ಸಿಎಂ ಸಿದ್ದರಾಮಯ್ಯಗೆ ಹಿಂದೂಗಳ ನಂಬಿಕೆ ಮೇಲೆ ಯಾಕಿಷ್ಟು ತಾತ್ಸಾರ? – ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಕ್ರೋಶ

Public TV
1 Min Read

ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಹಿಂದೂಗಳ ನಂಬಿಕೆ ಮೇಲೆ ಯಾಕಿಷ್ಟು ತಾತ್ಸಾರ? ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಪ್ರಶ್ನಿಸಿದ್ದಾರೆ.

ಮಂಡ್ಯದ ಕೆರಗೋಡಿನಲ್ಲಿ ಹನುಮಧ್ವಜ (Hanuma Dhwaja) ವಿವಾದಕ್ಕೆ ಸಂಬಂಧಿಸಿದಂತೆ ಎಕ್ಸ್‌ ಮೂಲಕ ಪ್ರತಿಕ್ರಿಯೆ ನೀಡಿರುವ ಸಚಿವ ಜೋಶಿ ಅವರು, ಹನುಮನ ನಾಡಿನಲ್ಲಿ ಹನುಮ ಧ್ವಜಕ್ಕೆ ಸಮ್ಮಾನ ಇಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೆರಗೋಡು ಹನುಮಧ್ವಜ ಇಳಿಸಿದ ಪ್ರಕರಣ; ಜ.29 ಕ್ಕೆ ಎಲ್ಲ ಜಿಲ್ಲೆಗಳಲ್ಲಿ ಬಿಜೆಪಿ ಪ್ರತಿಭಟನೆ

ಕಾಂಗ್ರೆಸ್ ಪಕ್ಷದ ತುಷ್ಟೀಕರಣ ನೀತಿಗೆ ಜನ ಉತ್ತರ ಕೊಡುವ ಕಾಲ ದೂರವಿಲ್ಲ ಎಂದು ಎಚ್ಚರಿಸಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟದ ಬಗ್ಗೆ ಪುಂಗಿ ಊದುವ ಕಾಂಗ್ರೆಸ್ ಕರ್ನಾಟಕದಲ್ಲಿ ಈಗ ಏನು ಮಾಡುತ್ತಿದೆ? ಎಂದು ಪ್ರಶ್ನಿಸಿದ್ದಾರೆ.

ಮಹಿಳೆಯರು ಕೂಡ ಬೀದಿಗಿಳಿದು ನಮ್ಮ ದೇವರ ರಕ್ಷಣೆಗೆ ನಿಲ್ಲೋ ಹಂತಕ್ಕೆ ಪರಿಸ್ಥಿತಿ ಬಂದಿದೆ. ಒಂದು ವರ್ಗದ ಓಲೈಕೆಗಾಗಿ ಕಾಂಗ್ರೆಸ್ ಎಷ್ಟು ಕೆಳಮಟ್ಟದ ರಾಜಕಾರಣ ಮಾಡುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ ಎಂದು ಜೋಶಿ ಟೀಕಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರದ ಅಮಲಿನಲ್ಲಿ ಹೀಗೆಲ್ಲ ಆಡ್ತಿದೆ: ಹನುಮಧ್ವಜ ತೆರವು ವಿಚಾರಕ್ಕೆ ಬಿವೈವಿ ಕಿಡಿ

ಹನುಮನ ನಾಡಿನಲ್ಲಿ ಹನುಮ ಧ್ವಜಕ್ಕೆ ಸಮ್ಮಾನವಿಲ್ಲ. ಇದು ಕಾಂಗ್ರೆಸ್ ಸರ್ಕಾರದ ಸ್ಪಷ್ಟ ನೀತಿ. ಈ ತುಷ್ಟೀಕರಣದ ಪರಮಾವಧಿಗೆ ಜನರೇ ಉತ್ತರ ಕೊಡುತ್ತಾರೆ. ಒಂದಂತೂ ಸತ್ಯ ನಿಮ್ಮ ಆಡಳಿತ ರಾಮ ರಾಜ್ಯ ಅಲ್ಲ ಅನ್ನೋದೇ ಗ್ಯಾರೆಂಟಿ ಎಂದು ಸಚಿವ ಜೋಶಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

Share This Article