ನಾಪತ್ತೆಯಾಗಿದ್ದ ಜಾರ್ಖಂಡ್ ಸಿಎಂ 30 ಗಂಟೆ ಬಳಿಕ ಪತ್ತೆ!

Public TV
1 Min Read

– ಪತ್ನಿಗೆ ಪಟ್ಟ ಕಟ್ಟಲು ಸೋರೆನ್ ಕಸರತ್ತು

ರಾಂಚಿ: ಜಾರ್ಖಂಡ್ ರಾಜಕೀಯ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೀತಿದೆ. ಭೂಹಗರಣದಲ್ಲಿ ಸಿಲುಕಿರೋ ಸಿಎಂ ಹೇಮಂತ್ ಸೋರೆನ್ (Hemant Soren) ಬಂಧನ ಭೀತಿ ಎದುರಿಸ್ತಿದ್ದಾರೆ. ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ವಿಚಾರಣೆಗೆ ಧಾವಿಸಿದ್ದ ಸಂದರ್ಭದಲ್ಲಿ ಅಧಿಕೃತ ನಿವಾಸ ತೊರೆದಿದ್ದ ಸಿಎಂ ಹೇಮಂತ್ ಸೋರೆನ್ 30 ಗಂಟೆಗಳ ಕಾಲ ಯಾರ ಕೈಗೂ ಸಿಕ್ಕಿರಲಿಲ್ಲ.

ಈ ಸಂಬಂಧ ಸ್ವತಃ ರಾಜ್ಯಪಾಲರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ರು. ಬಿಜೆಪಿಗರಂತೂ (BJP) ಸಿಎಂ ಎಸ್ಕೇಪ್ ಆಗಿದ್ದಾರೆ. ರಣಹೇಡಿ ಸಿಎಂ ಎಂದು ಲೇವಡಿ ಮಾಡಿದ್ರು. ಸಿಎಂ ನಾಪತ್ತೆಯಾಗಿದ್ದಾರೆ. ಅವರನ್ನು ಹುಡುಕಿಕೊಟ್ಟವರಿಗೆ 11ಸಾವಿರ ನಗದು ಬಹುಮಾನ ಎಂದು ಮಾಜಿ ಸಿಎಂ ಬಾಬುಬಾಲ್ ಮರಂಡಿ ಪ್ರಕಟಣೆ ಹೊರಡಿಸಿದ್ರು. ಕೋರ್ಟ್‍ಗೆ ಹೇಬಿಯಸ್ ಕಾರ್ಪಸ್ ಅರ್ಜಿಗಳು ಕೂಡ ಸಲ್ಲಿಕೆ ಆದವು.

ಕೊನೆಗೆ ಮಂಗಳವಾರ ಮಧ್ಯಾಹ್ನ ಸಾರ್ವಜನಿಕವಾಗಿ ಕಾಣಿಸಿಕೊಂಡ ಹೇಮಂತ್ ಸೋರೆನ್, ಪಕ್ಷದ ಶಾಸಕರ ಜೊತೆ ತುರ್ತು ಸಭೆ ನಡೆಸಿದ್ರು. ಈ ಸಭೆಯಲ್ಲಿ ಸೋರೆನ್ ಪತ್ನಿ ಕಲ್ಪನಾ ಕೂಡ ಇದ್ದರು. ಹೀಗಾಗಿ ಹೇಮಂತ್ ಸೋರೆನ್ ತಮ್ಮ ಪತ್ನಿಯನ್ನು ಸಿಎಂ ಮಾಡಲು ಉದ್ದೇಶಿಸಿದ್ದಾರೆ. ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ತಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹಬ್ಬಿದೆ. ಆದರೆ ಆಕೆ ಸಿಎಂ ಆಗಲು ಜೆಎಂಎಂ ಶಾಸಕರು ಒಪ್ತಿಲ್ಲ ಎಂದು ಬಿಜೆಪಿ ಹೇಳಿಕೊಂಡಿದೆ. ಇದನ್ನೂ ಓದಿ: ED  ಕೈಗೆ ಸಿಗದ ಜಾರ್ಖಂಡ್ ಸಿಎಂ – ಹೇಮಂತ್ ಸೊರೆನ್  BMW ಕಾರು  ವಶಕ್ಕೆ

ಈ ಮಧ್ಯೆ ಹೇಮಂತ್ ಸೋರೆನ್ ದೆಹಲಿ ನಿವಾಸದಿಂದ ಎರಡು ಬಿಎಂಡಬ್ಲು ಕಾರು ಮತ್ತು 36 ಲಕ್ಷ ನಗದನ್ನು ಇಡಿ ಅಧಿಕಾರಿಗಳು ಸ್ವಾಧೀನಪಡಿಸಿಕೊಂಡಿದ್ದಾರೆ. ನಾಳೆ ಇಡಿ ಮುಂದೆ ವಿಚಾರಣೆಗೂ ಹಾಜರಾಗುತ್ತಿದ್ದಾರೆ. ಬುಧವಾರ ಸೋರೆನ್ ಅರೆಸ್ಟ್ ಆಗಬಹುದು ಎನ್ನಲಾಗುತ್ತಿದೆ. ಸಿಎಂ ನಿವಾಸದ ಸುತ್ತ ನಿಷೇಧಾಜ್ಞೆ ವಿಧಿಸಲಾಗಿದೆ. ರಾಂಚಿಯಲ್ಲಿ 7 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

Share This Article