Exclusive-ಮಾರ್ಚ್‌ನಲ್ಲಿ ‘ರಿಚರ್ಡ್ ಆಂಟನಿ’ಗೆ ಮುಹೂರ್ತ: ಹೊಂಬಾಳೆ ಫಿಲ್ಮ್ಸ್ ಆಪ್ತರ ಅಧಿಕೃತ ಮಾಹಿತಿ

Public TV
1 Min Read

ಕ್ಷಿತ್ ಶೆಟ್ಟಿ (Rakshit Shetty) ನಿರ್ದೇಶಿಸಿ, ನಟಿಸಲಿರುವ ರಿಚರ್ಡ್ ಆಂಟನಿ (Richard Antony) ಸಿನಿಮಾಗೆ ಮಾರ್ಚ್‌ ಕೊನೆಯ ವಾರದ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಮುಹೂರ್ತ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಹೊಂಬಾಳೆ ಫಿಲ್ಮ್ಸ್ (Hombale Films) ಅಂಗಳದಿಂದಲೇ ಬಂದಿದೆ. ಈ ಚಿತ್ರವನ್ನು ಅದ್ಧೂರಿಯಾಗಿ ತಯಾರಿಸುವುದಕ್ಕಾಗಿ ಸರ್ವ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಹಲವು ತಿಂಗಳ ಹಿಂದೆಯೇ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಘೋಷಣೆ ಮಾಡಿತ್ತು.ರಕ್ಷಿತ್ ಶೆಟ್ಟಿ ನಟನೆಯಲ್ಲೇ ಬ್ಯುಸಿಯಾಗಿದ್ದರಿಂದ ಮುಹೂರ್ತಕ್ಕೆ ತಡವಾಗಿತ್ತು. ಸಪ್ತ ಸಾಗರದಾಚೆ ಶೂಟಿಂಗ್ ಮತ್ತು ಬಿಡುಗಡೆಯ ಎಲ್ಲ ಕೆಲಸಗಳನ್ನು ಮುಗಿಸಿ, ಸ್ಕ್ರಿಪ್ಟ್ ನಲ್ಲಿ ತೊಡಗಿದ್ದರು ರಕ್ಷಿತ್ ಶೆಟ್ಟಿ, ಈಗ ಸ್ಕ್ರಿಪ್ಟ್ ಕೆಲಸ ಕೂಡ ಬಹುತೇಕ ಮುಗಿದಿದ್ದು, ಶೀಘ್ರದಲ್ಲೇ ಶೂಟಿಂಗ್ ಕೂಡ ಶುರುವಾಗಲಿದೆಯಂತೆ.

ಈ ನಡುವೆ ಹೊಂಬಾಳೆ ಮತ್ತು ರಕ್ಷಿತ್ ನಡುವೆ ಬಿರುಕು ಉಂಟಾಗಿದ್ದು, ಬೇರೊಂದು ಸಂಸ್ಥೆಯು ರಿಚರ್ಡ್ ಆಂಟನಿ  ಚಿತ್ರವನ್ನು ನಿರ್ಮಾಣ ಮಾಡಲಿದೆ ಎನ್ನುವ ಸುದ್ದಿಯೂ ಹರಿದಾಡಿತ್ತು. ಈ ಕುರಿತು ಹೊಂಬಾಳೆ ಫಿಲ್ಮ್ಸ್ ಆಪ್ತರೇ ಹೇಳುವಂತೆ, ‘ಸಿನಿಮಾ ಮುಹೂರ್ತಕ್ಕೆ ಹೊಂಬಾಳೆಯೇ ತಯಾರಿ ಮಾಡಿಕೊಳ್ಳುತ್ತಿದೆ ಅಂದ ಮೇಲೆ ಈ ಪ್ರಶ್ನೆಯೇ ಅಪ್ರಸ್ತುತ’ ಎನ್ನುತ್ತಾರೆ.

 

ಕಾಂತಾರ 2 ಚಿತ್ರಕ್ಕೆ ಮುಹೂರ್ತಕ್ಕೆ ಕಾಲ ಕೂಡಿ ಬಂದಿತ್ತು, ದೈವದ ಅಭಯ ಸಿಕ್ಕಿತ್ತು. ಹಾಗಾಗಿ ಅದರ ಮುಹೂರ್ತವನ್ನು ಬೇಗ ಮಾಡಲಾಯಿತು.  ರಿಚರ್ಡ್ ಆಂಟನಿಗೂ ಒಳ್ಳೆಯ ದಿನಾಂಕ ಹುಡುಕುತ್ತಿದ್ದಾರೆ. ಅತೀ ಶೀಘ್ರದಲ್ಲೇ ಎಲ್ಲವನ್ನೂ ಸಂಸ್ಥೆಯೇ ತಿಳಿಸಲಿದೆ ಎನ್ನುವುದು ಆಪ್ತರ ಮಾತು.

Share This Article