10ನೇ ತರಗತಿ ಬಾಲಕಿಯನ್ನು ಅಪಹರಿಸಿ ಗ್ಯಾಂಗ್‍ರೇಪ್ – ಸೇತುವೆ ಮೇಲಿಂದ ಎಸೆದ ದುರುಳರು

Public TV
1 Min Read

ಭೋಪಾಲ್: ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚರ ಎಸಗಿ ಸೇತುವೆ ಮೇಲಿಂದ ಎಸೆದ ಅಮಾನವೀಯ ಪ್ರಕರಣ ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್‌ನಲ್ಲಿ ನಡೆದಿದೆ.

ಗಂಭೀರ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಗ್ವಾಲಿಯರ್‍ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಪಕ್ಕೆಲುಬುಗಳು ಮತ್ತು ಕಾಲುಗಳು ಮುರಿದಿದ್ದು, ಆಕೆಯ ಖಾಸಗಿ ಭಾಗಗಳಲ್ಲಿ ಗಾಯಗಳಾಗಿವೆ ಎಂದು ತನಿಖಾಧಿಕಾರಿ ಯಶವಂತ್ ಗೋಯಲ್ ತಿಳಿಸಿದ್ದಾರೆ. ಇದನ್ನೂ ಓದಿ: ಅಕ್ಕನ ಆಭರಣಗಳ ಮೇಲೆ ತಂಗಿ ಕಣ್ಣು – ರೈಲಿನಲ್ಲೇ ಕೈಚಳಕ ತೋರಿ ಜೈಲು ಪಾಲು!

ಜ.29ರಂದು ಈ ಘಟನೆ ನಡೆದಿದೆ. ಇದೀಗ ಬಾಲಕಿಗೆ ಪ್ರಜ್ಞೆ ಬಂದ ನಂತರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದೂರಿನಲ್ಲಿ, ಬಾಲಕಿ ಕೋಚಿಂಗ್‍ಗೆ ತೆರಳುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಆಕೆಯನ್ನು ಅಪಹರಿಸಿದ್ದಾರೆ. ಬಳಿಕ ಅತ್ಯಾಚಾರ ಎಸಗಿ ಕ್ರೂರವಾಗಿ ಥಳಿಸಿದ್ದಾರೆ. ನಂತರ ಆಕೆಯನ್ನು ಸೇತುವೆಯಿಂದ ಎಸೆದಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಬಾಲಕಿಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ಕಂಡ ವ್ಯಕ್ತಿಯೊಬ್ಬರು ಆಕೆಯ ಮನೆಯವರಿಗೆ ಮಾಹಿತಿ ನೀಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು (Police) ತಿಳಿಸಿದ್ದಾರೆ.

ಆರೋಪಿಗಳ ಗುರುತು ಪತ್ತೆಯಾಗಿದ್ದು, ತಲೆಮರೆಸಿಕೊಂಡ ಆರೋಪಿಗಳನ್ನು ಬಂಧಿಸಲು ವಿಶೇಷ ಘಟಕವನ್ನು ರಚಿಸಲಾಗಿದೆ. ಆರೋಪಿಗಳ ವಿರುದ್ಧ ಮಕ್ಕಳ ಲೈಂಗಿಕ ಅಪರಾಧದಿಂದ ರಕ್ಷಣೆ (POCSO), ಮತ್ತು ಐಪಿಸಿ ಸೆಕ್ಷನ್ 376 (ಡಿ) (ಗ್ಯಾಂಗ್‍ರೇಪ್), 366 (ಅಪಹರಣ) ಮತ್ತು 323 (ಹಲ್ಲೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಾಲ ಮರುಪಾವತಿ ಮಾಡದ ಸ್ನೇಹಿತ – ವೀಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾದ ದಂಪತಿ

Share This Article