ಲೋಕಸಭಾ ಚುನಾವಣೆ ಬಗ್ಗೆ ಡಿನ್ನರ್ ಮೀಟಿಂಗ್‍ನಲ್ಲಿ ಚರ್ಚೆ: ಪರಮೇಶ್ವರ್

By
1 Min Read

– ಸಚಿವರ ಸ್ಪರ್ಧೆ ಬಗ್ಗೆ ಚರ್ಚೆ ನಡೆದಿಲ್ಲ

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election) ತಯಾರಿ ಬಗ್ಗೆ ಗುರುವಾರ ರಾತ್ರಿ ಸಿಎಂ ಜೊತೆ ಚರ್ಚೆ ಮಾಡಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್  (G. Parameshwar) ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ನಿವಾಸದಲ್ಲಿ ಡಿನ್ನರ್ ಪಾರ್ಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ, ಸಿಎಂ ಅವರು ಎಲ್ಲಾ ಸಚಿವರನ್ನ ಊಟಕ್ಕೆ ಕರೆದಿದ್ದರು. ಈ ಸಂಧರ್ಭದಲ್ಲಿ ಲೋಕಸಭೆ ಚುನಾವಣೆ ತಯಾರಿ ಬಗ್ಗೆ ಚರ್ಚೆ ಮಾಡಿದ್ದೇವೆ. ಅಭ್ಯರ್ಥಿ ಅಯ್ಕೆ, ಪಕ್ಷದ ಸಂಘಟನೆ ಬಗ್ಗೆ ಸಿಎಂ ಹಾಗೂ ಅಧ್ಯಕ್ಷರು ಸೂಚನೆ ಕೊಟ್ಟಿದ್ದಾರೆ. ಹೆಚ್ಚು ಸೀಟು ಗೆಲ್ಲಬೇಕು ಎಂಬ ಬಗ್ಗೆ ಚರ್ಚೆಯಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿಯಂತೆ 28 ಸ್ಥಾನವನ್ನೂ ಗೆಲ್ತೀವಿ ಎನ್ನಲ್ಲ, 20 ಕ್ಷೇತ್ರ ಗೆಲ್ಲುವ ಗುರಿ ಇದೆ: ಚಲುವರಾಯಸ್ವಾಮಿ

ಲೋಕಸಭಾ ಚುನಾವಣೆಗೆ ಆಯಾ ಜಿಲ್ಲಾ ಸಚಿವರು ಜಿಲ್ಲಾ ಉಸ್ತುವಾರಿ ತೆಗೆದುಕೊಳ್ಳಬೇಕು. ಗೆಲ್ಲುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸಿಎಂ ಸೂಚಿಸಿದ್ದಾರೆ. ಸಚಿವರ ಸ್ಪರ್ಧೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಅಭ್ಯರ್ಥಿಗಳ ಆಯ್ಕೆ ಹೈಕಮಾಂಡ್ ಮಾಡಲಿದೆ. ಈಗಾಗಲೇ ಹೈಕಮಾಂಡ್‍ಗೆ ಪಟ್ಟಿ ರವಾನೆ ಆಗಿದೆ. ಮುಂದಿನವಾರ ಅಭ್ಯರ್ಥಿ ಆಯ್ಕೆ ದೆಹಲಿಯಲ್ಲಿ ಆಗಬಹುದು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ನಮ್ಮ ಭವ್ಯ ಭಾರತವನ್ನು ಒಡೆಯುವ ಮಾತು ಯಾರೂ ಆಡಬಾರದು: ಪರಮೇಶ್ವರ್ ತಿರುಗೇಟು

Share This Article