ಹಸಿಬಿಸಿ ದೃಶ್ಯದಲ್ಲಿ ಶಾಹಿದ್, ಕೃತಿ- ಕತ್ತರಿ ಹಾಕಿದ ಸೆನ್ಸಾರ್ ಮಂಡಳಿ

By
1 Min Read

ಬಾಲಿವುಡ್ ನಟ ಶಾಹಿದ್ ಕಪೂರ್, ಕೃತಿ ಸನೋನ್ (Kriti Sanon) ನಟನೆಯ ‘ತೇರಿ ಬಾತೋ ಮೇ ಐಸಾ ಉಲ್ಟಾ ಜಿಯಾ’ ಇದೇ ಫೆ.9ಕ್ಕೆ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಶಾಹಿದ್, ಕೃತಿ ಸಖತ್ ಬೋಲ್ಡ್ ಆಗಿ‌ ನಟಿಸಿದ್ದು, ಸೆನ್ಸಾರ್ ಮಂಡಳಿ ಹಸಿಬಿಸಿ ದೃಶ್ಯಗಳಿಗೆ ಕತ್ತರಿ ಹಾಕಿದ್ದಾರೆ.

ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೃತಿ ಮತ್ತು ಶಾಹಿದ್ ಕಪೂರ್ (Shahid Kapoor) ರೊಮ್ಯಾಂಟಿಕ್ ಜೋಡಿಯಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಚಿತ್ರದ ಟ್ರೈಲರ್ ಕೂಡ ಭಾರೀ ಸದ್ದು ಮಾಡ್ತಿದೆ. ಚಿತ್ರದಲ್ಲಿ ಸಾಕಷ್ಟು ಹಸಿಬಿಸಿ ದೃಶ್ಯಗಳಿರುವ ಕಾರಣ, 25%ರಷ್ಟು ಸೀನ್ ಅನ್ನು ತೆಗೆದು ಹಾಕಲು ಸೆನ್ಸಾರ್ ಮಂಡಳಿ ಸೂಚಿಸಿದೆ. ಇದನ್ನೂ ಓದಿ:ಇಶಾಗೆ ಡಿವೋರ್ಸ್‌ ಕೊಡಲು ಬೆಂಗಳೂರು ಹುಡುಗಿ ಜೊತೆಗಿನ ಭರತ್‌ ಅಫೇರ್‌ ಕಾರಣ?

ಪ್ರೇಮಿಗಳ ದಿನಾಚರಣೆ ಇರುವ ವಾರದಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿರುವುದರಿಂದ ಉತ್ತಮ ಓಪನಿಂಗ್ ಪಡೆದುಕೊಳ್ಳುವ ನಿರೀಕ್ಷೆ ಇದೆ. ಬೆಡ್ ರೂಮ್ ದೃಶ್ಯಕ್ಕೆ ಕತ್ತರಿ ಹಾಕಿದ್ದು ಮಾತ್ರವಲ್ಲದೇ, ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬ ಸಂದೇಶವನ್ನು ದೊಡ್ಡ ಅಕ್ಷರಗಳಲ್ಲಿ ಪ್ರದರ್ಶಿಸುವಂತೆ ಸೂಚಿಸಲಾಗಿದೆ. ಡೈಲಾಗ್‌ನಲ್ಲಿ ಕೆಲವು ಪದಗಳನ್ನು ಬದಲಿಸಬೇಕು ಎಂದು ಆದೇಶಿಸಲಾಗಿದೆ. ಸೆನ್ಸಾರ್ ಮಂಡಳಿ ಸೂಚಿಸಿದ ಕಡೆಗಳಲ್ಲಿ ಕತ್ತರಿ ಹಾಕಿದ ಬಳಿಕ ಚಿತ್ರದ ಅವಧಿ 2 ಗಂಟೆ 23 ನಿಮಿಷ ಆಗಿದೆ.

‘ಮಿಮಿ’ (Mimi) ನಟಿ ಕೃತಿ ಸನೋನ್ ಈ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ‘ತೇರಿ ಬಾತೋ ಮೇ ಐಸಾ ಉಲ್ಟಾ ಜಿಯಾ’ ಸಿನಿಮಾದಲ್ಲಿ ರೋಬೋಟ್ ಪಾತ್ರಕ್ಕೆ ನಟಿ ಜೀವತುಂಬಿದ್ದಾರೆ. ಟ್ರೈಲರ್ ಝಲಕ್‌ನಲ್ಲಿ ರೋಬೋಟ್ ಕೃತಿ ಜೊತೆ ಶಾಹಿದ್ ರೊಮ್ಯಾನ್ಸ್ ದೃಶ್ಯಗಳನ್ನು ನೋಡಿ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಅಮಿತ್ ಜೋಶಿ ಮತ್ತು ಆರಾಧನಾ ಶಾ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಶಾಹಿದ್ ಕಪೂರ್- ಕೃತಿ ಸನೋನ್ ಜೋಡಿಯಾಗಿ ನಟಿಸಿದ್ದಾರೆ. ಧರ್ಮೇಂದ್ರ, ಡಿಂಪಲ್ ಕಪಾಡಿಯಾ, ರಾಕೇಶ್ ಬೇಡಿ, ರಾಜೇಶ್ ಕುಮಾರ್ ಮುಂತಾದವರು ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

Share This Article