ಒಂದೇ ಸಮಯದಲ್ಲಿ ಅಪ್ಲೋಡ್‌, ಟ್ಯಾಗ್‌ – ಸಿಂಧು, ನೀರಜ್‌ ಪೋಸ್ಟ್‌ ರಹಸ್ಯ ಬಯಲು

By
1 Min Read

ನವದೆಹಲಿ: ಬ್ಯಾಡ್ಮಿಂಟನ್‌ ಪಟು ಪಿವಿ ಸಿಂಧು (PV Sindhu) ಮತ್ತು ಜಾವೆಲಿನ್ ತಾರೆ ನೀರಜ್‌ ಚೋಪ್ರಾ (Neeraj Chopra) ಪರಸ್ಪರ ಪ್ರೀತಿಸುತ್ತಿದ್ದಾರಾ ಹೀಗೊಂದು ಪ್ರಶ್ನೆಯನ್ನು ಅಭಿಮಾನಿಗಳು ಈಗ ಕೇಳುತ್ತಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಇವರಿಬ್ಬರೂ ಒಂದೇ ಸಮಯದಲ್ಲಿ ಅಪ್‌ಲೋಡ್‌ ಮಾಡಿದ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

ಪೋಸ್ಟ್‌ನಲ್ಲಿ ಏನಿತ್ತು?
ನೀರಜ್‌ ಚೋಪ್ರಾ ಬ್ಯಾಡ್ಮಿಂಟನ್‌ ರಾಕೆಟ್‌ ಮತ್ತು ಕಾಕ್‌ನ ಫೋಟೋ ಹಂಚಿಕೊಂಡು, ಇದರ ಅರ್ಥ ಏನು ಊಹೆ ಮಾಡುವಿರಾ ಎಂದು ಪ್ರಶ್ನಿಸಿ ಪೋಸ್ಟ್‌ ಅನ್ನು ಪಿವಿ ಸಿಂಧು ಅವರಿಗೆ ಟ್ಯಾಗ್‌ ಮಾಡಿದ್ದರು.

ಪಿವಿ ಸಿಂಧು ಕೂಡ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಜಾವೆಲಿನ್‌ ಫೋಟೋ ಹಂಚಿಕೊಂಡು, ಅರೇ ಇದು ಹೇಗೆ ನನ್ನ ಬಳಿ ಬಂತು? ಊಹೆ ಮಾಡ್ತೀರಾ ಎಂದು ಪ್ರಶ್ನಿಸಿ ನೀರಜ್‌ ಚೋಪ್ರಾ ಅವರಿಗೆ ಅನ್ನು ಟ್ಯಾಗ್‌ ಮಾಡಿದ್ದರು . ಇದನ್ನೂ ಓದಿ: ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತ ಖ್ಯಾತ ಹಾಕಿ ಆಟಗಾರನಿಂದ ಅಪ್ರಾಪ್ತೆಯ ಮೇಲೆ ರೇಪ್‌!

ಇಬ್ಬರು ಪೋಸ್ಟ್‌ ಹಾಕಿದ್ದು ಯಾಕೆ?
ಅಭಿಮಾನಿಗಳು ಇವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿದೆ ಎಂದು ಹೇಳಿದರೂ ಈ ತಾರೆಯರು ಕಂಪನಿಯೊಂದರ ಪ್ರಚಾರ ಸಂಬಂಧ ಪೋಸ್ಟ್‌ ಹಾಕಿದ್ದಾರೆ.

ಒಲಿಂಪಿಕ್ಸ್‌ ಜಾವೆಲಿನ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್‌ ಚೋಪ್ರಾ ಅವರನ್ನು ಜಾಗತಿಕ ಪೇಮೆಂಟ್‌ ಕಂಪನಿ ವೀಸಾ (Visa) ತನ್ನ ಪ್ರಚಾರ ರಾಯಭಾರಿಯನ್ನಾಗಿ ನೇಮಕ ಮಾಡಿದೆ. 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೂ ಮುನ್ನ ನೀರಜ್‌ ಚೋಪ್ರಾ ಅವರನ್ನು ನೇಮಕ ಮಾಡಿದೆ.

ಈ ಹಿಂದೆ 2019ರಲ್ಲಿ ಪಿವಿ ಸಿಂಧು ಅವರನ್ನು ವೀಸಾ ಕಂಪನಿ ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿತ್ತು. ಈಗ ವೀಸಾ ಕಂಪನಿಯ ಪ್ರಚಾರ ರಾಯಭಾರಿಯಾಗಿ ಆಯ್ಕೆಯಾದ ಎರಡನೇ ಭಾರತೀಯ ಕ್ರೀಡಾಪಟು ನೀರಾಜ್‌ ಚೋಪ್ರಾ ಆಗಿದ್ದಾರೆ. ಇಬ್ಬರು ವೀಸಾ ಕಂಪನಿಯ ರಾಯಭಾರಿಯಾಗಿದ್ದಕ್ಕೆ ನೀರಜ್‌ ಜೋಪ್ರಾ ಬ್ಯಾಡ್ಮಿಂಟನ್‌ ರಾಕೆಟ್‌ ಫೋಟೋ ಹಂಚಿಕೊಂಡಿದ್ದರೆ ಸಿಂಧು ಜಾವೆಲಿನ್‌ ಫೋಟೋ ಅಪ್ಲೋಡ್‌ ಮಾಡಿದ್ದರು. ನಂತರ ಇವರಿಬ್ಬರು ಈ ಪೋಸ್ಟ್‌ ಡಿಲೀಟ್‌ ಮಾಡಿದ್ದಾರೆ.

Share This Article