Bihar Trust Vote: ʻವಿಶ್ವಾಸʼ ಗೆದ್ದ ಸಿಎಂ ನಿತೀಶ್‌ ಕುಮಾರ್‌

Public TV
1 Min Read

ಪಾಟ್ನಾ: ಬಿಹಾರ ವಿಧಾನಸಭೆಯಲ್ಲಿ ಸಿಎಂ ನಿತೀಶ್ ಕುಮಾರ್ ಅವರು ವಿಶ್ವಾಸಮತ ಗೆದ್ದಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಪರವಾಗಿ ಒಟ್ಟು 129 ಶಾಸಕರು ಮತ ಚಲಾಯಿಸಿದ್ದು, ವಿಶ್ವಾಸ ಪರೀಕ್ಷೆಯಲ್ಲಿ ಗೆಲುವು ಸಾಧಿಸಿದ್ದಾರೆ.

243 ಸದಸ್ಯರ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 122 ಸದಸ್ಯರ ಬಲ ಬೇಕಿತ್ತು. ಈ ಪೈಕಿ 129 ಮತಗಳು ಸರ್ಕಾರದ ಪರ ಚಲಾವಣೆಗೊಂಡವು. ಬಳಿಕ ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದಿನ ಮೈತ್ರಿ ಸಂದರ್ಭದಲ್ಲಿ ಆರ್‌ಜೆಡಿ ಭ್ರಷ್ಟ ಆಚರಣೆಗಳಲ್ಲಿ ತೊಡಗಿಕೊಂಡಿತ್ತು. ಆದ್ರೆ ಪ್ರಸ್ತುತ ಎನ್‌ಡಿಎ ಸರ್ಕಾರವು ಈ ಭ್ರಷ್ಟಚಾರದ ವಿರುದ್ಧ ತನಿಖೆ ನಡೆಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮುಸ್ಲಿಮರು ನಮ್ಮ ಹಿಂದುತ್ವ ಬೆಂಬಲಿಸುತ್ತಾರೆ.. ಬಿಜೆಪಿ ಹಿಂದುತ್ವ ತಿರಸ್ಕರಿಸುತ್ತಾರೆ: ಉದ್ಧವ್‌ ಠಾಕ್ರೆ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯದಲ್ಲಿ ಮಹಾಘಟಬಂಧನ್‌ನಿಂದ ಪ್ರತ್ಯೇಕಗೊಂಡು ಎನ್‌ಡಿಎ ಜೊತೆಗೆ ಸೇರಿ ಹೊಸ ಸರ್ಕಾರ ರಚಿಸಿದ ಹಿನ್ನೆಲೆಯಲ್ಲಿ ವಿಶ್ವಾಸ ಮತಯಾಚನೆ ನಡೆಯಿತು. ವಿಶ್ವಾಸಮತದ ಮುನ್ನ, ಆಡಳಿತಾರೂಢ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ತನ್ನ ಶಾಸಕರನ್ನು ಸೋಮವಾರ ಬೆಳಗ್ಗೆ ಪಾಟ್ನಾದ ಚಾಣಕ್ಯ ಹೋಟೆಲ್‌ಗೆ ಸ್ಥಳಾಂತರಿಸಿತ್ತು.

ಇದರ ನಡುವೆ, ಬಿಹಾರದ ಮಾಜಿ ಉಪಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಅವರ ನಿವಾಸಕ್ಕೆ ಭಾನುವಾರ ರಾತ್ರಿಯಿಂದಲೇ ಪೊಲೀಸ್‌ ಭದ್ರತೆ ನಿಯೋಜಿಸಲಾಗಿತ್ತು. ಇದನ್ನೂ ಓದಿ: ಆಂಧ್ರ ಸಿಎಂ ಜಗನ್‌ ತಮ್ಮ ಚಿಕ್ಕಪ್ಪನನ್ನೇ ಹತ್ಯೆಗೈದಿದ್ದಾರೆ – ಎನ್.ಚಂದ್ರಬಾಬು ನಾಯ್ಡು ಪುತ್ರ ಗಂಭೀರ ಆರೋಪ 

Share This Article