Bigg Boss: ಸೀರೆ ಸೆರಗು ಕೆಳಗೆ ಇಳಿಬಿಟ್ಟು ಹಾಟ್‌ ಲುಕ್‌ ಕೊಟ್ಟ ರುಬಿನಾ ದಿಲಕ್

Public TV
1 Min Read

ಕಿರುತೆರೆ ಮೋಡಿ ಮಾಡಿರುವ ಹಾಟ್ ಬ್ಯೂಟಿ ರುಬಿನಾ ದಿಲಕ್ (Rubina Dilaik) ಇದೀಗ ಸೀರೆಯುಟ್ಟು ಸೆರಗು ಜಾರಿಸಿ ಕ್ಯಾಮೆರಾ ಕಣ್ಣಿಗೆ ಹಾಟ್ ಆಗಿ ಪೋಸ್ ನೀಡಿದ್ದಾರೆ. ಇದೀಗ ನಟಿಯ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಬಿಗ್ ಬಾಸ್ ಹಿಂದಿ ಸೀಸನ್ 14ರ (Bigg Boss Kannada 10) ಸ್ಪರ್ಧಿ ರುಬಿನಾ (Rubina) ಇದೀಗ ತಮ್ಮ ಹಾಟ್ ಫೋಟೋಶೂಟ್ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಸೀರೆ ಸೆರಗು ಕೆಳಗೆ ಇಳಿಬಿಟ್ಟು ಹಾಟ್ ಹಾಟ್ ಆಗಿ ಯುವನಟಿ ರುಬಿನಾ ಪೋಸ್ ನೀಡಿದ್ದಾರೆ.

ಹಳದಿ ಬಣ್ಣದ ಸೀರೆಯಲ್ಲಿ ಸೆರಗು ಜಾರಿಸಿ ರುಬಿನಾ ಪೋಸ್ ನೀಡಿದ್ದಾರೆ. ಎಲ್ಲಾ ತೋರಿಸೋದಾದ್ರೆ ಬ್ಲೌಸ್ ಹಾಕೋದೆ ಬೇಡವಾಗಿತ್ತು ಎಂದು ನೆಟ್ಟಿಗರು ರುಬಿನಾ ಕಾಲೆಳೆದಿದ್ದಾರೆ. ನಟಿಯ ಮೈಮಾಟಕ್ಕೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಇದನ್ನೂ ಓದಿ:ಮಾರ್ಟಿನ್: ಅಂತಿಮ ಹಂತದ ಚಿತ್ರೀಕರಣದಲ್ಲಿ ಧ್ರುವ ಸರ್ಜಾ

ಸಿನಿಮಾ, ಸೀರಿಯಲ್ ಜಗತ್ತಿನಲ್ಲಿ ಕೆರಿಯರ್ ಬೇಕು ಅಂದರೆ ಫಿಗರ್, ಫಿಟ್‌ನೆಸ್‌ನ್ನು ಮೆಂಟೇನ್ ಮಾಡುವುದು ಮುಖ್ಯ. ಹೀಗಾಗಿಯೇ ನಟ-ನಟಿಯರು ವರ್ಕೌಟ್, ಡಯೆಟ್, ಯೋಗ ಅಂತ ಸ್ಲಿಮ್ ಮತ್ತು ಫಿಟ್ ಆಗಿರೋಕೆ ಟ್ರೈ ಮಾಡ್ತಾರೆ. ಆದ್ರೆ ಇಬ್ಬರು ಮಕ್ಕಳ ತಾಯಿಯಾಗಿರೋ ಈ ಸೀರಿಯಲ್ ನಟಿ ಫಿಗರ್ ಮೆಂಟೇನ್ ಮಾಡಿರೋ ರೀತಿ ಮಾತ್ರ ಎಲ್ಲರನ್ನೂ ಬೆರಗಾಗಿಸುವಂತಿದೆ.

ಚೋಟಿ ಬಹು, ಪವಿತ್ರಾ ರಿಶ್ತಾ, ಬಿಗ್ ಬಾಸ್ ಶೋ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದ್ದಾರೆ. 2018ರಲ್ಲಿ ಅಭಿನವ್ ಶುಕ್ಲಾ ಜೊತೆ ರುಬಿನಾ ಮದುವೆಯಾಗಿದ್ದು, ಕಳೆದ ಡಿಸೆಂಬರ್‌ನಲ್ಲಿ ಅವಳಿ ಮಕ್ಕಳಿಗೆ ನಟಿ ಜನ್ಮ ನೀಡಿದ್ದಾರೆ.

Share This Article