ಒಡಿಶಾದಲ್ಲಿ ಅನುಷ್ಕಾ ಶೆಟ್ಟಿ: ಫ್ಯಾನ್ಸ್ ಕಂಡು ಓಡಿದ ನಟಿ

Public TV
1 Min Read

ನುಷ್ಕಾ ಶೆಟ್ಟಿ (Anushka Shetty) ಇದೀಗ ಬಹಿರಂಗವಾಗಿ ಕಾಣಿಸಿಕೊಳ್ಳೋದು ಅಪರೂಪವಾಗಿದೆ. ಸಿನಿಮಾ ಪ್ರಚಾರ, ಶೂಟಿಂಗ್ (Shooting) ಇದ್ದಾಗ ಮಾತ್ರ ಮನೆಯಿಂದ ಆಚೆ ಬರುವ ಅನುಷ್ಕಾ, ನಂತರದ ದಿನಗಳಲ್ಲಿ ಫ್ಯಾನ್ಸ್ ಕಣ್ಣಿಗೆ ಕಾಣಿಸೋದೇ ಇಲ್ಲ. ಹಾಗಾಗಿ ಬಹಿರಂಗವಾಗಿ ಅನುಷ್ಕಾ ಕಾಣಿಸಿಕೊಂಡಾಗ ಅಭಿಮಾನಿಗಳು ಮುತ್ತಿಕ್ಕಿಕೊಳ್ಳೋದು ಸಹಜವಾಗಿದೆ.

ಸದ್ಯ ಅನುಷ್ಕಾ ಒಡಿಶಾದಲ್ಲಿ (Odisha) ಇದ್ದಾರೆ. ಅವರು ಹೊಸ ಸಿನಿಮಾದ ಶೂಟಿಂಗ್ ನಲ್ಲಿ ಪಾಲ್ಗೊಳ್ಳೋದಕ್ಕಾಗಿ ಅಲ್ಲಿ ಉಳಿದುಕೊಂಡಿದ್ದಾರೆ. ಅನುಷ್ಕಾ ಒಡಿಶಾಗೆ ಬಂದಿದ್ದಾರೆ ಎನ್ನುವ ಸುದ್ದಿ ತಿಳಿದ ತಕ್ಷಣ ಅವರನ್ನು ನೋಡಲು ಅಭಿಮಾನಿಗಳು ಜಮಾಯಿಸಿದ್ದಾರೆ. ಅಭಿಮಾನಿಗಳನ್ನು ಕಂಡು ಅನುಷ್ಕಾ, ಕಾರಿನಿಂದ ಇಳಿದು ಓಡಿದ್ದಾರೆ.

ಒಡಿಶಾದ ಜೇಪೋರ್ ನಲ್ಲಿ ಹೊಸ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ರಮ್ಯಾಕೃಷ್ಣ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಕ್ರಿಶ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಹೊಸ ಸಿನಿಮಾದ ಶೀರ್ಷಿಕೆ ಇನ್ನೂ ಘೋಷಣೆ ಆಗಿಲ್ಲವಾದರೂ, ಚಿತ್ರೀಕರಣ ನಡೆಯುತ್ತಿದೆ.

ಸದ್ಯ ಒಡಿಶಾದ ಕೋರಾಪುಟ್ ಜಿಲ್ಲೆಯ ಹಲವು ಭಾಗಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಸಿದ್ದಾರಂತೆ ನಿರ್ದೇಶಕರು. ಈ ಪ್ರದೇಶದಲ್ಲೇ ಎಂಟು ದಿನಗಳ ಕಾಲ ಚಿತ್ರತಂಡ ಉಳಿದುಕೊಳ್ಳಲಿದೆಯಂತೆ.

Share This Article