ಕ್ಲಬ್‌ನಲ್ಲಿ ಕೆಲಸ ಮಾಡಿದ್ದಕ್ಕೆ ಮಾಜಿ ಪ್ರೇಯಸಿಯ ಮೂಗನ್ನೇ ಕಚ್ಚಿದ ಭೂಪ!

Public TV
1 Min Read

ವಾಷಿಂಗ್ಟನ್: ಮಾಜಿ ಪ್ರೇಮಿ ಕ್ಲಬ್‌ನಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಆಕೆಯ ಮೂಗನ್ನೇ ಪ್ರೇಮಿ ಕಚ್ಚಿರುವ ಘಟನೆ ಅಮೇರಿಕಾದ (America) ಬೆಕ್ಸಾರ್‌ನಲ್ಲಿ ನಡೆದಿದೆ.

ಬೆಕ್ಸಾರ್‌ನಲ್ಲಿ (Bexar) ಯುವತಿಯೊಬ್ಬಳು ಮಾಜಿ ಪ್ರಿಯಕರನಿಗೆ ತಿಳಿಯದೇ ಕ್ಲಬ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಹಲವು ಸಮಯದ ನಂತರ ಯುವಕನಿಗೆ ಗೆಳತಿ ಕ್ಲಬ್‌ನಲ್ಲಿ ಕೆಲಸ ಮಾಡುತ್ತಿರುವ ವಿಚಾರ ಗೊತ್ತಾಗಿದೆ. ಇದನ್ನೂ ಓದಿ: ಪ್ರಧಾನಿ ಮೋದಿ, ಭಾರತದ ಜನತೆ ಬಳಿ ಕ್ಷಮೆಯಾಚಿಸಿ: ಮಾಲ್ಡೀವ್ಸ್‌ ಅಧ್ಯಕ್ಷರಿಗೆ ವಿಪಕ್ಷ ನಾಯಕರ ಒತ್ತಾಯ

ಈ ವಿಚಾರ ತಿಳಿದ ಬಳಿಕ ಪ್ರೇಯಸಿಗೆ ಕರೆ ಮಾಡಿ ವಿಚಾರಿಸಿದ್ದಾನೆ. ಆದರೆ ಯುವತಿ ಕರೆಯನ್ನು ತಿರಸ್ಕರಿಸಿದ್ದಾಳೆ. ಸಿಟ್ಟಾದ ಯುವಕ ಮನೆಗೆ ನುಗ್ಗಿ ಕಿಟಕಿಯನ್ನು ಒಡೆದು ಪ್ರೇಯಸಿಯನ್ನು ಪ್ರಶ್ನೆ ಮಾಡಿದ್ದಾನೆ. ಬಳಿಕ ಆಕೆಯ ಮೂಗನ್ನೇ ಕಚ್ಚಿ ಹುಚ್ಚಾಟ ಮಾಡಿದ್ದಾನೆ. ಒಂದು ವರ್ಷದ ಹಿಂದೆ ಈ ಘಟನೆ ನಡೆದಿದ್ದು ಈಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾಕ್ಕೆ 600 ಕೋಟಿ ಮೌಲ್ಯದ ಕೊಕೇನ್ ಅಕ್ರಮ ರಫ್ತು – ಭಾರತೀಯ ಮೂಲದ ದಂಪತಿಗೆ ಶಿಕ್ಷೆ

Share This Article