ಗ್ಯಾರಂಟಿ ನಿರ್ವಹಿಸಲಾಗದೆ ಕೇಂದ್ರದ ಅನುದಾನ ಬಂದಿಲ್ಲ ಅಂತಿದ್ದಾರೆ ಕಾಂಗ್ರೆಸ್‌ನವ್ರು: ಜೋಶಿ ಆರೋಪ

By
2 Min Read

– ಹುಬ್ಬಳ್ಳಿಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ

ಹುಬ್ಬಳ್ಳಿ: ಕಾಂಗ್ರೆಸ್‌ನಲ್ಲಿ (Congress) ಭ್ರಷ್ಟಾಚಾರ, ಒಳಜಗಳ ಹೆಚ್ಚಾಗಿದೆ. ಹಾಗಾಗಿ ಗಮನ ಬೇರೆಡೆ ಸೆಳೆಯಲು ಕೇಂದ್ರದ ಅನುದಾನ‌ ಬಂದಿಲ್ಲ ಎನ್ನುತ್ತಿದ್ದಾರೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi)  ಆರೋಪಿಸಿದರು.

ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಲೋಕಸಭೆ ಚುನಾವಣೆ ತಯಾರಿ ಕುರಿತು ಚರ್ಚಿಸಿ ಮಾತನಾಡಿದರು. ಇದನ್ನೂ ಓದಿ: ದೇವೇಗೌಡರಿಗೆ ನಾನೇ ಕೇಸರಿ ಶಾಲು ಹಾಕಿ ಸ್ವಾಗತಿಸುತ್ತೇನೆ: ಯಶ್‌ಪಾಲ್ ಸುವರ್ಣ

ರಾಜ್ಯದ ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ಇದೆ. ಗ್ಯಾರಂಟಿ ಯೋಜನೆ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಶಾಸಕ ಬಾಲಕೃಷ್ಣ ಗ್ಯಾರಂಟಿ ರದ್ದು ಎಂದಿದ್ದಾರೆ. ಇದನ್ನು ಮರೆಮಾಚಲು ಕೇಂದ್ರದ ಅನುದಾನ ಬಂದಿಲ್ಲ ಎನ್ನುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.

ಭಾರತ ಸರ್ವ ಕ್ಷೇತ್ರಗಳಲ್ಲೂ ಉತ್ತುಂಗಕ್ಕೆ ಏರಿದ್ದು, ಪ್ರಧಾನಿ ಮೋದಿ ಅವರ ಮೇಲೆ ದೇಶದ ಜನ ಅದಮ್ಯ ವಿಶ್ವಾಸ ಇಟ್ಟಿದ್ದಾರೆ. ಜನರ‌ ಭರವಸೆಯನ್ನು ಈಡೇರಿಸುವಲ್ಲಿ, ದೇಶದ ಹಿತ ಕಾಯುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಹಿಂದೆಯೇ ಅಡ್ವಾಣಿಗೆ ಭಾರತ ರತ್ನ ಕೊಡಬೇಕಿತ್ತು: ಸತೀಶ್‌ ಜಾರಕಿಹೊಳಿ

ಅತಿ ವೇಗವಾಗಿ ಬೆಳೆಯುತ್ತಿದೆ ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ-ಧಾರವಾಡ ಅವಳಿ ನಗರ ಅತಿ ವೇಗವಾಗಿ ಬೆಳೆಯುತ್ತಿವೆ. ಅಭಿವೃದ್ಧಿ ಯೋಜನೆಗಳು ಜಿಲ್ಲೆಯ ಸಮಗ್ರ ಚಿತ್ರಣವನ್ನೇ ಬದಲಾಯಿಸಲಾಗಿದೆ ಎಂದು ಸಚಿವ ಜೋಶಿ ಹೇಳಿದರು.

ಬಿಜೆಪಿ (BJP) ಕಾರ್ಯಕಾರಿಣಿ ಸಭೆಯಲ್ಲಿ ಶಾಸಕರಾದ ಮಹೇಶ ತೆಂಗಿನಕಾಯಿ, ಅರವಿಂದ ಬೆಲ್ಲದ, ಪ್ರದೀಪ್ ಶೆಟ್ಟರ್, ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಹು-ಧಾ ಮಹಾನಗರ ಪಾಲಿಕೆ ಮೇಯರ್ ವೀಣಾ ಬರದ್ವಾಡ, ಮಾಜಿ ಶಾಸಕ ಅಶೋಕ್ ಕಾಟವೆ, ಅಮೃತ್ ದೇಸಾಯಿ, ಅನಿಲ್ ಬೆನಕೆ ಹಾಗೂ ಪ್ರಮುಖರು ಉಪಸ್ಥಿತರಿದ್ದರು. ಇದನ್ನೂ ಓದಿ: ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಗೆ ‘ಭಾರತ ರತ್ನ’ ಕೊಡಿ ಅಂತಾ ಪತ್ರ ಬರೆದಿದ್ದೆವು: ಸಿದ್ದರಾಮಯ್ಯ

Share This Article