗೆ ತಿಳಿದ ವಿದ್ಯಾರ್ಥಿನಿ ಮನೆಯವರಿಗೆ ತಿಳಿಸಿ ಶಾಲೆಗೆ ತಾಯಿ ಜೊತೆ ಹೋಗಿ ವಿಚಾರಿಸಿದ್ದಳು. ಇದನ್ನೂ ಓದಿ: ಸದನದಲ್ಲಿ ಜೈಶ್ರೀರಾಮ್, ಜೈಭೀಮ್ ಸದ್ದು- ಕೈ ಶಾಸಕನಿಗೆ ಕೇಸರಿ ಶಾಲು ಹಾಕಿದ್ರು ಮುನಿರತ್ನ

ಬಳಿಕ ಈ ಘಟನೆಯಿಂದ ನೊಂದ ವಿದ್ಯಾರ್ಥಿನಿ ಫೆ.7ರಂದು ಶಾಲೆಯಲ್ಲಿ ಬಿಸ್ಕೆಟ್ ಜೊತೆ ಇಲಿ ಪಾಷಾಣ ಸೇವಿಸಿದ್ದಳು. ಗಂಭೀರ ಸ್ಥಿತಿಯಲ್ಲಿದ್ದ ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಇಂದು ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ.

ಶಿಕ್ಷಕನ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 60 ವರ್ಷಗಳಲ್ಲಿ ರೈತರ ಪರವಾಗಿ ಆಡಳಿತ ನೀಡಬೇಕೆಂದು ಯಾವತ್ತೂ ಕಾಂಗ್ರೆಸ್‍ಗೆ ಅನಿಸಿಲ್ಲ: ವಿಜಯೇಂದ್ರ

Share This Article